ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇಗುಲದ ಆನೆ ಗಂಗಾಶ್ರೀ ನಿಧನ : ಭಕ್ತರ ಕಂಬನಿ

ಕೋಲಾರ: ತೀವ್ರ ಅಸ್ವಸ್ಥತೆ ಹಾಗೂ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇಗುಲದ ಆನೆ ಗಂಗಾಶ್ರೀ (74) ನಿನ್ನೆ ಸಂಜೆ ಕೊನೆಯುಸಿರೆಳೆದಿದೆ. ಮೃತ ಗಂಗಾಶ್ರೀ ಆನೆಗೆ ಕೋಲಾರ ತಾಲೂಕಿನ ಖಾಜಿಕಲ್ಲಹಳ್ಳಿ ಗ್ರಾಮದ ಆನೆ ಶಿಬಿರಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಅನಾರೋಗ್ಯ ಕಾರಣ ಕಳೆದ ವರ್ಷ ಮಾರ್ಚ್ 13 ರಂದು ಆನೆಗಳ ಪುನರ್ವಸತಿ ಕೇಂದ್ರಕ್ಕೆ ಕರೆತರಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಗಂಗಾಶ್ರೀ ಆನೆ ಕಳೆದ ಎರಡು ತಿಂಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಗಂಗಾಶ್ರೀ ಆನೆ ಸಾವನ್ನಪ್ಪಿದೆ. ಈ ಕುರಿತು ಕೋಲಾರ ಜಿಲ್ಲಾ ಅರಣ್ಯಾಧಿಕಾರಿ ಏಡುಕೊಂಡಲು ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ಸಾಲು ಸಾಲು ಆನೆಗಳ ಸಾವು

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದ ಆನೆ ‘ಅಶ್ವತ್ಥಾಮ’ ಮೃತಪಟ್ಟ ಬೆನ್ನಲ್ಲೇ ಇಂದು ಮತ್ತೊಂದು ಕಾಡಾನೆ ಸಾವು ಸಾವನ್ನಪ್ಪಿದೆ. ಸುಮಾರು 25 ರಿಂದ 30 ವರ್ಷದ ಕಾಡಾನೆ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಾವನ್ನಪ್ಪಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದ್ದಾರೆ. ಆನೆ ಮರಣೋತ್ತರ ಪರೀಕ್ಷೆ ನಡೆಸಿರುವ ಅರಣ್ಯ ಇಲಾಖೆ ವೈದ್ಯಧಿಕಾರಿಗಳು, ಮೃತದೇಹದ ಅಂತಸಂಸ್ಕಾರ ನಡೆಸಿದ್ದಾರೆ.

ಕೆಲದಿನಗಳ ಹಿಂದೆ ವಿದ್ಯುತ್ ಸ್ಪರ್ಶದಿಂದ ದಸರಾ ಆನೆ ಅಶ್ವತ್ಥಾಮ ಮೃತಪಟ್ಟಿತ್ತು. ಈ ಕುರಿತಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು. 38 ವರ್ಷ ಅಶ್ವತ್ಥಾಮ ಆನೆಯು ಎರಡು ಬಾರಿ ಮೈಸೂರು ದಸರಾದಲ್ಲಿ ಪಾಲ್ಗೊಂಡಿತ್ತು. ಅಲ್ಲದೇ ಹಲವು ಬಾರಿ ಕಾಡಾನೆ ಸೆರೆ ಹಿಡಿಯುವ, ಹುಲಿ ಹಿಡಿಯುವ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿತ್ತು. ಅಲ್ಲದೇ ಉತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಉತ್ತಮವಾಗಿ ಪಳಗಿತ್ತು.

Leave a Reply

Your email address will not be published. Required fields are marked *