ಆಡಳಿತಾರೂಢ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಗಳು ಪ್ರಯತ್ನ ನಡೆಸುತ್ತಿರುವ ವರದಿ
11.09.2024 : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ನಿವೇಶನ ಹಂಚಿಕೆ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಎಳೆದು ತಂದು ವಿವಾದ ಸೃಷ್ಟಿಸಿದ ಬೆನ್ನಲ್ಲಿ ಆಡಳಿತಾರೂಢ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಗಳು ಪ್ರಯತ್ನ ನಡೆಸುತ್ತಿರುವ ವರದಿಗಳು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರದ ಕುರಿತಾಗಿ ವಿವರಗಳನ್ನು ಸಂಗ್ರಹಿಸಿದ ಪಕ್ಷದ ವರಿಷ್ಠ ಮಂಡಲಿ ಅವರಿಗೆ ಎಲ್ಲ ರೀತಿಯ ಬೆಂಬಲ ವ್ಯಕ್ತಪಡಿಸಿದ್ದು ಕಾನೂನು ಹೋರಾಟಕ್ಕೆ ಜೊತೆಯಾಗಿದೆ. ಈ ಮೂಲಕ ಮುಖ್ಯಮಂತ್ರಿ ಸ್ಥಾನ ತೆರವಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೋದರ ಡಿ.ಕೆ. ಸುರೇಶ್ದೆಹಲಿಗೆ ನೀಡಿದ ಭೇಟಿಯ ನಂತರ ರಾಜ್ಯದಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಹುದ್ದೆಯಲ್ಲಿ ಪೂರ್ಣಾವಧಿ ಮುಗಿಸಲಿದ್ದಾರೆ ಎಂದು ಸ್ಪಷ್ಟನೆ ನೀಡಿ ಈ ಸಂಬಂಧದ ವದಂತಿಗಳಿಗೆ ತೆರೆ ಎಳೆದಿದ್ದಾರೆ.ಆದರೂ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಕುರಿತಾಗಿ ಹೇಳಿಕೆಗಳನ್ನು ನೀಡುತ್ತಾ ಪ್ರಚಾರದಲ್ಲಿ ಉಳಿಯಲು ಕಸರತ್ತು ನಡೆಸುತ್ತಿದ್ದಾರೆ.
2023ರ ವಿಧಾನಸಭೆಚುನಾವಣೆಯಲ್ಲಿರಾಜ್ಯದ ಮತದಾರರು ಹಿಂದಿನ ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಉಸಿರು ಕಟ್ಟಿಸುವಂತೆ ನಡೆಯುತ್ತಿದ್ದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಿದ್ದ ವಿದ್ಯಮಾನಗಳ ವಿರುದ್ಧ ಮತನೀಡಿ ಅಂದಿನ ಆಡಳಿತ ಪಕ್ಷ ಅಧಿಕಾರದ ಹತ್ತಿರವೂ ಸುಳಿಯದಂತೆ ಕೇವಲ 66 ಸ್ಥಾನಗಳಿಗೆ ಅದರ ಸಂಖ್ಯಾಬಲವನ್ನು ಇಳಿಸಿದ್ದರು.224 ಸದಸ್ಯಬಲದರಾಜ್ಯ ವಿಧಾನಸಭೆಯಲ್ಲಿ 123 ಸ್ಥಾನಗಳನ್ನು ಗೆದ್ದುಅಧಿಕಾರಕ್ಕೆ ಬರುವುದಕ್ಕಾಗಿ ಪಂಚ ರತ್ನಗಳ ಸೂತ್ರವನ್ನು ಮುಂದಿಟ್ಟಿದ್ದ ಜೆಡಿಎಸ್ ಪಕ್ಷದ ಬಲವನ್ನು 19ಕ್ಕೆ ಕುಗ್ಗಿಸಿದ್ದರು.
