ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿಯಾಗಿ ನೀಡಲಾಗುತ್ತಿದ್ದ ನಗದಿಗೆ ಬದಲಾಗಿ ಅಡುಗೆಎಣ್ಣೆ, ಬೇಳೆ, ಸಕ್ಕರೆ ಮತ್ತುಉಪ್ಪು ಒಳಗೊಂಡ ದಿನಸಿ ಕಿಟ್‌ಅನ್ನು ಬರುವಅಕ್ಟೋಬರ್ ತಿಂಗಳಿನಿAದ ವಿತರಿಸಲು ನಿರ್ಧರಿಸಿರುವುದು ಫಲಾನುಭವಿಗಳು ಬಹುಕಾಲದಿಂದ ವ್ಯಕ್ತಪಡಿಸುತ್ತಿದ್ದ ಬೇಡಿಕೆಯನ್ನು ಈಡೇರಿಸಿದಂತಾಗಿದೆ.
ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿರೂಪಿಸುವುದಕ್ಕೆ 2013ರ ಮೇ 13ರಂದು ಅಧಿಕಾರ ಸ್ವೀಕರಿಸಿದ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡತನದರೇಖೆಯ ಕೆಳಗಿರುವ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು ತಲಾಐದುಕಿಲೋಗ್ರಾಂಅಕ್ಕಿಯನ್ನುಉಚಿತವಾಗಿಒದಗಿಸುವಅನ್ನಭಾಗ್ಯಯೋಜನೆಯನ್ನು ಪ್ರಕಟಿಸಿದ್ದರು.ಕೆಲವು ತಿಂಗಳ ನಂತರಅಕ್ಕಿಯ ಪ್ರಮಾಣವನ್ನುತಲಾ ಏಳು ಕೆಜಿಗೆ ಹೆಚ್ಚಿಸಲಾಗಿತ್ತು.
2013ರಿಂದ ಐದು ವರ್ಷಗಳವರೆಗೆ ಮುಂದುವರಿದ ಈ ಯೋಜನೆ ನಂತರದರಾಜಕೀಯ ಅಸ್ಥಿರತೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರದಅವಧಿಯಲ್ಲಿಕುಂಠಿತವಾಗಿಉಚಿತವಾಗಿ ನೀಡುತ್ತಿದ್ದಅಕ್ಕಿಯ ಪ್ರಮಾಣ ಮೂರುಕೆಜಿಗೆ ಇಳಿದಿತ್ತು.ಇದನ್ನು ಗಮನಿಸಿದ್ದ ಕಾಂಗ್ರೆಸ್ 2023ರ ವಿಧಾನಸಭೆಚುನಾವಣೆ ಪೂರ್ವದಲ್ಲಿಜನತೆಗೆಉಚಿತಅಕ್ಕಿಯ ಪ್ರಮಾಣವನ್ನು ಹತ್ತುಕೆಜಿಗೆ ಹೆಚ್ಚಿಸುವ ಭರವಸೆ ನೀಡಿತ್ತು.
ಚುನಾವಣೆ ನಂತರ ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ ಮತದಾರರಿಗೆ ನೀಡಿದ ಭರವಸೆಯಂತೆತಲಾ ಹತ್ತುಕೆಜಿಯಂತೆ ನೀಡುವುದಕ್ಕೆಕೊರತೆಯನ್ನು ಎದುರಿಸಿ ಭಾರತಆಹಾರ ನಿಗಮದಿಂದ ಅಗತ್ಯವಾದ ಅಕ್ಕಿಯನ್ನು ಕೊಳ್ಳಲು ಮುಂದಾದಾಗಚುನಾವಣೆ ಫಲಿತಾಂಶದಿಂದ ಅಸಂತುಷ್ಟವಾಗಿದ್ದ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಗಳಿಗೆ ಆಹಾರ ನಿಗಮದಿಂದ ಅಕ್ಕಿ ಮಾರುವುದನ್ನು ನಿಷೇಧಿಸಿ ಅಸಹಕಾರ ತೋರಿಸಿತು. ಅನ್ನಭಾಗ್ಯಯೋಜನೆಯ ಅನ್ವಯತಲಾ ಹತ್ತುಕೆಜಿ ಅಕ್ಕಿ ನೀಡುವುದಕ್ಕೆ ಬದ್ಧವಾಗಿದ್ದರಾಜ್ಯ ಸರ್ಕಾರ ಐದು ಕೆಜಿ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ ನೀಡಬೇಕಿದ್ದಇನ್ನೂಐದು ಕೆಜಿ ಅಕ್ಕಿಯ ಬದಲಿಗೆ ಪ್ರತಿ ಕಿಲೋ ಅಕ್ಕಿಗೆ ರೂ 34 ರಂತೆಒಟ್ಟುರೂ 170 ನಗದನ್ನು ಫಲಾನುಭವಿ ಕುಟುಂಬಗಳಿಗೆ ವರ್ಗಾಯಿಸಿ ಯೋಜನೆಯ ಅನುಷ್ಠಾನವನ್ನು ಸಮರ್ಪಕಗೊಳಿಸಿತ್ತು.
ಅನ್ನಭಾಗ್ಯ ಯೋಜನೆಯಲ್ಲಿ ತಲಾ ಐದು ಕೆಜಿ ಅಕ್ಕಿಯ ಬದಲಿಗೆ ನಗದನ್ನು ಪಡೆಯುತ್ತಿರುವ ಫಲಾನುಭವಿಗಳ ಸಂಖ್ಯೆರಾಜ್ಯದಲ್ಲಿ 4.8 ಕೋಟಿಇದ್ದು ಕಳೆದ ಸಾಲಿನಲ್ಲಿ ಸರ್ಕಾರರೂ.7,763 ಕೋಟಿಯನ್ನುಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿದೆ.ಅಕ್ಕಿಯ ಬದಲಿಗೆ ನಗದನ್ನು ನೀಡುವುದಕ್ಕೆ ರ‍್ಯಾಯವಾಗಿಕುಟುಂಬಕ್ಕೆಅವಶ್ಯಕವಾದಅಡುಗೆಎಣ್ಣೆ, ಬೇಳೆ ಮೊದಲಾದ ದಿನಸಿ ನೀಡುವಂತೆ ಫಲಾನುಭವಿಗಳಿಂದ ಬರುತ್ತಿದ್ದ ಬೇಡಿಕೆಯನ್ನು ಅನುಲಕ್ಷಿಸಿ ಈಗ ಪ್ರತಿಕುಟುಂಬಕ್ಕೆ ದಿನಸಿ ಕಿಟ್ ಪೂರೈಸಲುರಾಜ್ಯ ಸರ್ಕಾರ ನಿರ್ಧರಿಸಿದೆ.ಅದರ ವಿಧಿ ವಿಧಾನಗಳು ನಡೆಯುತ್ತಿದ್ದುಅಕ್ಟೋಬರ್‌ಒಂದರಿಂದ ಈ ದಿನಸಿ ಕಿಟ್ ಪೂರೈಕೆಯೋಜನೆಜಾರಿಗೆ ಬರಲಿದೆ.
ಫಲಾನುಭವಿಗಳ ಸಮೀಕ್ಷೆಯನ್ನುರಾಜ್ಯದಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಡೆಸಿದಾಗ ಶೇ 93ರಷ್ಟು ಮಂದಿ ಹೆಚ್ಚುವರಿಐದುಕೆಜಿಅಕ್ಕಿಯ ಬದಲಿಗೆಅಡುಗೆಎಣ್ಣೆ, ಬೇಳೆಯನ್ನು ಒದಗಿಸಲು ಬೇಡಿಕೆ ಸಲ್ಲಿಸಿರುವುದನ್ನು ಗಮನಿಸಿ ಇಲಾಖೆ ನಿರ್ಧಾರತೆಗೆದುಕೊಂಡಿದೆ.ಆಹಾರ ಭದ್ರತಾಯೋಜನೆಅನ್ವಯ ನೀಡಲಾಗುತ್ತಿರುವಐದುಕೆಜಿ ಅಕ್ಕಿ ಪ್ರಮಾಣವನ್ನು ಮೂರುಕೆಜಿಗೆ ಇಳಿಸಿ ಎರಡುಕೆಜಿರಾಗಿಇಲ್ಲವೇ ಜೋಳ ನೀಡುವಂತೆ ಫಲಾನುಭವಿಗಳು ಸಲ್ಲಿಸಿದ ಬೇಡಿಕೆಯನ್ನೂ ಇಲಾಖೆ ಪರಿಗಣಿಸಿ ಅದರಂತೆ ಪೂರೈಕೆಗೆ ವ್ಯವಸ್ಥೆ ಮಾಡಿದೆ.
ಅನ್ನಭಾಗ್ಯ ಸೇರಿದಂತೆರಾಜ್ಯದಕಾAಗ್ರೆಸ್ ಸರ್ಕಾರಜಾರಿಗೆತಂದಿರುವಗೃಹಜ್ಯೋತಿ, ಗೃಹಲಕ್ಷಿö್ಮÃ, ಶಕ್ತಿ ಮತ್ತುಯುವನಿಧಿ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಮಾತ್ರವಲ್ಲದೆ, ದೇಶದಇತರೆ ರಾಜ್ಯಗಳಲ್ಲಿಯೂ ಅನುಸರಿಸಬಹುದಾದಜನಕಲ್ಯಾಣದ ಯೋಜನೆಗಳಾಗಿ ಚರ್ಚೆಗೆ ಬಂದಿರುವ ವರದಿಗಳಿವೆ. ಬಡವರಿಗೆ ನೆರವಾಗುವ ಬಗ್ಗೆ, ಅವಕಾಶ ವಂಚಿತ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸುವ ಸಾಮಾಜಿಕ ನ್ಯಾಯದಂಥ ಸಾಮಾಜಿಕ ಪರಿವರ್ತನೆಗೆ ಮೊದಲಿನಿಂದಲೂ ವಿರೋಧಇದ್ದರಾಜಕೀಯ ಪಕ್ಷಗಳು ಈ ಜನಕಲ್ಯಾಣ ಯೋಜನೆಗಳ ಅನುಷ್ಠಾನದ ವಿಷಯದಲ್ಲಿಅಸಮಾಧಾನ ವ್ಯಕ್ತಪಡಿಸುವುದನ್ನು ಸರ್ಕಾರ ಲಕ್ಷಿಸಿ ಈ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿಜಾರಿಯಾಗುವಂತೆ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿಗ್ಯಾರಂಟಿಉಸ್ತುವಾರಿಗೆಎಲ್ಲ ಹಂತಗಳಲ್ಲಿ ಅಧಿಕಾರಿಗಳು ಮತ್ತುಅಧಿಕಾರೇತರ ಸದಸ್ಯರ ಸಮಿತಿಗಳನ್ನು ಸರ್ಕಾರ ರಚಿಸಿದ್ದರೂ ಆ ಸಮಿತಿ ಸದಸ್ಯರುತಮ್ಮರಾಜಕೀಯ ಪುನರ್‌ವಸತಿಯಅವಕಾಶವೆಂದು ಭಾವಿಸದೆ ಯೋಜನೆಗಳ ಲಾಭ ನಿಜವಾಗಿಯೂಅರ್ಹರಿಗೆತಲುಪುವಂತೆ ಮತ್ತುಅನರ್ಹರಿಗೆ ದುರ್ಬಳಕೆಯಾಗದಂತೆ ನೋಡಿಕೊಳ್ಳುವ ಎಚ್ಚರ ವಹಿಸಬೇಕಾಗಿದೆ.