“ನನ್ನ ಪತ್ನಿ ಮೇಲೆ ಸುಳ್ಳು ಆರೋಪ ಬಿಚ್ಚಬೇಡಿ” – ಅಸ್ಸಾಂ CM ಹಿಮಂತ ಶರ್ಮಾ.

“ನನ್ನ ಪತ್ನಿ ಮೇಲೆ ಸುಳ್ಳು ಆರೋಪ ಬಿಚ್ಚಬೇಡಿ” – ಅಸ್ಸಾಂ CM ಹಿಮಂತ ಶರ್ಮಾ.

ಕಾಂಗ್ರೆಸ್ ಪಾರ್ಟಿ ಪಾಸ್‌ಪೋರ್ಟ್ ವಿವಾದ ಹೀರಿಕೊಳ್ಳಲು ಪಾಕಿಸ್ತಾನದ ಸಹಾಯ ಪಡೆದಿದೆ ಎಂದ ಸಿಎಂ

ಗುವಾಹಟಿ : ತಮ್ಮ ಪತ್ನಿ ಮೇಲೆ ಕಾಂಗ್ರೆಸ್ ಹೊರಿಸಿರುವ ಆರೋಪಗಳ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಸಿಎಂ ಪತ್ನಿ ರಿನಿಕಿ ಭೂನ್ಯಾ ಶರ್ಮಾ ಮೂರು ವಿದೇಶಿ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಸಿಎಂ  ಕಾಂಗ್ರೆಸ್ ಪಾಕ್​ನಿಂದ ಸಹಾಯ ಪಡೆಯುತ್ತಿದೆ, ತನ್ನ ಪತ್ನಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಕಳೆದ 10 ದಿನಗಳಲ್ಲಿ, ಪಾಕಿಸ್ತಾನಿ ಚಾನೆಲ್‌ಗಳು ಅಸ್ಸಾಂ ಚುನಾವಣೆಯ ಬಗ್ಗೆ ಕನಿಷ್ಠ 11 ಟಾಕ್ ಶೋಗಳನ್ನು ನಡೆಸಿವೆ, ಪ್ರತಿಯೊಂದೂ ಕಾಂಗ್ರೆಸ್  ಗೆಲ್ಲುವುದಾಗಿಯೇ ಪ್ರತಿಪಾದಿಸಿವೆ ಇದರರ್ಥ ಕಾಂಗ್ರೆಸ್ ಪಾಕಿಸ್ತಾನದ ಜತೆ ಸಂಬಂಧ ಹೊಂದಿದೆ ಎಂದು  ದೂರಿದ್ದಾರೆ.

ಚುನಾವಣಾ ಪ್ರಚಾರ ಮಂಗಳವಾರ ಕೊನೆಗೊಳ್ಳಲಿದೆ, ಪಾಸ್‌ಪೋರ್ಟ್ ವಿವಾದದ ಬಗ್ಗೆ ರಾಜಕೀಯ ಬಿಸಿ ಏರಿದೆ. ಅಸ್ಸಾಂನಲ್ಲಿ ಏಪ್ರಿಲ್ 9 ರಂದು ಮತದಾನ ನಡೆಯಲಿದೆ. ಇದಕ್ಕೂ ಮುನ್ನ ಆರೋಪ ಪ್ರತ್ಯಾರೋಪಗಳ ಅಲೆಯೇ ನಡೆಯುತ್ತಿದೆ. ಕಾಂಗ್ರೆಸ್ ನಾಯಕರಾದ ಪವನ್ ಖೇರಾ ಮತ್ತು ಗೌರವ್ ಗೊಗೊಯ್ ಅವರು ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ.

ತಮ್ಮ ಪತ್ನಿಯ ಹೆಸರಿನಲ್ಲಿ ನೋಂದಾಯಿಸಲಾದ ಕಂಪನಿಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಯಾರಾದರೂ 199 ಅಮೆರಿಕನ್ ಡಾಲರ್ ಪಾವತಿಸುವ ಮೂಲಕ ಕಂಪನಿಯನ್ನು ನೋಂದಾಯಿಸಬಹುದು ಎಂದು ಹೇಳಿದರು . ಎಲ್ಲರ ಕಣ್ಣೆದುರೇ ಮತ್ತೊಂದು ಕಂಪನಿಯನ್ನು ನೋಂದಾಯಿಸಿ ತೋರಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *