11–12ನೇ ವಯಸ್ಸಿನಲ್ಲೇ ಡ್ರಗ್ಸ್‌ಗೆ ಸಿಲುಕುತ್ತಿರುವ ಮಕ್ಕಳು.
ಬೆಂಗಳೂರು : ದೇಶದಲ್ಲಿ ಮಾದಕ ದ್ರವ್ಯ ಮತ್ತು ಮಾದಕ ವ್ಯಸನಕ್ಕೆ ಸಂಬಂಧಿಸಿದ ಸಮಸ್ಯೆಗಳು ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಪರಿಸ್ಥಿತಿ ಹೇಗಿದೆ ಎಂದರೆ ಚಿಕ್ಕ ಮಕ್ಕಳು ಕೂಡ ಇವುಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ದೇಶದ 10 ನಗರಗಳಲ್ಲಿ ನಡೆಸಿದ ಶಾಲಾ ಸಮೀಕ್ಷೆಯ ಪ್ರಕಾರ, ಮಕ್ಕಳು ಒಂದು ವಯಸ್ಸಿಗೆ ಬರುವ ಬಹಳ ಮೊದಲೇ ಮಾದಕ ದ್ರವ್ಯಗಳನ್ನು ಬಳಸಲು ಪ್ರಾರಂಭಿಸುತ್ತಿದ್ದಾರೆ, ಅಂದರೆ ಸರಾಸರಿ 11,12 ನೇ ವಯಸ್ಸಿಗೆ ಮಾದಕ ದ್ರವ್ಯಗಳನ್ನು ಬಳಸುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಹೊರಬಂದಿದೆ. ಕೇಳುವುದಕ್ಕೆ ಬಹಳ ಆಶ್ಚರ್ಯಕರವಾಗಿದ್ದರೂ ಕೂಡ ಪೋಷಕರು ತಮ್ಮ ಮಕ್ಕಳ ಬಗ್ಗೆ ಸ್ವಲ್ಪ ಗಮನ ಹರಿಸುವುದು ಬಹಳ ಮುಖ್ಯವಾಗಿದೆ.
10 ನಗರಗಳಲ್ಲಿ ಸಮೀಕ್ಷೆ ಹೇಗೆ ನಡೆದಿತ್ತು?
ಈ ಅಧ್ಯಯನವು ದೆಹಲಿ, ಬೆಂಗಳೂರು, ಮುಂಬೈ, ಚಂಡೀಗಢ, ಹೈದರಾಬಾದ್, ಲಕ್ನೋ, ಇಂಫಾಲ್, ಜಮ್ಮು, ದಿಬ್ರುಗಢ ಮತ್ತು ರಾಂಚಿಯಲ್ಲಿ ನಡೆದಿದ್ದು, ಸುಮಾರು 14.7 ವರ್ಷ ವಯಸ್ಸಿನ 5,920 ವಿದ್ಯಾರ್ಥಿಗಲು ಇದರಲ್ಲಿ ಭಾಗವಹಿಸಿದ್ದರು. ಈ ತಿಂಗಳು ನ್ಯಾಷನಲ್ ಮೆಡಿಕಲ್ ಜರ್ನಲ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರತಿ ಏಳು ಶಾಲಾ ವಿದ್ಯಾರ್ಥಿಗಳಲ್ಲಿ ಒಬ್ಬರು ಒಮ್ಮೆಯಾದರೂ ಮನೋವಿಕೃತ ವಸ್ತುವನ್ನು ಬಳಸಿದ್ದರು ಎಂಬುದು ತಿಳಿದು ಬಂದಿದೆ. ಶೇ. 15 ರಷ್ಟು ವಿದ್ಯಾರ್ಥಿಗಳು ಮಾದಕ ದ್ರವ್ಯಗಳನ್ನು ಬಳಸಿದ್ದಾರೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಇನ್ನು ಹೆಚ್ಚುವರಿಯಾಗಿ, ಶೇ. 10.3 ರಷ್ಟು ವಿದ್ಯಾರ್ಥಿಗಳು ಕಳೆದ ವರ್ಷದಲ್ಲಿ ಇದನ್ನು ಬಳಸಿದ್ದು, ಶೇ. 7.2 ರಷ್ಟು ಮಕ್ಕಳು ಇದನ್ನು ಕಳೆದ ತಿಂಗಳು ಬಳಸಿದ್ದಾರೆ. ಇದರಲ್ಲಿ ತಂಬಾಕು (4%) ಮತ್ತು ಆಲ್ಕೋಹಾಲ್ (3.8%) ನಂತರ, ಒಪಿಯಾಯ್ಡ್‌ಗಳು (2.8%), ಗಾಂಜಾ (2%) ಮತ್ತು ಇನ್ಹಲೇಂಟ್‌ಗಳು (1.9%), ಹೆಚ್ಚಿನ ಒಪಿಯಾಯ್ಡ್ ಬಳಕೆಯು ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಗಳ ಮೂಲಕ ಆಗಿದೆ ಎಂಬುದು ತಿಳಿದು ಬಂದಿದೆ.
For More Updates Join our WhatsApp Group :