ರಾಜ್ಯಕ್ಕೆ ಸುಭದ್ರ ಸರ್ಕಾರ ಸಿಗಲಿ ಎಂಬ ದೃಷ್ಟಿಯಿಂದ ಕಾಂಗ್ರೆಸ್ಸಿಗೆ 136 ಸ್ಥಾನಗಳ ನಿಚ್ಚಳ ಬಹುಮತ ನೀಡಿದ್ದರು. ಈಚಿನ ದಶಕಗಳಲ್ಲಿ ಬಹುಮತ ಇಲ್ಲದಿದ್ದರೂ ಚುನಾಯಿತ ಪ್ರತಿನಿಧಿಗಳನ್ನು ಆಸೆ ಆಮಿಷಗಳಿಂದ ಇಲ್ಲವೇತೆರಿಗೆ ದಾಳಿಯ ಭಯ ಹುಟ್ಟಿಸುವ ಮೂಲಕ ಸೆಳೆದು ಸರ್ಕಾರವನ್ನು ಪತನಗೊಳಿಸಿ ಅಡ್ಡ ಹಾದಿಯಿಂದ ಸರ್ಕಾರ ರಚಿಸುವ ಕುತಂತ್ರದ ರಾಜಕಾರಣಕ್ಕೆ ಆಸ್ಪದವಾಗದಂತೆ ಅಗತ್ಯಕ್ಕಿಂತಲೂ 23 ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ಸಿಗೆ ನೀಡಿ ಸುಭದ್ರ ಸರ್ಕಾರರಚಿಸಲು ಆಶೀರ್ವಾದ ಮಾಡಿದ್ದರು.
ಕಾಂಗ್ರೆಸ್ಸಿನ ಚುನಾವಣೆ ಪ್ರಣಾಳಿಕೆಯ ಅಂಶಗಳು, ಗ್ಯಾರಂಟಿಯ ಭರವಸೆಗಳ ಜೊತೆಗೆ 2013ರಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನುಡಿದಂತೆ ನಡೆದ’ ದಾಖಲೆಯನ್ನು ಮತದಾರರು ಗಮನಿಸಿ ತಮ್ಮ ತೀರ್ಪನ್ನು ನೀಡಿರುವುದನ್ನು ಚುನಾವಣಾ ವಿಶ್ಲೇಷಕರು ಗುರುತಿಸಿದ್ದರು.ರಾಜ್ಯವನ್ನು ಹಸಿವಿನಿಂದ ಮುಕ್ತಗೊಳಿಸಲು ಆರಂಭಿಸಿದ್ದ ಅನ್ನ ಭಾಗ್ಯ ಸೇರಿದಂತೆ ಹಲವು ಭಾಗ್ಯಗಳನ್ನು ತಮ್ಮ ಮೊದಲ ಅಧಿಕಾರದ ಅವಧಿಯಲ್ಲಿ ನೀಡಿದ್ದ ಸಿದ್ದರಾಮಯ್ಯ ಅವರನ್ನು ಭಾಗ್ಯಗಳ ಸರದಾರ’ ಎಂದು ಬಣ್ಣಿಸಲಾಗಿತ್ತು.
ರಾಜ್ಯದಎಲ್ಲ ಪ್ರದೇಶಗಳಲ್ಲಿಯೂ ಅವರ ಅಭಿಮಾನಿಗಳಿದ್ದು ಅದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗದೆ ಎಲ್ಲ ವರ್ಗಗಳ ಜನರ ಪ್ರೀತಿ ಅಭಿಮಾನಗಳನ್ನು ಪಡೆದ ಜನ ನಾಯಕನನ್ನಾಗಿ ರೂಪಿಸಿದ್ದನ್ನು ಪಕ್ಷದ ವರಿಷ್ಠ ನಾಯಕರು ಚುನಾವಣೆ ಪ್ರಚಾರ ಸಂದರ್ಭದಲ್ಲಿಯೂ ಗುರುತಿಸಿದ್ದರು. ರಾಜ್ಯದಜನ ವಿರೋಧ ಪಕ್ಷದ ನಾಯಕರಾಗಿ ದ್ದಾಗ ಅವರ ಎಪ್ಪತ್ತೈದನೇ ವರ್ಷದ ಜನ್ಮದಿನವನ್ನು ಸಿದ್ದರಾಮೋತ್ಸವವಾಗಿ ರಾಜ್ಯದಕೇಂದ್ರ ಸ್ಥಳವಾದ ದಾವಣಗೆರೆಯಲ್ಲಿ ಆಚರಿಸಿ ಸಂಭ್ರಮಪಟ್ಟಿದ್ದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದ ಅಭೂತ ಪೂರ್ವ ಗೆಲುವಿಗೆ ಸಿದ್ದರಾಮಯ್ಯ ಅವರ ವೈಯಕ್ತಿಕ ವರ್ಚಸ್ಸಿನ ಮಾತ್ರವೂ ಕಾರಣವಾಗಿತ್ತುಎಂಬುದನ್ನು ಪಕ್ಷದ ವರಿಷ್ಠ ನಾಯಕರು ಚುನಾವಣೆ ಪ್ರಚಾರ ಕಾಲದಲ್ಲಿ ಮತ್ತು ರಾಜಕೀಯ ಸಮಾವೇಶಗಳ ಸಂದರ್ಭದಲ್ಲಿ ಖುದ್ದಾಗಿ ಕಂಡಿದ್ದರು. ಆದ್ದರಿಂದಲೇ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ನಿರ್ವಿವಾದವಾಗಿ ಸಿದ್ದರಾಮಯ್ಯನವರನ್ನು ಆಯ್ಕೆ ಮಾಡಿ ಎರಡನೇ ಸಲಕ್ಕೆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವುದಕ್ಕೆ ಅನುವು ಮಾಡಿಕೊಟ್ಟರು.
ರಾಜ್ಯದ ಆಡಳಿತ ಪಕ್ಷದ ಇಂದಿನ ಚುನಾಯಿತ ಪ್ರತಿನಿಧಿಗಳಲ್ಲಿ ಮುಖ್ಯಮಂತ್ರಿ ಸ್ಥಾನ ನಿರ್ವಹಿಸಬಲ್ಲ ಸಾಮರ್ಥ್ಯದ ಹಲವು ಮುಖಂಡರು ಇರುವುದು ಕಾಂಗ್ರೆಸ್ ಪಕ್ಷದ ಶಕ್ತಿ. ಆದರೆ ಸದ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಸರಿಯಾದ ಕಾರ್ಯಕ್ರಮಗಳನ್ನು ರೂಪಿಸಿ ಜನಪರವಾಗಿ ಮುಂದುವರಿಯಲಿ ಎಂದೇ ಜನ ಅಪೇಕ್ಷೆ ಪಟ್ಟಿದ್ದಾರೆ.ಮುಡಾ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿರುವ ಸಂದರ್ಭದಲ್ಲಿ ಪಕ್ಷದ ವರಿಷ್ಠ ಮಂಡಲಿಯೂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿರುವಾಗ ಸದ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಅಪ್ರಸ್ತುತವಾಗಿದೆ.ಜನಾದೇಶಕ್ಕೆ ವಿರುದ್ಧವೂ ಆಗಿದೆ.
2023ರ ವಿಧಾನ ಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ನಿರ್ಣಾಯಕ ತೀರ್ಪನ್ನು ನೀಡಿ ಮುಂದಿನ ಐದು ವರ್ಷ ಆಡಳಿತ ನಡೆಸಲು ಆದೇಶಿಸಿರುವುದರಿಂದ ಸರ್ಕಾರವನ್ನು ಬೀಳಿಸುವ, ಅಸ್ಥಿರಗೊಳಿಸುವ, ಚುನಾಯಿತ ಪ್ರತಿನಿಧಿಗಳನ್ನು ವಾಮಮಾರ್ಗದಿಂದ ಸೆಳೆದು ಅಧಿಕಾರ ಹಿಡಿಯಲು ನಡೆಸುವ ಯಾವುದೇ ಪ್ರಯತ್ನರಾಜ್ಯದಜನತೆಗೆ ಎಸಗುವ ಅಪಮಾನವಾಗುತ್ತದೆ. ಅದಕ್ಕೆ ಮತದಾರರೇತಕ್ಕ ಪಾಠ ಕಲಿಸುತ್ತಾರೆ