ಇಂಡಿಯನ್ ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಅಭಿನೇತ್ರಿ ಅನುಷ್ಕಾ ಶರ್ಮಾ ಅತ್ಯಂತ ಜನಪ್ರಿಯ ದಂಪತಿ. ಅಪಾರ ಸಂಖ್ಯೆಯ ಅಭಿಮಾನಿಗಳ ಮೆಚ್ಚುಗೆಗೆ, ಪ್ರೀತಿಗೆ ಪಾತ್ರವಾದ ಜೋಡಿಯಿದು. ವಿರುಷ್ಕಾ ಎಂದೇ ಫೇಮಸ್. ಪರಸ್ಪರ ಪ್ರೀತಿ ವ್ಯಕ್ತಪಡಿಸುವ ರೀತಿಗೇನೆ ಸಪರೇಟ್ ಫ್ಯಾನ್ ಬೇಸ್ ಇದೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಭದ್ರ ಸ್ಥಾನ ಹೊಂದಿದ್ದು, ಈ ಜೋಡಿಯ ವೈಯಕ್ತಿಕ, ವೃತ್ತಿಪರ ವಿಷಯಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿರುತ್ತಾರೆ. ಅದರಂತೆ ಇದೀಗ ಕೊಹ್ಲಿ ಫೋನ್‌ನ ವಾಲ್‌ಪೇಪರ್ ನೆಟ್ಟಿಗರ ಗಮನ ಸೆಳೆದಿದೆ.
ಭಾರತೀಯ ಕ್ರಿಕೆಟ್ ತಂಡ ಟಿ-20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಮತ್ತು ತಂಡ ಮುಂಬೈನಲ್ಲಿ ವಿಜಯೋತ್ಸವ ಆಚರಿಸಿದೆ. ಜುಲೈ 4ರ ರಾತ್ರಿ ವಿರಾಟ್ ಲಂಡನ್‌ಗೆ ತೆರಳಿದ ವೇಳೆ, ಪಾಪರಾಜಿಗಳು ಕ್ರಿಕೆಟರ್ ಅನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದರು. ಎಂದಿನಂತೆ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿ ಹೆಚ್ಚಿನ ಸಂಖ್ಯೆಯ ಲೈಕ್ಸ್, ಕಾಮೆಂಟ್ಸ್ ಸ್ವೀಕರಿಸಿತು. ವಿಡಿಯೋಗಳಲ್ಲಿ ಅಭಿಮಾನಿಗಳು ಕ್ರಿಕೆಟರ್ನ ಫೋನ್‌ನ ವಾಲ್‌ಪೇಪರ್ ಅನ್ನು ಗಮನಿಸಿದ್ದಾರೆ. ಆದ್ರೆ ಅಭಿಮಾನಿಗಳು ನಿರೀಕ್ಷಿಸಿದಂತೆ ಕೊಹ್ಲಿಯ ಮುದ್ದಿನ ಮಡದಿ ಅನುಷ್ಕಾ ಶರ್ಮಾ ಅಥವಾ ಮಕ್ಕಳಾದ ವಾಮಿಕಾ – ಅಕಾಯ್ ಅವರ ಫೋಟೋಗಳನ್ನು ಒಳಗೊಂಡಿಲ್ಲ
ವಾಲ್‌ಪೇಪರ್ 1973ರಲ್ಲಿ ನಿಧನರಾದ ಪೂಜ್ಯ ಆಧ್ಯಾತ್ಮಿಕ ನಾಯಕ ನೀಮ್ ಕರೋಲಿ ಬಾಬಾ (Neem Karoli Baba) ಅವರ ಫೋಟೋವನ್ನು ಒಳಗೊಂಡಿದೆ. ಇದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಎಕ್ಸ್ ಸೇರಿದಂತೆ ವಿವಿಧ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಅಭಿಮಾನಿಗಳು, ನೆಟ್ಟಿಗರು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ
ವಿವಿಧ ನಗರಗಳಲ್ಲಿರುವ ನೀಮ್ ಕರೋಲಿ ಬಾಬಾ ಆಶ್ರಮಗಳಿಗೆ ಆಗಾಗ ಭೇಟಿ ನೀಡುವ ಮೂಲಕ ಈ ಜನಪ್ರಿಯ ದಂಪತಿ ದಂಪತಿ ಗಮನ ಸೆಳೆದಿದ್ದಾರೆ. ಬಾಬಾ ಮೇಲಿನ ಭಕ್ತಿಯನ್ನು ತೋರಿಸಿದ್ದಾರೆ. 1900ರಲ್ಲಿ ಲಕ್ಷ್ಮಣ್ ನಾರಾಯಣ ಶರ್ಮಾ ಆಗಿ ಜನಿಸಿದ ಬಾಬಾ ನೀಮ್ ಕರೋಲಿ ಅವರು 11 ನೇ ವಯಸ್ಸಿನಲ್ಲೇ ಆಧ್ಯಾತ್ಮಿಕ ಪ್ರಯಾಣ ಪ್ರಾರಂಭಿಸಿದರು. ಭಗವಾನ್ ಹನುಮಂತನ ಅನುಯಾಯಿಯಾಗಿ ಗುರುತಿಸಿಕೊಂಡರು. ಮಹಾರಾಜ್-ಜಿ ಎಂಬ ಬಿರುದನ್ನೂ ಪಡೆದಿದ್ದಾರೆ.