ನ್ಯೂಯಾರ್ಕ್:ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ಯುನೈಟೆಡ್ ನೇಶನ್ಸ್ (ಯುಎನ್) ಪ್ರಧಾನ ಕಚೇರಿಗೆ ಆಗಮಿಸಿ ಎಸ್ಕಲೇಟರ್ ಹತ್ತಿದ ಕ್ಷಣದಲ್ಲೇ ಅದು ಏಕಾಏಕಿ ನಿಂತುಹೋಗಿರುವ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಘಟನೆಯ ಬಳಿಕ ಶ್ವೇತಭವನದಿಂದಲೇ ಅಧಿಕೃತವಾಗಿ ತನಿಖೆಗೆ ಆಗ್ರಹಿಸಲಾಗಿದೆ.
ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಈ ಅಪರೂಪದ ತೊಂದರೆಯು ಟ್ರಂಪ್ ದಂಪತಿ ಎಸ್ಕಲೇಟರ್ ಹತ್ತಿದ ಕೂಡಲೇ ಸಂಭವಿಸಿದ್ದು, ಗಾಬರಿಗೊಂಡು ಅವರು ಇಳಿಜಾರಿನ ಮೆಟ್ಟಿಲುಗಳಲ್ಲೇ ನಡೆದು ಒಳಗೆ ಪ್ರವೇಶಿಸಿದರು. ಈ ಘಟನೆ ಬಗ್ಗೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಮಾತನಾಡಿ, “ಇದು ಯಾದೃಚ್ಛಿಕವಾಗಿದ್ದರೆ ಪರವಾಗಿಲ್ಲ. ಆದರೆ ಉದ್ದೇಶಪೂರ್ವಕವಾಗಿದ್ದರೆ ಖಂಡಿತ ಪರಿಶೀಲನೆ ಅಗತ್ಯ,” ಎಂದು ಸ್ಪಷ್ಟಪಡಿಸಿದ್ದಾರೆ.
ಶ್ವೇತಭವನದ ಕಠಿಣ ನಿಲುವು:
“ಯಾವುದೇ ಭದ್ರತಾ ಲೋಪಕ್ಕೆ ಅವಕಾಶ ನೀಡಲಾಗದು. ಇದು ವಿಪರೀತ ಗಂಭೀರ ವಿಚಾರ. ಇದರ ಹಿಂದೆ ಯಾರಾದರೂ ಉದ್ದೇಶಪೂರ್ವಕವಾಗಿ ಇದನ್ನು ಮಾಡಿದರೆ, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು,” ಎಂದು ಲೀವಿಟ್ ಹೇಳಿಕೆ ನೀಡಿದ್ದಾರೆ.
ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ:
ಈ ಘಟನೆ ಸಂಬಂಧಿಸಿದ ವಿಡಿಯೋ ಹಾಗೂ ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು “ಎಸ್ಕಲೇಟರ್‌ಗೆ ಟ್ರಂಪ್ ಹೆದರೆತಾಗ್ತಾ?” ಎಂದು ವ್ಯಂಗ್ಯವಾಡಿದರೆ, ಇನ್ನೂ ಕೆಲವರು ಇದನ್ನು ತಂತ್ರಜ್ಞಾನ ದೋಷ ಎಂದು ಮೌನ ಸಾಧಿಸಿದ್ದಾರೆ.
For More Updates Join our WhatsApp Group :
