ಮನುಷ್ಯನ ಜೀವನಶೈಲಿ ಅವನ ಆರೋಗ್ಯವನ್ನು ನಿರ್ಧರಿಸುತ್ತದೆ. ಸಮತೋಲಿತ ಆಹಾರ, ವ್ಯಾಯಾಮ ಹಾಗೂ ಆರೋಗ್ಯಕರ ಜೀವನ ಶೈಲಿ ಅನೇಕ ಕಾಯಿಲೆಗಳನ್ನು ತಡೆಗಟ್ಟಲು ಸಹಾಯಕ. ಆದರೂ ಕೆಲವೊಮ್ಮೆ ಸಾಮಾನ್ಯವೆಂದು ಕಾಣಿಸುವ ತಲೆನೋವು, ಹೊಟ್ಟೆ ನೋವು ಅಥವಾ ಕೀಲು ನೋವು ಗಂಭೀರ ರೋಗದ ಮುನ್ಸೂಚನೆ ಆಗಿರಬಹುದು. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸದೇ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯ.
ತಲೆನೋವು:
ಸಾಮಾನ್ಯವಾಗಿ ಆಯಾಸ, ಒತ್ತಡ ಅಥವಾ ನಿದ್ರಾಹೀನತೆ ಕಾರಣವಾಗಬಹುದು.ಆದರೆ ಪದೇ ಪದೇ ಬರುವ ತೀವ್ರ ತಲೆನೋವು→ ಮೈಗ್ರೇನ್, ಅಧಿಕ ರಕ್ತದೊತ್ತಡ ಅಥವಾ ನರ ಸಂಬಂಧಿತ ಸಮಸ್ಯೆಗಳ ಸಂಕೇತ.ತಲೆನೋವಿನ ಜೊತೆಗೆ ವಾಕರಿಕೆ, ತಲೆತಿರುಗುವುದು, ಬೆಳಕಿಗೆ ಅಸಹನೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಎದೆ ನೋವು:
ಅನೇಕರು ಗ್ಯಾಸ್ಟ್ರಿಕ್ ಅಥವಾ ಅಜೀರ್ಣವೆಂದು ತಪ್ಪಾಗಿ ಭಾವಿಸುತ್ತಾರೆ.ಆದರೆ ನಿರಂತರ ಎದೆ ನೋವು ಅಥವಾ ಒತ್ತಡ → ಹೃದಯಾಘಾತ ಅಥವಾ ಹೃದಯ ಕಾಯಿಲೆಯ ಆರಂಭಿಕ ಲಕ್ಷಣ.ಎಡಗೈ, ಭುಜ ಅಥವಾ ದವಡೆ ನೋವು ಸಹ ಹೃದಯ ಸಂಬಂಧಿತ ತೊಂದರೆಯ ಎಚ್ಚರಿಕೆ.
ಹೊಟ್ಟೆ ಮತ್ತು ಕೆಳ ಬೆನ್ನು ನೋವು: ಮಹಿಳೆಯರಲ್ಲಿ ಇದು ಸಾಮಾನ್ಯವಾದರೂ, ಮೂತ್ರಪಿಂಡ ಕಲ್ಲು, ಯಕೃತ್ ಸಮಸ್ಯೆ ಅಥವಾ PCOS ಕಾರಣವಾಗಿರಬಹುದು. ಹೊಟ್ಟೆ ಉಬ್ಬರ, ಹಸಿವು ಕಡಿಮೆಯಾಗುವುದು, ಮೂತ್ರ ವಿಸರ್ಜನೆ ವೇಳೆ ಸುಡುವಿಕೆ ಇದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.
ಕೀಲು ಮತ್ತು ಮೂಳೆ ನೋವು:
ನಿರಂತರ ನೋವು → ಸಂಧಿವಾತ, ಆಸ್ಟಿಯೊಪೊರೋಸಿಸ್, ಕ್ಯಾಲ್ಸಿಯಂ/ವಿಟಮಿನ್ ಡಿ ಕೊರತೆ ಸೂಚನೆ.ವಿಶೇಷವಾಗಿ ಮುಟ್ಟಿನ ನಂತರ ಮಹಿಳೆಯರಲ್ಲಿ ಹೆಚ್ಚು ಕಾಣಿಸುತ್ತದೆ. ಕೀಲು ಗಟ್ಟಿಯಾಗಿದ್ದರೆ ಅಥವಾ ಒತ್ತಡ ಹೆಚ್ಚಿದ್ದರೆ ತಕ್ಷಣ ಚಿಕಿತ್ಸೆ ಅಗತ್ಯ.
ಕಣ್ಣು ಮತ್ತು ಬೆನ್ನು ನೋವು:
ಕಣ್ಣು ನೋವು/ಸುಡುವಿಕೆ → ಗ್ಲೂಕೋಮಾ ಅಥವಾ ದೃಷ್ಟಿದೌರ್ಬಲ್ಯದ ಸೂಚನೆ.ದೀರ್ಘಕಾಲ ಕುಳಿತುಕೊಳ್ಳುವುದರಿಂದ ಬೆನ್ನು ನೋವು ಸಾಮಾನ್ಯ. ಆದರೆ ವಿಶ್ರಾಂತಿ ಪಡೆದರೂ ಕಡಿಮೆಯಾಗದಿದ್ದರೆ, ಅದು ಬೆನ್ನುಮೂಳೆ ಸಮಸ್ಯೆಯ ಮುನ್ಸೂಚನೆ.ಸಣ್ಣ ನೋವನ್ನೂ ನಿರ್ಲಕ್ಷಿಸದೇ ಸಮಯಕ್ಕೆ ಚಿಕಿತ್ಸೆ ಪಡೆಯುವುದು ಆರೋಗ್ಯಕರ ಜೀವನದ ಮೂಲಮಂತ್ರ.
For More Updates Join our WhatsApp Group :