ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ರಾಜಕೀಯದ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಸಲಿಗೆ ಕಳೆದ ವಿಧಾನಸಭೆ ಚುನಾವಣೆ ಶುರುವಾಗುವ ಮುಂಚೆ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಈಗ ಪೂರ್ತಿ ಮಾಡುತ್ತಿದ್ದಾರೆ. ಈಗಾಗಲೇ ‘ಹರಿ ಹರ ವೀರ ಮಲ್ಲು’ ಸಿನಿಮಾ ಮುಗಿಸಿರುವ ಪವನ್ ಕಲ್ಯಾಣ್ ಇದೀಗ ‘ಓಜಿ’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳನ್ನು ಮುಗಿಸಿಕೊಡುತ್ತಿದ್ದಾರೆ. ಇದೀಗ ಪವನ್ ಕಲ್ಯಾಣ್ಗಾಗಿ ಆಂಧ್ರದ ಮತ್ತೊಬ್ಬ ಪವರ್ಫುಲ್ ರಾಜಕಾರಣಿ ನಟ, ಬಾಲಕೃಷ್ಣ ಅವರು ದಾರಿ ಬಿಟ್ಟುಕೊಟ್ಟಿದ್ದಾರೆ.
ನಂದಮೂರಿ ಬಾಲಕೃಷ್ಣ ಸಹ ಆಂಧ್ರ ಪ್ರದೇಶದ ಜನಪ್ರಿಯ ರಾಜಕಾರಣಿ, ಹಿಂದೂಪುರದ ಹಾಲಿ ಶಾಸಕ ಸಹ ಆಗಿರುವ ಬಾಲಕೃಷ್ಣ, ಸಿನಿಮಾ ಹಾಗೂ ರಾಜಕೀಯವನ್ನು ಜೊತೆ-ಜೊತೆಯಾಗಿ ನಿಭಾಯಿಸುತ್ತಿದ್ದಾರೆ. ಆದರೆ ಸಿನಿಮಾ ರಂಗದಲ್ಲಿ ದೊರೆತ ಯಶಸ್ಸು ಅವರಿಗೆ ರಾಜಕೀಯದಲ್ಲಿ ಇನ್ನೂ ದೊರೆತಿಲ್ಲ ಎನ್ನಬೇಕು, ಮೂರು ಬಾರಿ ಗೆದ್ದರು ಈ ವರೆಗೆ ಸಚಿವರಾಗಿಲ್ಲ. ಈ ಬಾರಿ ಅವಕಾಶ ಇತ್ತಾದರೂ ಪವನ್ ಕಲ್ಯಾಣ್ ಇಂದಾಗಿ ಬಾಲಯ್ಯಗೆ ಸಚಿವ ಸ್ಥಾನ ಸಿಗಲಿಲ್ಲ ಎನ್ನಲಾಗುತ್ತಿದೆ.
ಅತ್ತ ರಾಜಕೀಯದಲ್ಲಿ ಪವನ್ಗಾಗಿ ಸಚಿವ ಸ್ಥಾನ ವಂಚಿತರಾದ ಬಾಲಯ್ಯ, ಇತ್ತ ಚಿತ್ರರಂಗದಲ್ಲಿಯೂ ಸಹ ಈಗ ಪವನ್ ಕಲ್ಯಾಣ್ಗಾಗಿ ತಮ್ಮ ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಿಕೊಂಡಿದ್ದಾರಂತೆ. ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ಸೆಪ್ಟೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಅದೇ ದಿನ ಬಾಲಯ್ಯ ನಟನೆಯ ‘ಅಖಂಡ 2’ ಸಿನಿಮಾದ ಬಿಡುಗಡೆಗೂ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಈಗ ಪವನ್ ಸಿನಿಮಾ ಬರುತ್ತಿರುವ ಕಾರಣ, ಬಾಲಯ್ಯನ ಸಿನಿಮಾ ಮುಂದೂಡಲ್ಪಟ್ಟಿದೆ.
‘ಅಖಂಡ’ ಸಿನಿಮಾದ ಭರ್ಜರಿ ಗೆಲುವಿನ ಬೆನ್ನಲ್ಲೆ ಇದೀಗ ‘ಅಖಂಡ 2’ ಸಿನಿಮಾ ಮಾತನಾಡಿದ್ದು, ಬೋಯಪಾಟಿ ಸೀನು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಟೀಸರ್ ಒಂದು ಈಗಾಗಲೇ ಬಿಡುಗಡೆ ಆಗಿ ಸಖತ್ ವೈರಲ್ ಆಗಿದೆ. ಬಾಲಯ್ಯ ಅಘೋರಿಯ ಪಾತ್ರದಲ್ಲಿ ಈ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾದ ಕೆಲವು ಭಾಗಗಳ ಚಿತ್ರೀಕರಣವನ್ನು ಮಹಾಕುಂಭ ಮೇಳದಲ್ಲಿ ಚಿತ್ರೀಕರಣ ಮಾಡಲಾಗಿದೆ.
ಇನ್ನು ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾದ ಚಿತ್ರೀಕರಣವನ್ನು 2023 ರಲ್ಲೇ ಪ್ರಾರಂಭಿಸಲಾಗಿತ್ತು. ಆದರೆ ಪವನ್ ಕಲ್ಯಾಣ್ ಸಕ್ರಿಯ ರಾಜಕೀಯದಲ್ಲಿ ಬ್ಯುಸಿ ಆದ ಕಾರಣ ಸಿನಿಮಾದ ಚಿತ್ರೀಕರಣ ತಡವಾಯ್ತು. ಇದೀಗ ತಮ್ಮ ಬ್ಯುಸಿ ರಾಜಕೀಯ ಕೆಲಸಗಳ ನಡುವೆ ಪವನ್ ಕಲ್ಯಾಣ್ ‘ಓಜಿ’ ಸಿನಿಮಾದ ಚಿತ್ರೀಕರಣ ಪೂರ್ತಿ ಮಾಡಿದ್ದಾರೆ. ಸಿನಿಮಾ ಅನ್ನು ಸೆಪ್ಟೆಂಬರ್ 25ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.
‘ಓಜಿ’ ಸಿನಿಮಾವು ಅಂಡರ್ವಲ್ಡ್ ಕತೆಯನ್ನು ಒಳಗೊಂಡಿದ್ದು, ಸಿನಿಮಾನಲ್ಲಿ ಪವನ್ ಕಲ್ಯಾಣ್ ಪುತ್ರ ಸಹ ನಟಿಸಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ನಲ್ಲಿ ಬಿಡುಗಡೆ ಆಗುತ್ತಿರುವ ಕಾರಣ ಬಾಲಯ್ಯ ನಟನೆಯ ‘ಅಖಂಡ 2’ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.
For More Updates Join our WhatsApp Group :