ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಡ್ರೋನ್ ಕಣ್ಗಾವಲು

ಬೆಂಗಳೂರು: ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್ ಸಹಜ. ಈ ಟ್ರಾಫಿಕ್ ನಿಯಂತ್ರಿಸುವುದು ಪೊಲೀಸ್ ಇಲಾಖೆಗೆ ದೊಡ್ಡ ತಲೆ ನೋವು. ಇದೀಗ ನಗರದ ಟ್ರಾಫಿಕ್ ನಿಭಾಯಿಸಲು ಬೆಂಗಳೂರಿನ ಕಾಲೇಜೊಂದರ ವಿದ್ಯಾರ್ಥಿಗಳ ತಂಡ ಹೊಸ ಅನ್ವೇಷಣೆಯೊಂದನ್ನು ಮಾಡಿದೆ.

ಡ್ರೋನ್ ಕಣ್ಗಾವಲು ಮೂಲಕ ಟ್ರಾಫಿಕ್ ಸಮಸ್ಯೆ ನಿಭಾಯಿಸಲು ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಏರೋನಾಟಿಕ್ಸ್ ವಿಭಾಗದ 40 ವಿದ್ಯಾರ್ಥಿಗಳ ತಂಡ ಸಾಫ್ಟ್ವೇರ್ ಅಭಿವೃದ್ಧಿ ಮಾಡಿದೆ. ಡ್ರೋನ್‌ಗೆ ಅಳವಡಿಸಿದ ಕ್ಯಾಮರಾ ಮೂಲಕ ಟ್ರಾಫಿಕ್ ಕಂಟ್ರೋಲ್ ರೂಮ್‌ಗೆ ಇನ್ಪುಟ್ ಕೊಡುವ ಮೂಲಕ ನಗರದಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡಬಹುದಾದಂತಹ ಸಾಫ್ಟವೇರ್ ಅನ್ನು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

ಡಿಸಾಲ್ಟ್ ಸಿಸ್ಟಮ್ಸ್ ಮತ್ತು ಲಾ ಫೌಂಡೆಶನ್ ಸಹಯೋಗದೊಂದಿಗೆ ನಿಟ್ಟೆ ಮೀನಾಕ್ಷಿ ಇನ್ಸ್??ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ಸ್ವಾರ್ನ್ ಡ್ರೋನ್ ಟೆಕ್ನಾಲಜಿ ಮೂಲಕ ಟ್ರಾಫಿಕ್, ಜಿಕೆವಿಕೆಯ ಹಿರಿಯ ಅಧಿಕಾರಿಗಳ ಮುಂದೆ ಪ್ರಾಯೋಗಿಕವಾಗಿ ಡ್ರೋನ್ ಹಾರಾಟ ನಡೆಸಿ ತೋರಿಸಿದ್ದಾರೆ. ಇದು ಯಶಸ್ವಿ ಆಗಿದೆ.

ಒಂದಕ್ಕಿAತ ಹೆಚ್ಚಿನ ಡ್ರೋನ್‌ಗಳು ಏಕಕಾಲದಲ್ಲಿ ಸ್ವಯಂ ಚಾಲಿತವಾಗಿ ಕೆಲಸ ಮಾಡುತ್ತವೆ. ಎಐ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಎಂಲ್ (ಮಷಿನ್ ಲರ್ನಿಂಗ್) ಮೂಲಕ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗಿದ್ದು, ಪ್ರಮುಖವಾಗಿ ಮಾಸ್ಟರ್ ಡ್ರೋನ್‌ಗೆ ಸ್ಲೇವ್ ಡ್ರೋನ್‌ಗಳು ಕೊಡುವ ಮಾಹಿತಿಯನ್ನು ಗ್ರೌಂಡ್ ಸ್ಟೇಷನ್‌ಗೆ ಮಾಸ್ಟರ್ ಡ್ರೋನ್ ಮಾಹಿತಿ ಕಳಿಹಿಸುತ್ತದೆ. ಟ್ರಾಫಿಕ್ ಜೊತೆಗೆ ಕೃಷಿ ಇಲಾಖೆ ಸಂಬAಧಿಸಿದAತೆ ಕೆಲಸಗಳನ್ನೂ ಈ ತಂತ್ರಜ್ಞಾನದಿAದ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಇದರ ಬಳಕೆ ಸಾಧ್ಯವಾಗಲಿದ್ದು, ತುರ್ತು ಸಂದರ್ಭಗಳಲ್ಲೂ ಈ ಸ್ವಾರ್ನ್ ಡ್ರೋನ್ ಬಳಕೆ ಮಾಡಿಕೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *