ಕೋರ್‌ಮಂಗಲ RTO ನಲ್ಲಿ ಭ್ರಷ್ಟಾಚಾರ ಬಿಚ್ಚಿಬಿಟ್ಟ ದಾಖಲೆಗಳು.

ಕೋರ್‌ಮಂಗಲ RTO ನಲ್ಲಿ ಭ್ರಷ್ಟಾಚಾರ ಬಿಚ್ಚಿಬಿಟ್ಟ ದಾಖಲೆಗಳು.

ಸಾವಿರಾರು ವಾಹನಗಳಿಗೆ ಫಿಟ್ನೆಸ್ ಎಫ್ಸಿ

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಕೋರಮಂಗಲ ಆರ್‌ಟಿಒ ಕಚೇರಿಯಲ್ಲಿ ನಡೆದ ಭಾರೀ ಭ್ರಷ್ಟಾಚಾರ ಸದ್ದು ಮಾಡಿತ್ತು. ವಾಹನಗಳನ್ನು ತಪಾಸಣೆ ಮಾಡದೇ ಸಾವಿರಾರು ಹೊರ ರಾಜ್ಯದ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೆಟ್ (ಎಫ್‌ಸಿ) ನೀಡಿರುವುದು ರಾಜ್ಯ ಸಾರಿಗೆ ಇಲಾಖೆ ಗಮನಕ್ಕೆ ಬಂದಿದ್ದಲ್ಲದೇ ಇದೀಗ ದಾಖಲೆ ಸಮೇತ ಕೋರಮಂಗಲ ಆರ್‌ಟಿಒ ಗೋಲ್ಮಾಲ್ ಬಹಿರಂಗಗೊಂಡಿದೆ.

40 ಅಲ್ಲ 10 ಸಾವಿರಕ್ಕೂ ಹೆಚ್ಚು ವಾಹನಗಳಿಗೆ ಅನಧಿಕೃತ ಎಫ್‌ಸಿ

ಮಹಾರಾಷ್ಟ್ರ, ಕೇರಳ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 10,022 ವಾಹನಗಳಿಗೆ ಕಳೆದ ಆರು ತಿಂಗಳಲ್ಲಿ ಅನಧಿಕೃತವಾಗಿ ಎಫ್‌ಸಿ ನೀಡಲಾಗಿದೆ ಎಂದು ಟಿವಿ9 ಗೆ ದಾಖಲೆಗಳು ದೊರೆತಿದ್ದು, ಈ ಅಕ್ರಮದಲ್ಲಿ ನಾಲ್ವರು ಮೋಟಾರು ವಾಹನ ನಿರೀಕ್ಷಕರು ಭಾಗಿಯಾಗಿರುವುದು ದೃಢಪಟ್ಟಿದೆ.

ಕಳೆದ ತಿಂಗಳು ಗುಜರಾತಿನ 41 ಶಾಲಾ ವಾಹನಗಳಿಗೆ ಎಫ್‌ಸಿ ನೀಡುವ ವೇಳೆ ತಪಾಸಣೆ ಮಾಡದೇ ಅನಧಿಕೃತ ಕಾರ್ಯ ನಡೆಸಿದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿ ನಿಸಾರ್ ಅಹಮದ್ ಅಮಾನತುಗೊಂಡಿದ್ದರು. ಆದರೆ ಇದೀಗ ಬೆಳಕಿಗೆ ಬಂದ ದಾಖಲೆಗಳ ಪ್ರಕಾರ, ಕೇವಲ 41 ವಾಹನಗಳಷ್ಟೇ ಅಲ್ಲ, ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಹೊರ ರಾಜ್ಯದ ವಾಹನಗಳಿಗೆ ಸಹ ತಪಾಸಣೆ ನಡೆಸದೆ ಎಫ್‌ಸಿ ನೀಡಲಾಗಿದೆ. ಈ ಎಲ್ಲಾ ಅಕ್ರಮಗಳ ಕುರಿತು ವಕೀಲ ನಟರಾಜ್ ಶರ್ಮಾ ರಾಜ್ಯ ಸಾರಿಗೆ ಇಲಾಖೆಯ ಆಯುಕ್ತರಿಗೆ ದಾಖಲೆ ಸಮೇತ ದೂರು ನೀಡಿದ್ದು, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

