ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೀರು ಅತ್ಯಗತ್ಯವಾದರೂ, ಕೆಲವು ಆಹಾರಗಳನ್ನು ಸೇವಿಸಿದ ತಕ್ಷಣ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೌದು, ನೀರು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆದರೂ ಕೂಡ ಕೆಲವೊಮ್ಮೆ ಇವು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ವಿಷಯ ಕೆಲವರಿಗೆ ತಿಳಿದಿರಬಹುದು. ಇನ್ನು ಅನೇಕರು ಇದನ್ನು ಪಾಲನೆ ಮಾಡುತ್ತಿರಬಹುದು. ಆದರೆ ಕೆಲವರಿಗೆ ಈ ಬಗ್ಗೆ ತಿಳಿದಿಲ್ಲ. ಹಾಗಾಗಿಯೇ ಬೇಕಾದಾಗೆಲ್ಲಾ ನೀರು ಕುಡಿಯುತ್ತಾರೆ. ಆದರೆ ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟು ಮಾಡಿ ಮಲಬದ್ದತೆಗೆ ಕಾರಣವಾದೀತು. ಹಾಗಾದರೆ ಯಾವ ರೀತಿಯ ಆಹಾರಗಳ ಸೇವನೆ ಮಾಡಿದ ಮೇಲೆ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಯಾಕೆ ಆಹಾರಗಳ ಸೇವನೆ ಮಾಡಿದ ಮೇಲೆ ನೀರು ಕುಡಿಯಬಾರದು, ನೀರಿಗೂ ಆ ಆಹಾರಕ್ಕೂ ಏನು ಸಂಬಂಧ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಜೀವ ವಿಜ್ಞಾನ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಊಟದ ನಂತರ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕಾರಿ ಕಿಣ್ವಗಳು ದುರ್ಬಲಗೊಳ್ಳುತ್ತವೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಜೀರ್ಣಕ್ರಿಯೆ ಸರಿಯಾಗಿದ್ದು ಆರೋಗ್ಯ ಹಾಳಾಗಬಾರದು ಎಂದರೆ ಸಾಂಪ್ರದಾಯಿಕ ಆಯುರ್ವೇದ ಪದ್ಧತಿಯ ಅನುಸಾರ, ಊಟದ ನಂತರ ಕನಿಷ್ಠ 30 ನಿಮಿಷಗಳ ಕಾಲ ಏನನ್ನೂ ಸೇವಿಸಬಾರದು ಯಾವ ರೀತಿಯ ಪಾನೀಯಗಳನ್ನು ಕೂಡ ಕುಡಿಯಬಾರದು. ಮಾತ್ರವಲ್ಲ ಇದರ ಜೊತೆಗೆ ಕೆಲವು ಆಹಾರಗಳ ಸೇವನೆ ಮಾಡಿದ ನಂತರ ಯಾವುದೇ ಕಾರಣಕ್ಕೂ ನೀರನ್ನು ಕುಡಿಯಬಾರದು.
ಪಪ್ಪಾಯಿ: ಈ ಹಣ್ಣು 96% ನೀರಿನಿಂದ ಕೂಡಿದ್ದು ಇದನ್ನು ತಿಂದ ತಕ್ಷಣ ನೀರು ಕುಡಿದರೆ ಹೊಟ್ಟೆಯಲ್ಲಿನ ದ್ರವ ಹೆಚ್ಚು ದುರ್ಬಲಗೊಳ್ಳುತ್ತವೆ, ಜೀರ್ಣಕಾರಿ ರಸಗಳ ಸಾಂದ್ರತೆ ಕಡಿಮೆಯಾಗುತ್ತದೆ ಮತ್ತು ಆಹಾರದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಹಾಗಾಗಿ ಪಪ್ಪಾಯಿ ತಿಂದ ನಂತರ ಕನಿಷ್ಠ 40 ರಿಂದ 50 ನಿಮಿಷಗಳವಾದರೂ ನೀರು ಕುಡಿಯಬಾರದು. ಜೊತೆಗೆ ಮತ್ತಿತರ ಪಾನೀಯಗಳನ್ನು ಕೂಡ ಸೇವನೆ ಮಾಡಬಾರದು.
For More Updates Join our WhatsApp Group :
