ದೇಹ-ಮನಸ್ಸು ಚುರುಕಾಗಿರಲು ಕಾಫಿ-ಟೀ ಬದಲು ಈ ಪಾನೀಯಗಳನ್ನು ಕುಡಿಯಿರಿ!

ದೇಹ-ಮನಸ್ಸು ಚುರುಕಾಗಿರಲು ಕಾಫಿ-ಟೀ ಬದಲು ಈ ಪಾನೀಯಗಳನ್ನು ಕುಡಿಯಿರಿ!

ಬೆಳಿಗ್ಗೆ ದಿನವನ್ನು ಹೇಗೆ ಆರಂಭಿಸುತ್ತೀರೋ ಅದೇ ಇಡೀ ದಿನದ ಚೈತನ್ಯಕ್ಕೆ ಕಾರಣವಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಸಾಮಾನ್ಯವಾಗಿ ಹೆಚ್ಚಿನವರು ಎಚ್ಚರವಾದ ತಕ್ಷಣ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಇದಕ್ಕೆ ಬದಲಾಗಿ ಕೆಲ ಆರೋಗ್ಯಕರ ಪಾನೀಯಗಳನ್ನು ಸೇವನೆ ಮಾಡಿದರೆ ದೇಹ-ಮನಸ್ಸು ತಾಜಾತನದಿಂದ ತುಂಬಿ ಇಡೀ ದಿನ ಚುರುಕಾಗಿ ಕಳೆಯಬಹುದು.

ನಿತ್ಯ ಸೇವಿಸಬಹುದಾದ ಪಾನೀಯಗಳು:

ನಿಂಬೆ ನೀರು – ಬೆಳಿಗ್ಗೆ ಉಗುರುಬೆಚ್ಚಗಿನ ನೀರಿಗೆ ನಿಂಬೆರಸ ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ವಿಟಮಿನ್ C ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ಚುರುಕಾಗಿರಿಸುತ್ತದೆ.

ಶುಂಠಿ-ಜೇನುತುಪ್ಪದ ಪಾನೀಯ – ಶುಂಠಿಯ ಔಷಧೀಯ ಗುಣಗಳು ಚಯಾಪಚಯ ಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತವೆ. ಜೇನುತುಪ್ಪ ಶಕ್ತಿಯ ಉತ್ತಮ ಮೂಲ. ನೀರಿನಲ್ಲಿ ಶುಂಠಿ ಕುದಿಸಿ, ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ದಿನವಿಡೀ ಶಕ್ತಿ ಸಿಗುತ್ತದೆ.

ಗ್ರೀನ್ ಟೀ – ಆಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾದ ಗ್ರೀನ್ ಟೀ ದೇಹವನ್ನು ಹಾನಿಕರ ರಾಡಿಕಲ್ಸ್‌ಗಳಿಂದ ರಕ್ಷಿಸುತ್ತದೆ ಮತ್ತು ತ್ವರಿತ ಚೈತನ್ಯ ನೀಡುತ್ತದೆ.

ಜೀರಿಗೆ ನೀರು – ಜೀರ್ಣಾಂಗ ಸಮಸ್ಯೆಗಳಾದ ಗ್ಯಾಸ್, ಆಮ್ಲೀಯತೆ, ಮಲಬದ್ಧತೆ ನಿವಾರಣೆಗೆ ಜೀರಿಗೆ ನೀರು ಉತ್ತಮ. ಬೆಳಿಗ್ಗೆ ಇದನ್ನು ಕುಡಿಯುವುದರಿಂದ ದೇಹ ಹಗುರವಾಗಿ ದಿನವಿಡೀ ಆಕ್ಟಿವ್ ಆಗಿರಬಹುದು.

ತಾಜಾ ಹಣ್ಣಿನ ರಸ – ಎಳನೀರು, ದಾಳಿಂಬೆ, ಕಲ್ಲಂಗಡಿ ಹೀಗೆ ತಾಜಾ ಹಣ್ಣಿನ ರಸಗಳು ಆರೋಗ್ಯಕರವಾಗಿದ್ದು, ಬೆಳಿಗ್ಗೆ ಸೇವಿಸಿದರೆ ದೇಹಕ್ಕೆ ಪೌಷ್ಟಿಕಾಂಶ ಹಾಗೂ ಶಕ್ತಿ ಒದಗಿಸುತ್ತವೆ.

ಆರೋಗ್ಯಕರ ಬೆಳಗಿನ ಅಭ್ಯಾಸವು ನಿಮ್ಮ ದೇಹ-ಮನಸ್ಸನ್ನು ತಾಜಾ ಹಾಗೂ ಉಲ್ಲಾಸಕರವಾಗಿರಿಸುತ್ತದೆ. ಆದ್ದರಿಂದ ಕಾಫಿ-ಟೀ ಬಿಟ್ಟು ಈ ಪಾನೀಯಗಳನ್ನು ಸೇವನೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *