ಮಂಗಳೂರು: ರಸ್ತೆ ಗುಂಡಿಗಳ ವಿಚಾರವಾಗಿ ಪುತ್ತೂರು ನಗರಸಭೆ ಕಮಿಷನರ್ಗೆ ದೂರವಾಣಿ ಕರೆ ಮಾಡಿ ಶಾಸಕ ಅಶೋಕ್ ಕುಮಾರ್ ರೈ ತರಾಟೆಗೆ ಪಡೆದಿದ್ದಾರೆ. ಕಾರಿನಲ್ಲಿ ಹೋಗುವಾಗ ರಸ್ತೆ ಗುಂಡಿಗಳನ್ನು ಕಂಡು ಗರಂ ಆದ ಶಾಸಕರು, ರಸ್ತೆ ಗುಂಡಿಗಳನ್ನು ಮುಚ್ಚಿ ಎಂದು ಎಷ್ಟು ಸಲ ಹೇಳಬೇಕು.
ನಾನು ಹೇಳೋ ಭಾಷೆ ನಿಮಗೆ ಅರ್ಥವಾಗುತ್ತೋ ಇಲ್ಲವೋ? ಎಲ್ಲದಕ್ಕೂ ಇಂಜಿನಿಯರ್ ಅಂದ್ರೆ ಕಮಿಷನರ್ ಆಗಿ ನೀವು ಏಕೆ? ಎಲ್ಲದ್ದಕ್ಕೂ ಕೆಳ ಹಂತದ ಅಧಿಕಾರಗಳತ್ತ ಕೈ ತೋರಿಸುತ್ತೀರಾ? ಈ ರಸ್ತೆಯಲ್ಲಿ ಹೋಗುವ ಜನ ಇಲ್ಲಿ ಸಾಯುತ್ತಿದ್ದಾರೆ. ಹೀಗಿರುವಾಗ ಮುಂದಿನ ಮಳೆಗಾಲದವರೆಗೂ ಕಾಲ ಕಳೆಯುತ್ತೀರಾ? ನಾಳೆ ಕೆಲಸ ಆಗದಿದ್ರೆ ಮತ್ತೆ ಏನು ಮಾಡುತ್ತೇನೆ ಅಂತಾ ನೋಡಿ ಎಂದು ಎಚ್ಚರಿಕೆ ನೀಡಿದ್ದಾರೆ.
For More Updates Join our WhatsApp Group :