 ಕೋರಮಂಗಲ ಆರ್ಟಿಓದಲ್ಲಿ ತಪಾಸಣೆ ಮಾಡದೆ ಎಫ್ಸಿ ನೀಡಿದ ದಾಖಲೆ

  1.  2025ರ ಆಗಸ್ಟ್ ನಲ್ಲಿ – 646 ವಾಹನಗಳಿಗೆ ಎಫ್ಸಿ ನೀಡಲಾಗಿದೆ. ಹಿರಿಯ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್- ಮಹಾರಾಷ್ಟ್ರಮತ್ತು ಗುಜರಾತಿನ 636 ವಾಹನಗಳಿಗೆ ಎಫ್ಸಿ ನೀಡಿದ್ದಾರೆ. ಎ.ಎ. ಖಾನ್.( ಹಿರಿಯ ಮೋಟಾರು ವಾಹನ ನಿರೀಕ್ಷಕ ) ಮಹಾರಾಷ್ಟ್ರದ 10 ವಾಹನಗಳಿಗೆ ಎಫ್ಸಿ ನೀಡಿದ್ದಾರೆ.
  2.  ಸೆಪ್ಟೆಂಬರ್ – 1,168 ವಾಹನಗಳಿಗೆ ಎಫ್ಸಿ ನೀಡಿದ್ದಾರೆ. ನಿಸಾರ್ ಅಹಮದ್, (ಮಹಾರಾಷ್ಟ್ರ, ಗುಜರಾತ್- 1149 ವಾಹನಗಳಿಗೆ ಎಫ್ಸಿ ನೀಡಿದ್ದಾರೆ. ಎ.ಎ. ಖಾನ್- ( ಮಹಾರಾಷ್ಟ್ರ,ಕೇರಳ, ಗುಜರಾತ್ – 19 ವಾಹನಗಳಿಗೆ ಎಫ್ಸಿ ನೀಡಿದ್ದಾರೆ )
  3.  ಅಕ್ಟೋಬರ್- 1,813 ವಾಹನಗಳಿಗೆ ಎಫ್ಸಿ ನೀಡಿದ್ದಾರೆ. ನಿಸಾರ್ ಅಹಮದ್- (ಮಹಾರಾಷ್ಟ್ರ ಮತ್ತು ಗುಜರಾತ್ -1802 ವಾಹನಗಳಿಗೆ ಎಫ್ಸಿ ನೀಡಿದ್ರೆ, ಎ.ಎ.ಖಾನ್ ( ಕೇರಳ ಮತ್ತು ಮಹಾರಾಷ್ಟ್ರದ – 11 ವಾಹನಗಳಿಗೆ ಎಫ್ಸಿ ನೀಡಿದ್ದಾರೆ.
  4.  ನವೆಂಬರ್- 3,383 ವಾಹನಗಳಿಗೆ ಎಫ್ಸಿ ನೀಡಲಾಗಿದೆ. ನಿಸಾರ್ ಅಹಮದ್- ( ಮಹಾರಾಷ್ಟ್ರ, ಗುಜರಾತ್ -3381 ವಾಹನಗಳಿಗೆ ಎಫ್ಸಿ ನೀಡಿದ್ದಾರೆ. ನರಸಿಂಹ ರೆಡ್ಡಿ- ಮೋಟಾರು ವಾಹನ ನಿರೀಕ್ಷಕ. ( ಮಹಾರಾಷ್ಟ್ರದ – 2 ವಾಹನಗಳಿಗೆ ಎಫ್ಸಿ ನೀಡಿದ್ದಾರೆ )
  5.  ಡಿಸೆಂಬರ್- 2,057 ವಾಹನಗಳಿಗೆ ಎಫ್ಸಿ ನೀಡಲಾಗಿದೆ. ನಿಸಾರ್ ಅಹಮದ್- 2,054 ( ಮಹಾರಾಷ್ಟ್ರ, ಗುಜರಾತ್ ) ಎ.ಎ. ಖಾನ್ – 1 ( ಕೇರಳ ) ಹೆಚ್.ಎಂ ಮಂಜುನಾಥ್- 2 ( ಮಹಾರಾಷ್ಟ್ರ,)
  6.  2026- ಜನವರಿ- 955 ವಾಹನಗಳಿಗೆ ಎಫ್ಸಿ ನೀಡಲಾಗಿದೆ. ನಿಸಾರ್ ಅಹಮದ್- 952 ( ಮಹಾರಾಷ್ಟ್ರ, ಗುಜರಾತ್ ) ಎ.ಎ. ಖಾನ್- 3 ( ಮಹಾರಾಷ್ಟ್ರ ಮತ್ತು ಕೇರಳ, )

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *