ಬೆಂಗಳೂರು : ಐಟಿ ಕೇಂದ್ರವಾಗಿ, ಮಟ್ರೋ ಸಂಚಾರವಿರುವ ಮಹಾನಗರವಾಗಿ ದಿನೇ ದಿನೆ ಬೆಳವಣಿಗೆ ಹೊಂದುತ್ತಿರುವ ರಾಜಧಾನಿ ಬೆಂಗಳೂರು ದುಬಾರಿಯು ಆಗುತ್ತಿದೆ. ಹೌದು, ಇಲ್ಲಿ ನೆಲೆಗೊಳ್ಳಬೇಕಾದರೆ ಲಕ್ಷ ಲಕ್ಷ ಸಂಬಳ ಇದ್ದರೆ ಮಾತ್ರವೇ ಸಾಧ್ಯ ಎಂಬಂತಹ ಸ್ಥಿತಿ ಎದುರಾಗಿದೆ.
ಇದಕ್ಕೆ ಪ್ರಮುಖ ಕಾರಣವೇನೆಂದರೆ ನಮ್ಮ ಮೆಟ್ರೋ ಜಾಲ ವಿಸ್ತರಣೆ ಆಗುತ್ತಿದೆ. ವಿಸ್ತರಣೆ ಆದಂತೆಲ್ಲ ಮೆಟ್ರೋ ಲೈನ್ ಹೋಗಿರುವ ಅಕ್ಕಪಕ್ಕದ ಮನೆ ಬಾಡಿಗೆ, ಆಸ್ತಿ, ಕಟ್ಟಡ ಜೊತೆಗೆ ಬದುಕು ದುಬಾರಿ ಆಗುತ್ತಿದೆ. ಈ ಸಾಲಿಗೆ ಮೆಟ್ರೋ ಹಳದಿ ಮಾರ್ಗವು ಹೊಸದಾಗಿ ಸೇರ್ಪಡೆಗೊಳ್ಳಲಿದೆ.
ಹೌದು, ಬಹುನಿರೀಕ್ಷೆಯ ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗವು ಈ ವರ್ಷಾಂತ್ಯಕ್ಕೆ ತೆರೆದುಕೊಳ್ಳಲಿದೆ. ಈ ಸಂಬಂಧ ಆರ್ವಿ ರಸ್ತೆ ಮತ್ತು ಬೊಮ್ಮಸಂದ್ರವರೆಗಿನ ಈ ಹಳದಿ ಮಾರ್ಗದಲ್ಲಿ ಮನೆ ಬಾಡಿಗೆ, ಆಸ್ತಿಗಳ ಮೌಲ್ಯ ಹೆಚ್ಚಾಗುತ್ತಲೇ ಇದೆ. ಇದು ಮಧ್ಯಮ ವರ್ಗದವರಿಗೆ ಶಾಕ್ ನೀಡುತ್ತಿದೆ.
ಅಂತಿಮ ಹಂತದತ್ತ ಹಳದಿ ಮಾರ್ಗದ ಕೆಲಸ
ಸದ್ಯ ಬೆಂಗಳೂರು ಮೆಟ್ರೋ ಹಳದಿ ಮಾರ್ಗದಲ್ಲಿ ಕಳೆದ ಕೆಲವು ದಿನಗಳಿಂದ ಸಿಗ್ನಲಿಂಗ್ ಪರೀಕ್ಷೆಗಳು ಆರಂಭಗೊಂಡಿದ್ದವು. ಆರಂಭ ರೈಲುಗಳು ಸಂಚಾರ ಪರೀಕ್ಷೆ ನಡೆಯಿತು. ಇದರೊಂದಿಗೆ ವಯಡಕ್ಟ್ ಮೂಲಕ ಹಳಿಗೆ ವಿದ್ಯುತ್ ಪೂರೈಕೆ ನಂತರ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸಲಾಯಿತು.
ಜುಲೈ 3ರಿಂದ ಬಿಎಂಟಿಸಿ ಹೊಸ ಮಾರ್ಗ ಆರಂಭ, ಮೆಟ್ರೋ ನಿಲ್ದಾಣಕ್ಕೆ ಬಸ್
ಬೆಂಗಳೂರು ಇಡೀ 73 ಕಿಲೋ ಮೀಟರ್ ಜಾಲದಲ್ಲಿಯೇ ಈ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲುಗಳನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪರಿಚಯಿಸಿದೆ. ಇದರ ಬೆನ್ನಲ್ಲೆ ಮೊದಲ ಚಾಲಕ ರಹಿತ ರೈಲಿನ ಡೈನಾಮಿಕ್ ಸಿಗ್ನಲಿಂಗ್ ಪರೀಕ್ಷೆಗಳು ಆರ್ ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಸೋಮವಾರ (ಜುಲೈ 1) ಆರಂಭಗೊಂಡಿದೆ.
