ಪಪ್ಪಾಯಿ ತಿಂದು ಅದರ ಬೀಜಗಳನ್ನು ಎಸೆಯಬೇಡಿ ಅವುಗಳಿಂದ ಔಷಧಗಳಿಲ್ಲದ ಕಾಯಿಲೆಗಳನ್ನು ತಡೆಯಬಹುದು!

ಪಪ್ಪಾಯಿ ತಿಂದು ಅದರ ಬೀಜಗಳನ್ನು ಎಸೆಯಬೇಡಿ ಅವುಗಳಿಂದ ಔಷಧಗಳಿಲ್ಲದ ಕಾಯಿಲೆಗಳನ್ನು ತಡೆಯಬಹುದು!

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಆದರೆ ಪಪ್ಪಾಯಿ ತಿಂದು ಅದರ ಬೀಜ ಬಿಸಾಡುವ ಅಭ್ಯಾಸ ನಿಮಗೂ ಇದ್ಯಾ? ಹಾಗಿದ್ರೆ ಮುಂದೆ ಯಾವತ್ತೂ ಈ ತಪ್ಪು ಮಾಡಬೇಡಿ. ಯಾಕಂದ್ರೆ ಈ ಸಣ್ಣ ಸಣ್ಣ ಬೀಜಗಳಲ್ಲಿ ಅದ್ಭುತ ಪೋಷಕಾಂಶಗಳು ಅಡಗಿವೆ. ನಾವು ಬೇಡ ಎಂದು ಬಿಸಾಡುವ ಅನೇಕ ಪದಾರ್ಥಗಳು ಅಮೃತವಾಗಿರುತ್ತದೆ. ಅದರ ಬಗ್ಗೆ ತಿಳಿದಿರಬೇಕಷ್ಟೇ. ನೀವು ಕೂಡ ಪಪ್ಪಾಯಿ ಬೀಜಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಂಡರೆ, ನೀವು ಎಂದಿಗೂ ಅವುಗಳನ್ನು ವ್ಯರ್ಥ ಎಂದು ಎಸೆಯುವುದಿಲ್ಲ. ಅದರಲ್ಲಿ ಔಷಧೀಯ ಗುಣಗಳು ಅಪಾರವಾಗಿದೆ. ಹಾಗಾದರೆ ಇದರಿಂದ ಸಿಗುವ ಪ್ರಯೋಜನಗಳೇನು? ಯಾರಿಗೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ..

ಪಪ್ಪಾಯಿ ಬೀಜಗಳಿಂದ ಸಿಗುವ ಪ್ರಯೋಜನಗಳು:

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:

ಪಪ್ಪಾಯಿ ಬೀಜಗಳು ಫೈಬರ್‌ ಅಂಶದಿಂದ ಸಮೃದ್ಧವಾಗಿವೆ. ಈ ನಾರು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಮಾತ್ರವಲ್ಲ ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸಲು ಕೂಡ ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಬೀಜಗಳಲ್ಲಿ ಕಂಡುಬರುವ ‘ಕಾರ್ಪೈನ್’ ಎಂಬ ವಸ್ತುವು ಕರುಳಿನಲ್ಲಿರುವ ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳನ್ನು ಕೊಲ್ಲುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛವಾಗಿರಿಸುತ್ತದೆ.

ತೂಕ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ:

ಪಪ್ಪಾಯಿ ಬೀಜಗಳಲ್ಲಿರುವ ನಾರಿನಾಂಶ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಅವು ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತವೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತವೆ. ಅವುಗಳಲ್ಲಿರುವ ಒಲೀಕ್ ಆಮ್ಲವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಕ್ಯಾನ್ಸರ್ ನಿರೋಧಕ ಗುಣಗಳಿದೆ:

ಪಪ್ಪಾಯಿ ಬೀಜಗಳು ಪಾಲಿಫಿನಾಲ್‌ಗಳಂತಹ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಅವು ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತವೆ ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, ‘ಐಸೋಥಿಯೋಸೈನೇಟ್’ ಎಂಬ ಅಂಶ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.

ಮೂತ್ರಪಿಂಡದ ಆರೋಗ್ಯ ಕಾಪಾಡುತ್ತದೆ:

ಕೆಲವು ಅಧ್ಯಯನಗಳ ಪ್ರಕಾರ, ಪಪ್ಪಾಯಿ ಬೀಜಗಳು ಮೂತ್ರಪಿಂಡಗಳಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ, ಅವುಗಳ ಕಾರ್ಯವನ್ನು ಹೆಚ್ಚಿಸುತ್ತದೆ. ಅವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಮೂತ್ರಪಿಂಡದ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ.

ಡೆಂಗ್ಯೂ ತಡೆಗಟ್ಟುವಲ್ಲಿ ಸಹಾಯ:

ಕೆಲವು ಅಧ್ಯಯನಗಳು ಪಪ್ಪಾಯಿ ಬೀಜಗಳು ಡೆಂಗ್ಯೂ ಕಾಯಿಲೆಯಲ್ಲಿ ಪ್ಲೇಟ್‌ಲೆಟ್ ಎಣಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ. ಈ ಬೀಜಗಳನ್ನು ಪುಡಿ ರೂಪದಲ್ಲಿ ಸೇವಿಸುವುದರಿಂದ ಡೆಂಗ್ಯೂನಿಂದ ಬೇಗನೆ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಇದರ ಜೊತೆಗೆ, ಪಪ್ಪಾಯಿ ಬೀಜಗಳನ್ನು ಮುಟ್ಟಿನ ನೋವನ್ನು ಕಡಿಮೆ ಮಾಡಲು, ಯಕೃತ್ತಿನ ಸಮಸ್ಯೆಗಳನ್ನು ತಡೆಗಟ್ಟಲು ಬಳಸಬಹುದು. ಈ ಪೌಡರ್ ಅನ್ನು ಸಲಾಡ್ ಅಥವಾ ಜ್ಯೂಸ್‌ಗಳಲ್ಲಿ ಬೆರೆಸಿ ತೆಗೆದುಕೊಳ್ಳಬಹುದು. ಆದರೆ ಅವುಗಳನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *