ತುಮಕೂರಿನಲ್ಲಿ ಧೂಳೆಬ್ಬಿಸಿದ ಬೈಕ್ ರ್ಯಾಲಿ  :ಹಲವು ರಾಜ್ಯಗಳ ರೈಡರ್ಸ್ ಭಾಗಿ

ಗುಬ್ಬಿ ತಾಲೂಕಿನ ಗಡಿ ಭಾಗದಲ್ಲಿ ಕರ್ನಾಟಕ ಮೋಟಾರ್ ಕ್ಲಬ್ ಆಯೋಜಿಸಿದ್ದ ಬೈಕ್  ರ್ಯಾಲಿ  ಯಶಸ್ವಿಯಾಗಿದೆ.

ತುಮಕೂರು : ಮಲೆನಾಡು ಭಾಗವಾದ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಸಾಮಾನ್ಯವಾಗಿ ಆಯೋಜನೆ ಮಾಡುವಂತಹ ಕಾರ್ ಹಾಗೂ ಬೈಕ್ ರ್ಯಾಲಿಗಳನ್ನು ಇದೀಗ ಬಯಲು ಸೀಮೆಯ ತುಮಕೂರಿನಲ್ಲಿ ನಡೆಸಲಾಗುತ್ತಿದ್ದು, ಯುವಸಮೂಹ ಸಂಭ್ರಮಿಸಿತು.

ಗುಬ್ಬಿ ತಾಲೂಕಿನ ಗಡಿ ಭಾಗದ ಶಿವಸಂದ್ರ, ಕಲ್ಲು ಹರದಗೆರೆ, ಕೊರೆ ಭಾಗದಲ್ಲಿ ಶನಿವಾರ ಮತ್ತು ಭಾನುವಾರ ಕರ್ನಾಟಕ ಮೋಟಾರ್ ಕ್ಲಬ್ ಆಯೋಜಿಸಿದ್ದ ‘ಕೆ 1000’ ಬೈಕ್ ರ್ಯಾಲಿ ಯಶಸ್ವಿಯಾಗಿ ಮುಕ್ತಾಯವಾಗಿದೆ.

ಯುವಕ

ನಿಗದಿತ ರೂಟ್ಮ್ಯಾಪ್ನಂತೆ ಮೂರು ಹಂತಗಳಲ್ಲಿ ನಡೆದ ಈ ಸ್ಪರ್ಧೆಯು ಸುಮಾರು 90 ಕಿಲೋಮೀಟರ್ ಕಚ್ಚಾ ರಸ್ತೆಯಲ್ಲಿ ಮತ್ತು ಅರಣ್ಯ ಭಾಗದಲ್ಲಿ ನಡೆಯಿತು. ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಸುಮಾರು 82 ಸ್ಪರ್ಧಿಗಳು ಭಾಗವಹಿಸಿ ಪ್ರಶಸ್ತಿ ಗೆಲುವಿಗೆ ಸೆಣಸಾಟ ನಡೆಸಿದರು. ಇದರಲ್ಲಿ 8 ಮಹಿಳಾ ರೈಡರ್ಸ್ ಕೂಡ ಭಾಗಿಯಾಗಿ ಪುರುಷ ಸ್ಪರ್ಧಿಗಳಂತೆ ಅತ್ಯಂತ ವೇಗವಾಗಿ ಬೈಕ್ ಓಡಿಸಿದರು.

ಗ್ರಾಮೀಣ ಭಾಗದ ಜನರಂತೂ ಬೈಕ್ಗಳು ಬರುವ ವೇಗಕ್ಕೆ ಶಿಳ್ಳೆ ಹಾಕುವ ಮೂಲಕ ಸ್ಪರ್ಧಿಗಳಿಗೆ ಉತ್ಸಾಹ ತುಂಬಿದರು. ರ್ಯಾಲಿ ವೇಳೆ ಅದೆಷ್ಟೋ ಬೈಕ್ಗಳು ಆಕಸ್ಮಿಕವಾಗಿ ಟ್ರ್ಯಾಕ್ ಬಿಟ್ಟು ತೋಟ, ಹೊಲಗಳಿಗೂ ನುಗ್ಗಿದಾಗ ಜನರೇ ಅವರನ್ನು ಎತ್ತಿ ಮತ್ತೆ ಟ್ರಾಕ್ಗೆ ಹೋಗಲು ಸಹಾಯ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ‘ಕೆ 1000’ ಸ್ಪರ್ಧೆಯಲ್ಲಿ ಉಡುಪಿಯ ಸ್ಯಾಮಿಯಲ್ ಜೇಕಬ್, ನಟರಾಜು, ಅಬ್ದುಲ್ ವಾಹಿದ್ ಪ್ರಶಸ್ತಿ ಗೆದ್ದರು. 2014ರಲ್ಲಿ ಬೈಕ್ ರ್ಯಾಲಿ ಇಲ್ಲೇ ನಡೆದಿತ್ತು.

ಕರ್ನಾಟಕ ಮೋಟಾರ್ ಕ್ಲಬ್ ರಾಜ್ಯ ಅಧ್ಯಕ್ಷ ಗೌತಮ್ ಮಾತನಾಡಿ, “ರಾಜ್ಯದ ಹಲವು ಭಾಗಗಳು, ದೇಶದ ವಿವಿಧೆಡೆ ಇಂತಹ ಸ್ಪರ್ಧೆಗಳು ನಡೆಯುತ್ತವೆ. ಈ ವರ್ಷ ಬೆಂಗಳೂರು ವಲಯದಿಂದ ಗುಬ್ಬಿ ತಾಲೂಕಿನಲ್ಲಿ ಸಾಕಷ್ಟು ದೂರದ ರೇಸ್ ನಿರ್ಮಾಣ ಮಾಡುವ ಮೂಲಕ ಒಂದು ದಾಖಲೆ ಸೃಷ್ಟಿಸಿದ್ದೇವೆ. ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್ ಸಿಬ್ಬಂದಿ ಹಾಗು ಗ್ರಾಮಸ್ಥರ ಸಹಕಾರದಿಂದ ಸ್ಪರ್ಧೆ ಯಶಸ್ವಿಯಾಗಿದೆ” ಎಂದು ತಿಳಿಸಿದರು.

ಕರ್ನಾಟಕ ಫೋರ್ಟ್ ಕ್ಲಾಕ್ ಉಪಾಧ್ಯಕ್ಷ ಭಾಸ್ಕರ್ ಗುಪ್ತ, ಕಾರ್ಯದರ್ಶಿ ಸತ್ಯ ವೃತ್ತ, ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್, ಮುಖಂಡ ಕೊಂಡ್ಲಿ ಜಗದೀಶ್, ಈಶ್ವರಯ್ಯ ಸೇರಿದಂತೆ ಹಲವು ರಾಜ್ಯಗಳಿಂದ ಸ್ಪರ್ಧಿಗಳು ಆಗಮಿಸಿದ್ದರು.

Pragati TV Social Connect for more latest u

Leave a Reply

Your email address will not be published. Required fields are marked *