ಬಾಲಿವುಡ್ನಲ್ಲಿ ಮಿಂಚುತ್ತಿರುವ ಬೆಂಗಳೂರು ಬಾಲೆ ಮೇಧಾ ಯಾರು ಗೊತ್ತೆ?

ಬಾಲಿವುಡ್ನಲ್ಲಿ ಮಿಂಚುತ್ತಿರುವ ಬೆಂಗಳೂರು ಬಾಲೆ ಮೇಧಾ ಯಾರು ಗೊತ್ತೆ?

ಬೆಂಗಳೂರು : ಬೆಂಗಳೂರಿನಲ್ಲಿ ಜನಿಸಿ ಅಥವಾ ಇಲ್ಲಿ ಬೆಳೆದು, ಮಾಡೆಲಿಂಗ್ ಮಾಡಿ ಆ ನಂತರ ಬಾಲಿವುಡ್ ಸೇರಿದಂತೆ ಬೇರೆ ಬೇರೆ ಚಿತ್ರರಂಗಗಳಲ್ಲಿ ದೊಡ್ಡ ಹೆಸರು ಮಾಡಿರುವ ಹಲವು ನಟಿಯರು ಇದ್ದಾರೆ. ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ರಶ್ಮಿಕಾ ಮಂದಣ್ಣ ಇನ್ನೂ ಹಲವರು ಬೆಂಗಳೂರಿನಿಂದ ಹೋಗಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡುತ್ತಿದ್ದಾರೆ. ಇದೇ ಸಾಲಿಗೆ ಸೇರುತ್ತಿದ್ದಾರೆ ಮತ್ತೊಬ್ಬ ನಟಿ ಮೇಧಾ.

ಕನ್ನಡದ ನಟಿಯರು ಬೇರೆ ಬೇರೆ ಚಿತ್ರರಂಗಗಳಲ್ಲಿ ಸ್ಟಾರ್ಗಳಾಗಿ ಮೆರೆಯುತ್ತಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತ ಹಾಗೂ ಬಾಲಿವುಡ್ ಎರಡರಲ್ಲೂ ಸ್ಟಾರ್ ಆಗಿ ಆಗಿದ್ದಾರೆ. ಇತ್ತೀಚೆಗೆ ಶ್ರೀಲೀಲಾ ಸಹ ಬಾಲಿವುಡ್ನಲ್ಲಿ ಭಾರಿ ಬೇಡಿಕೆ ಕುದುರಿಸಿಕೊಂಡಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ಕಳೆದ ಒಂದು ದಶಕದಿಂದಲೂ ಬಾಲಿವುಡ್ನಲ್ಲಿ ಸ್ಟಾರ್ ನಟಿ. ಬೆಂಗಳೂರಿನವರೇ ಆಗಿ ಬಿಟ್ಟಿದ್ದ ಅನುಷ್ಕಾ ಶರ್ಮಾ ಸಹ ಬಾಲಿವುಡ್ನಲ್ಲಿ ಸ್ಟಾರ್ ಆಗಿ ಮೆರೆದಿದ್ದರು. ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ ಅವರುಗಳು ಸಹ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಮತ್ತೊಬ್ಬ ಬೆಂಗಳೂರಿನ ಬೆಡಗಿ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಅದುವೇ ಮೇಧಾ ರಾಣಾ.

ಅನುಷ್ಕಾ ಶರ್ಮಾ ರೀತಿ ಮೇಧಾ ರಾಣಾ ಸಹ ಜನಿಸಿದ್ದು ಉತ್ತರ ಭಾರತದಲ್ಲಿ ಆದರೆ ಬಾಲ್ಯ, ವಿದ್ಯಾಭ್ಯಾಸ ನಡೆದಿದ್ದೆಲ್ಲವೂ ಬೆಂಗಳೂರಿನಲ್ಲಿ. ಮಾಡೆಲಿಂಗ್ ಮಾಡುತ್ತಿದ್ದ ಮೇಧಾ ರಾಣಾ, 2021 ರಲ್ಲಿ ಮ್ಯೂಸಿಕ್ ವಿಡಿಯೋನಲ್ಲಿ ಕಾಣಿಸಿಕೊಂಡರು. ಬಳಿಕ 2022 ರಲ್ಲಿ ‘ಲಂಡನ್ ಫೈಲ್ಸ್’ ವೆಬ್ ಸರಣಿ ಮೂಲಕ ಬಾಲಿವುಡ್ ಪ್ರವೇಶಿಸಿದರು. ಅದೇ ವರ್ಷ ಬಂದ ಡಾಕ್ಯುಮೆಂಟರಿ ‘ಡಾನ್ಸಿಂಗ್ ಆನ್ ದಿ ಗ್ರೇವ್’ ನಲ್ಲಿ ಸಹ ಕಾಣಿಸಿಕೊಂಡರು. ಬಳಿಕ ಮೇಧಾ ರಾಣಾ, ಇರ್ಫಾನ್ ಖಾನ್ ಪುತ ನಾಯಕನಾಗಿದ್ದ ‘ಫ್ರೈಡೇನೈಟ್ ಪ್ಲ್ಯಾನ್ಸ್’ ಸಿನಿಮಾನಲ್ಲಿ ನಟಿಸಿದರು. ಬಳಿಕ ಅಮೆಜಾನ್ ಮಿನಿ ಟಿವಿಯಲ್ಲಿ ಪ್ರಸಾರವಾದ ‘ಇಷ್ಕ್ ಇನ್ ದಿ ಏರ್’ ನಲ್ಲಿ ನಾಯಕಿಯಾದರು.

ಇದೀಗ ತಮ್ಮ ಅಭಿನಯ ಪ್ರತಿಭೆ, ಸೌಂದರ್ಯದಿಂದ ದೊಡ್ಡ ನಿರ್ಮಾಣ ಸಂಸ್ಥೆಯ ಕಣ್ಣಿಗೆ ಬಿದ್ದಿರುವ ಮೇಧಾ ರಾಣಾ, ಬಾಲಿವುಡ್ನ ಸ್ಟಾರ್ ನಟ ವರುಣ್ ಧವನ್ ನಟನೆಯ ಭಾರಿ ಬಜೆಟ್ ಸಿನಿಮಾ ‘ಬಾರ್ಡರ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾನಲ್ಲಿ ಅವರು ವರುಣ್ ಧವನ್ಗೆ ನಾಯಕಿಯಂತೆ. ಈ ಸಿನಿಮಾದ ಬಳಿಕ ಮೇಧಾರ ಅದೃಷ್ಟ ಖುಲಾಯಿಸುವ ಸಾಧ್ಯತೆ ದಟ್ಟವಾಗಿದೆ. ಅನುರಾಗ್ ಸಿಂಗ್ ನಿರ್ದೇಶನ ಮಾಡಿರುವ ಈ ಸಿನಿಮಾನಲ್ಲಿ ವರುಣ್ ಧವನ್ ಜೊತೆಗೆ ಸನ್ನಿ ಡಿಯೋಲ್ ಸಹ ನಟಿಸಿದ್ದಾರೆ.

Leave a Reply

Your email address will not be published. Required fields are marked *