ಉತ್ಪಾದನಾ ವಲಯದ ಉದ್ಯೋಗಾವಕಾಶ : ಮುಂಬೈ ಹಿಂದಿಕ್ಕಿದ ಬೆಂಗಳೂರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ಕೇವಲ ಟೆಕ್ ಆವಿಷ್ಕಾರದ ಕೇಂದ್ರವಲ್ಲ, ಉತ್ಪಾದನಾ ಕಾರ್ಖಾನೆಗಳಿಗೆ ಶಕ್ತಿ ಕೇಂದ್ರವಾಗಿ ಸಿಲಿಕಾನ್ ಸಿಟಿ ಹೊರಹೊಮ್ಮುತ್ತಿದೆ.

ಹೌದು.. ಉತ್ಪಾದನಾ ವಲಯದ ಉದ್ಯೋಗಾವಕಾಶ ವಿಚಾರದಲ್ಲಿ ಬೆಂಗಳೂರು ನಗರ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರಿಯನ್ನೂ ಕೂಡ ಹಿಂದಿಕ್ಕಿದ್ದು, ಬೆಂಗಳೂರಿನ ಉತ್ಪಾದನಾ ವಲಯದ ಉದ್ಯೋಗಾವಕಾಶ ಪ್ರಮಾಣ ಶೇ.21ಕ್ಕೆ ಏರಿಕೆಯಾಗಿದೆ. ಆ ಮೂಲಕ ಉತ್ಪಾದನಾ ವಲಯದ ಉದ್ಯೋಗಾವಕಾಶಗಳಲ್ಲಿ ಮುಂಚೂಣಿಯಲ್ಲಿದೆ.

ಜಾಬ್ ಕನ್ಸಲ್ಟಿಂಗ್ ಸಂಸ್ಥೆ ಇಶ್ವಾ ಕನ್ಸಲ್ಟಿಂಗ್ ಸಂಸ್ಥೆಯ ಪ್ರಕಾರ ಉತ್ಪಾದನಾ ವಲಯದ ಉದ್ಯೋಗಾವಕಾಶ ವಿಚಾರದಲ್ಲಿ ಬೆಂಗಳೂರು ನಗರ ಅಗ್ರ ಸ್ಥಾನದಲ್ಲಿದ್ದು, ಶೇ.16% ಉದ್ಯೋಗಾವಕಾಶಗಳೊಂದಿಗೆ ಮುಂಬೈ ನಗರ 2ನೇ ಸ್ಥಾನದಲ್ಲಿದೆ.

ಸಂಸ್ಥೆ ತನ್ನ ಟ್ಯಾಲೆಂಟ್ ಇನ್‌ಸೈಟ್ಸ್ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್‌ನಲ್ಲಿನ ತನ್ನ ವರದಿಯಲ್ಲಿ, ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಈ ಉತ್ಪಾದನಾ ವಲಯವು ವೇತನ ಹೆಚ್ಚಳದಲ್ಲಿ ಪ್ರಗತಿ ಸಾಧಿಸುವ ನಿರೀಕ್ಷೆಯಿದೆ ಎಂದು ಸಂಸ್ಥೆ ಹೇಳಿದೆ. ಉತ್ಪಾದನಾ ಕಂಪನಿಗಳು ಮತ್ತು ಹೊಸ ಯುಗದ ಐಟಿ ಕಂಪನಿಗಳ ವೇತನ ರಚನೆಗಳು ಉತ್ಪಾದನಾ ವಲಯದಲ್ಲಿ ಗಮನಾರ್ಹವಾಗಿ ಭಿನ್ನವಾಗಿವೆ.

ಹೆಚ್ಚಿನ ಪ್ರಮಾಣದ ಉದ್ಯೋಗಗಳು ಕಡಿಮೆ ಸಂಬಳದ 0 – ರೂ 6 ಲಕ್ಷದೊಳಗೆ ಬರುತ್ತವೆ. ಆದರೆ, ಹೊಸ ಯುಗದ ಐಟಿ ಕಂಪನಿಗಳು ಪ್ರಧಾನವಾಗಿ ರೂ 6 -25 ಲಕ್ಷದ ಮಧ್ಯ ಶ್ರೇಣಿಯ ವೇತನ ಶ್ರೇಣಿಯಲ್ಲಿ ಉದ್ಯೋಗಾವಕಾಶಗಳನ್ನು ನೀಡುತ್ತಿವೆ.

25 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಸಂಬಳದ ಪ್ಯಾಕೇಜ್‌ಗಳಿಗೆ, ಎರಡೂ ವಲಯಗಳಲ್ಲಿ ಉದ್ಯೋಗಾವಕಾಶಗಳ ಸಂಖ್ಯೆ ಒಂದೇ ಆಗಿರುತ್ತದೆ. ಕಳೆದ ಹಣಕಾಸು ವರ್ಷದ ಮೌಲ್ಯಮಾಪನಗಳನ್ನು ಒಳಗೊಂಡಿರುವ ಇಶ್ವಾ ಸಂಸ್ಥೆಯ 2024 ರ ಮೌಲ್ಯಮಾಪನ ವರದಿಯು ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಉತ್ಪಾದನಾ ಕೇಂದ್ರಗಳಿಂದ ಹೆಚ್ಚಿನ ಸರಾಸರಿ ಹೆಚ್ಚಳವನ್ನು ವರದಿ ಮಾಡಿದೆ. ಅವುಗಳ ಪೂರ್ವ ಮತ್ತು ಉತ್ತರದ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕಡಿಮೆ ಹೆಚ್ಚಳದೊಂದಿಗೆ ವರದಿಯಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *