ಸಂಚಾರಿ ಪೊಲೀಸರು ದಾಖಲೆಗಳನ್ನು ನೀಡುವಂತೆ ಕೇಳಿದ ನಂತರ ಕಾರು ಚಾಲಕ ವೇಗವಾಗಿ ಕಾರನ್ನು ಚಲಾಯಿಸಿದ್ದರ ಪರಿಣಾಮ ಹರಿಯಾಣದ ಫರಿದಾಬಾದ್‌ನ ವಲ್ಲಭಗಢದಲ್ಲಿ ಜನನಿಬಿಡ ರಸ್ತೆಯಲ್ಲಿ ಹಠಾತ್ ಕಾಲ್ತುಳಿತ ಸಂಭವಿಸಿತ್ತು. ಅಲ್ಲದೆ ಈ ವೇಳೆ ಪೊಲೀಸ್ ಪೇದೆ ಆತನನ್ನು ಹಿಡಿಯಲು ಮುಂದಾಗಿದ್ದರು. ಕಾರನ್ನು ಹಿಡಿದುಕೊಂಡಿದ್ದ ಪೇದೆಯನ್ನು ಸ್ವಲ್ಪ ದೂರದವರೆಗೆ ಎಳೆದೊಯ್ದಿರುವ ಘಟನೆ ನಡೆದಿದೆ
ಕಾರು ಚಾಲಕ ಪಾನಮತ್ತನಾಗಿದ್ದ ಎಂದು ಹೇಳಲಾಗುತ್ತಿದೆ. ಟ್ರಾಫಿಕ್ ಸಿಗ್ನಲ್ ನಲ್ಲಿ ನಿಲ್ಲಿಸಿ ದಾಖಲೆ ಕೇಳಿದಾಗ ಅಲ್ಲಿಂದ ಓಡಿ ಹೋಗತೊಡಗಿದ. ಚಾಣಾಕ್ಷತನ ತೋರಿದ ಟ್ರಾಫಿಕ್ ಪೊಲೀಸ್ ಚಾಲಕನನ್ನು ನಿಯಂತ್ರಿಸಿ ಕಾರನ್ನು ನಿಲ್ಲಿಸಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಹೊರಬಿದ್ದಿದ್ದು, ಚಾಲಕ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವುದು ಕಂಡು ಬರುತ್ತಿದೆ. ಚಾಲಕನ ಸೀಟಿನ ಡೋರ್ ತೆರೆದಿದ್ದು, ಟ್ರಾಫಿಕ್ ಪೊಲೀಸ್ ಎಸ್‌ಐ ಚಾಲಕನನ್ನು ನಿಯಂತ್ರಿಸುತ್ತಿರುವುದು ಕಂಡು ಬಂದಿದೆ. ಆತ ತನ್ನ ಪ್ರಾಣವನ್ನು ಪಣಕ್ಕಿಟ್ಟು ಕಾರನ್ನು ನಿಲ್ಲಿಸಲು ಪ್ರಯತ್ನಿಸುತ್ತಾನೆ. ಈ ವೇಳೆ ಕಾರು ಫುಟ್ ಪಾತ್ ಮೇಲೆ ಹೋಗುತ್ತದೆ. ಈ ಸಮಯದಲ್ಲಿ ದೊಡ್ಡ ಅಪಘಾತ ಸಂಭವಿಸಬಹುದಾಗಿತ್ತು. ಆದರೆ ಟ್ರಾಫಿಕ್ ಪೊಲೀಸರು ಅಂತಿಮವಾಗಿ ಚಾಲಕನನ್ನು ನಿಯಂತ್ರಿಸಿ ಕಾರನ್ನು ನಿಲ್ಲಿಸುತ್ತಾರೆ. ನಂತರ ಚಾಲಕನನ್ನು ಕಾರಿನಿಂದ ಕೆಳಗಿಳಿಸಲಾಯಿತು. ಈ ಕಾರು ರಾಜಸ್ಥಾನದ್ದು ಎನ್ನಲಾಗಿದೆ