ಕಡಿಮೆ ರಕ್ತದೊತ್ತಡವೂ ಹೃದಯಾಘಾತಕ್ಕೆ ಕಾರಣ?

ಕಡಿಮೆ ರಕ್ತದೊತ್ತಡವೂ ಹೃದಯಾಘಾತಕ್ಕೆ ಕಾರಣ?

ಹೊಸ ಸಂಶೋಧನೆ ಎಚ್ಚರಿಕೆ ನೀಡುತ್ತದೆ.

ಸಾಮಾನ್ಯವಾಗಿ ಅಧಿಕ ರಕ್ತದೊತ್ತಡವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಬುದು ತಿಳಿದ ವಿಚಾರ, ಆದರೆ ಹೊಸ ಸಂಶೋಧನೆಯ ಪ್ರಕಾರ, ಹೃದಯ ಸಂಬಂಧಿ ಕಾಯಿಲೆ ಇರುವವರಲ್ಲಿ, ಕಡಿಮೆ ರಕ್ತದೊತ್ತಡ  ಕೂಡ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಹೌದು, ಲಂಡನ್‌ನ ಇಂಪೀರಿಯಲ್ ಕಾಲೇಜಿನ ವಿಜ್ಞಾನಿಗಳು ಸೇರಿದಂತೆ ಅಂತರಾಷ್ಟ್ರೀಯ ಸಂಸ್ಥೆಗಳ ತಂಡ ಈ ಅಧ್ಯಯನ ನಡೆಸಿದ್ದು, ರಕ್ತದೊತ್ತಡ 100/80 ಎಂಎಂಎಚ್‌ಜಿ ಗಿಂತ ಕಡಿಮೆಯಿದ್ದವರಲ್ಲಿ, ಹೃದಯಾಘಾತದ ಅಪಾಯ ಹೆಚ್ಚಾಗಿ ಕಂಡುಬಂದಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದು, ಹೃದಯ ಸಂಬಂಧಿತ ಸಮಸ್ಯೆ ಇರುವವರು ತುಂಬಾ ಜಾಗರೂಕರಾಗಿರಬೇಕಾಗುತ್ತದೆ. ಜೊತೆಗೆ ಈ ರೀತಿ ಆಗುವುದಕ್ಕೆ ಕಾರಣವೇನು, ಕಡಿಮೆ ರಕ್ತದೊತ್ತಡ ಎಷ್ಟು ಅಪಾಯಕಾರಿ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯ ರಕ್ತದೊತ್ತಡ ಹೇಗಿರಬೇಕು?

ಸಂಶೋಧನೆಯು ರಕ್ತದೊತ್ತಡ ಸುಮಾರು 120/80 ಎಂಎಂಎಚ್‌ಜಿ ಆಗಿರಬೇಕು. ರಕ್ತದೊತ್ತಡ 90/60 ಕ್ಕಿಂತ ಕಡಿಮೆಯಿದ್ದರೆ, ಅದನ್ನು ಕಡಿಮೆ ರಕ್ತದೊತ್ತಡ ಎಂದು ಪರಿಗಣಿಸಲಾಗುತ್ತದೆ. ಈ ಮಟ್ಟದ ರಕ್ತದೊತ್ತಡವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ನಿಮ್ಮ ರಕ್ತದೊತ್ತಡ ಸಾಮಾನ್ಯವಾಗಿ ಈ ವ್ಯಾಪ್ತಿಯಲ್ಲಿದ್ದರೆ, ಅದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ದೆಹಲಿಯ ರಾಜೀವ್ ಗಾಂಧಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಡಾ. ಅಜಿತ್ ಜೈನ್ ಅವರು ಹೇಳುವ ಪ್ರಕಾರ, ಕಡಿಮೆ ರಕ್ತದೊತ್ತಡವು ಒಂದು ಪ್ರಮುಖ ಸಮಸ್ಯೆಯಾಗಿದ್ದು ಜನ ಸಾಮಾನ್ಯವಾಗಿ ಅಧಿಕ ರಕ್ತದೊತ್ತಡವನ್ನು ಅಪಾಯಕಾರಿ ಎಂದು ಪರಿಗಣಿಸುತ್ತಾರೆ. ಆದರೆ ಸಾಮಾನ್ಯ ಮಿತಿಗಿಂತ ಹೆಚ್ಚಿನ ಅಥವಾ ಕಡಿಮೆ ರಕ್ತದೊತ್ತಡವಿದ್ದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *