‘ಲ್ಯಾಂಡ್ಲಾರ್ಡ್’ ಸಿನಿಮಾದ ಮೂಲಕ ಜೀತ ಪದ್ಧತಿಯ ಕಠಿಣ ಸತ್ಯ ತೆರೆದಿಟ್ಟ ನಟ.
ದುನಿಯಾ ವಿಜಿ ನಟನೆಯ ‘ಲ್ಯಾಂಡ್ಲಾರ್ಡ್’ ಸಿನಿಮಾ ಕೆಲವೇ ದಿನಗಳ ಹಿಂದೆ ಹಿಡುಗಡೆ ಆಗಿದೆ. ದಲಿತರ, ದಮನಿತರ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ದುನಿಯಾ ವಿಜಯ್, ರಚಿತಾ ರಾಮ್, ದುನಿಯಾ ವಿಜಯ್ ಪುತ್ರಿ, ಶಿಶಿರ್ ಅವರುಗಳು ನಟಿಸಿದ್ದಾರೆ. ಸಿನಿಮಾದ ವಿಲನ್ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ‘ಲ್ಯಾಂಡ್ಲಾರ್ಡ್’ ಸಿನಿಮಾ ಜೀತ ಪದ್ಧತಿಯ ಕತೆಯನ್ನು ಒಳಗೊಂಡಿದೆ. ಸಿನಿಮಾ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ ನಟ ದುನಿಯಾ ವಿಜಯ್, ತಮ್ಮ ಬಾಲ್ಯದಲ್ಲಿ ಅನುಭವಿಸಿದ ನೋವು ಸಂಕಟಗಳನ್ನು ನೆನಪು ಮಾಡಿಕೊಂಡರು. ಜೀತ ಪದ್ಧತಿಯನ್ನು ಹತ್ತಿರದಿಂದ ನೋಡಿರುವುದಾಗಿ ದುನಿಯಾ ವಿಜಿ ಹೇಳಿದರು.
For More Updates Join our WhatsApp Group :