ಸಿಗ್ನಲಿಂಗ್ ಪರೀಕ್ಷೆಗೆ 2.5 ತಿಂಗಳು ಬೇಕು
ಈ ಕುರಿತು BMRCL ಅಧಿಕಾರಿಗಳೇ ಖುದ್ದು ಮಾಹಿತಿ ನೀಡಿದ್ದು, ಹಳದಿ ಮಾರ್ಗದಲ್ಲಿ ಕಳೆದ ತಿಂಗಳು ಜೂನ್ 13 ರಿಂದ ಪ್ರಾಥಮಿಕ ಚಟುವಟಿಕೆಗಳು ಆರಂಭಿಸಲಾಗಿದೆ. ಈ ಮೊದಲೇ ಯೋಜಿಸಿದಂತೆ, ಇದರಲ್ಲಿ ಹಲವು ರೀತಿಯ ಪರೀಕ್ಷೆಗಳನ್ನು ನಡೆಸಬೇಕಿದ್ದು, ಇದು ಪೂರ್ಣಗೊಳ್ಳಲು 2.5 ತಿಂಗಳು ಬೇಕಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಾವಾಗ ಸಿಗ್ನಲಿಂಗ್ ಪರೀಕ್ಷೆ ಪೂರ್ಣಗೊಳ್ಳಲಿದೆ ಎಂದು ಖಚಿತ ಮಾಹಿತಿಗೆ ಇನ್ನೂ ಒಂದೂವರೆ ತಿಂಗಳು ಕಾಯಬೇಕಿದೆ. ಸದ್ಯ ಮುಂದಿನ ಸುಮಾರು 15 ದಿನ ಏಕೀಕರಣ ಪರೀಕ್ಷೆಗಳು ನಡೆಯಲಿವೆ. ಬಹು ರೈಲು ಸಂಚಾರ, ಸಿಗ್ನಲಿಂಗ್ ಸುಸೂತ್ರ ಪೂರೈಕೆಯ ಪರೀಕ್ಷೆಗಳಿಗೆ ಮತ್ತೆ 10 ದಿನ ಹಿಡಿಯುತ್ತದೆ ಎಂದು ಅವರು ತಿಳಿಸಿದರು.
ಸಿಗ್ನಲಿಂಗ್ ಪರೀಕ್ಷೆ ಆದ ಬಳಿಕ, ಅಂತಿಮ ಪ್ರಾಯೋಗಿಕ ಸಂಚಾರ ಎಲ್ಲವು ಯಶಸ್ವಿಯಾದ ಬಳಿಕ ಬಹುನಿರೀಕ್ಷೆಯ ಈ ಮೆಟ್ರೋ ಹಳದಿ ಮಾರ್ಗವು ಡಿಸೆಂಬರ್ 2024ರ ವೇಳೆಗೆ ವಾಣಿಜ್ಯ ಕಾರ್ಯಾಚರಣೆ ನಡೆಸಲಿದೆ. ಇದು ಡ್ರೈವರ್ ಲೆಸ್ ರೈಲು ಆದರೂ ಸಹ ಆರಂಭಿಕವಾಗಿ ಚಾಲಕ ಸಹಿತವಾಗಿ ಓಡಿಸಲು BMRCL ತೀರ್ಮಾನಿಸಿದೆ.
ಸದ್ಯ ಬಹುದಿನಗಳಿಂದ ಕಾಯುತ್ತಿದ್ದ ಬೆಂಗಳೂರ ಮಂದಿಗೆ ನಮ್ಮ ಮೆಟ್ರೋ ಅಧಿಕಾರಿಗಳು ಶುಭ ಸುದ್ದಿಯನ್ನೇ ಕೊಟ್ಟಿದ್ದಾರೆ. ಮುಂದಿನ ಕೇಲವೇ ತಿಂಗಳಲ್ಲಿ ಲಕ್ಷಾಂತರ ಜನರು ಈ ಹಳದಿ ಮಾರ್ಗದಲ್ಲಿ ಸಂಚಾರ ನಡೆಸಲಿದ್ದಾರೆ.