ಅನೇಕರು ತೂಕ ಇಳಿಸಲು ಜಿಮ್, ಡೈಟ್, ಫಿಟ್ನೆಸ್ ಪ್ಲಾನ್ ಮುಂತಾದವುಗಳನ್ನು ಅನುಸರಿಸುತ್ತಾರೆ. ಆದರೆ ಅತಿ ಸರಳವಾಗಿ ತೂಕ ಇಳಿಸಲು ಸಹಾಯ ಮಾಡುವ ಮತ್ತೊಂದು ಉಪಾಯವನ್ನು ನೀವು ಮರೆತಿರಬಹುದು — ಅದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಅಂಜೂರದ ಹಣ್ಣುಗಳನ್ನು ಸೇವಿಸುವುದು.
ಹೌದು, ಬಾದಾಮಿ, ವಾಲ್ನಟ್‌ಗಳಂತೆ ಅಂಜೂರ ಕೂಡ ಬಹುಪಯೋಗಿ ಒಣಹಣ್ಣು. ಇದರಲ್ಲಿ ಫೈಬರ್, ಪೋಟ್ಯಾಸಿಯಮ್, ಕ್ಯಾಲ್ಸಿಯಂ ಹಾಗೂ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ರಾತ್ರಿಯಿಡೀ ನೀರಿನಲ್ಲಿ ನೆನೆಸಿದ ಅಂಜೂರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಹಲವಾರು ಆರೋಗ್ಯ ಲಾಭಗಳನ್ನು ಪಡೆಯಬಹುದು.
ಅಂಜೂರ ಸೇವನೆಯ ಪ್ರಮುಖ ಪ್ರಯೋಜನಗಳು:
ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಅಂಜೂರದಲ್ಲಿ ಇರುವ ಪೊಟ್ಯಾಸಿಯಮ್ ಮತ್ತು ಕ್ಲೋರೊಜೆನಿಕ್ ಆಮ್ಲ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಟೈಪ್-2 ಡಯಾಬಿಟಿಸ್ ನಿಯಂತ್ರಣಕ್ಕೂ ಇದು ಉತ್ತಮ.
ಮಲಬದ್ಧತೆಯ ವಿರುದ್ಧ ಪರಿಣಾಮಕಾರಿ
ಇದರಲ್ಲಿ ಇರುವ ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಪಚನಕ್ರಿಯೆ ಸುಗಮಗೊಳಿಸಿ ಮಲಬದ್ಧತೆಯನ್ನು ನಿವಾರಿಸುತ್ತವೆ.
ತೂಕ ಇಳಿಸಲು ಸಹಕಾರಿ
ಪ್ರತಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಅಂಜೂರ ಸೇವನೆಯು ನೈಸರ್ಗಿಕವಾಗಿ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೂಳೆಗಳನ್ನು ಬಲಪಡಿಸುತ್ತದೆ
ಅಂಜೂರವು ಕ್ಯಾಲ್ಸಿಯಂನಿಂದ ಕೂಡಿದ್ದು, ಮೂಳೆಗಳಿಗೆ ಅಗತ್ಯವಿರುವ ಶಕ್ತಿ ಒದಗಿಸುತ್ತದೆ. ಹಾಲು ಹೇಗೆ ಮೂಳೆಗಳಿಗೆ ಉಪಯೋಗವೋ, ಅದೇ ರೀತಿಯಲ್ಲಿ ಅಂಜೂರ ಕೂಡ ಸಹಾಯ ಮಾಡುತ್ತದೆ.
ರಕ್ತದೊತ್ತಡ ಹಾಗೂ ಹೃದಯ ಆರೋಗ್ಯಕ್ಕೆ ಉತ್ತಮ
ಇದರಲ್ಲಿ ಪೋಟ್ಯಾಸಿಯಮ್ ಇರುವುದರಿಂದ ಬಿಪಿ ನಿಯಂತ್ರಣವಾಗುತ್ತದೆ. ಜೊತೆಗೆ, ಕೊಲೆಸ್ಟ್ರಾಲ್ ಕಡಿಮೆಯಾಗುವ ಮೂಲಕ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವೂ ತಗ್ಗುತ್ತದೆ.
ಊರ್ಜಾವಂತ ದಿನಕ್ಕಾಗಿ ಬೆಳಿಗ್ಗೆ 2-3 ನೆನೆಸಿದ ಅಂಜೂರ ಸೇವಿಸಿ!
ಹೆಚ್ಚು ಶಕ್ತಿ, ಉತ್ತಮ ಪಚನಕ್ರಿಯೆ ಮತ್ತು ದೀರ್ಘಕಾಲದ ಆರೋಗ್ಯದ ರಕ್ಷಣೆಗೆ ಅಂಜೂರ ಉತ್ತಮ ಆಯ್ಕೆಯಾಗಿದೆ. ಈಗಲಾದರೂ ನಿಮ್ಮ ದಿನಚರಿಯಲ್ಲಿಗೆ ಅಂಜೂರವನ್ನು ಸೇರಿಸಿ!
For More Updates Join our WhatsApp Group :




