BMTC ಕಂಡಕ್ಟರ್ ಹುದ್ದೆಗೆ ಪರೀಕ್ಷೆ, ಕಾಪಿ ಚೀಟಿ ಪತ್ತೆ ಆರೋಪ

ಪರೀಕ್ಷಾ ಕೇಂದ್ರದಲ್ಲಿ ಕಾಪಿ ಚೀಟಿ ಪತ್ತೆ ಆರೋಪ

ಪರೀಕ್ಷಾ ಕೇಂದ್ರದಲ್ಲಿ ಕಾಪಿ ಚೀಟಿ ಪತ್ತೆ ಆರೋಪ

ಧಾರವಾಡ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (ಬಿಎಂಟಿಸಿ) ಖಾಲಿ ಇರುವ 2,500 ಕಂಡಕ್ಟರ್ ಹುದ್ದೆಗಳಿಗೆ ಇಂದು ರಾಜ್ಯದ ಆರು‌ ಜಿಲ್ಲೆಗಳ‌ 50 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಇನ್ನು ಧಾರವಾಡದ ಬಾಷೆಲ್ ಮಿಷನ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷಾ ಕೇಂದ್ರದಲ್ಲಿ ಕಾಪಿ ಚೀಟಿ ಪತ್ತೆ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಪರೀಕ್ಷಾ ಕೇಂದ್ರಕ್ಕೆ ಧಾರವಾಡ ಶಹರ್​ ಠಾಣೆಯ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ.

ಪರೀಕ್ಷಾರ್ಥಿ ಮಹಾಂತೇಶ್ ಮಾತನಾಡಿ, “ಇಂದು ಬಿಎಂಟಿಸಿ​ ಕಂಡಕ್ಟರ್ ಹುದ್ದೆಗೆ ಪರೀಕ್ಷೆ ನಡೆಯುತ್ತಿದೆ. ಮೊದಲ ಪತ್ರಿಕೆಯಾದ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಯಿತು. ನಂತರ ವಾಶ್​ ರೂಂಗೆ ಹೋಗಿದ್ದೆ. ಯಾರೋ ಪರೀಕ್ಷಾ ಕೊಠಡಿ ಕಿಟಕಿಯಿಂದ ಚೀಟಿ ಎಸೆದರು. ಚೀಟಿ ತೆಗೆದುಕೊಂಡು ಪರಿಶೀಲಿಸಿದಾಗ ಅದರಲ್ಲಿ ಕೆಲ ಉತ್ತರಗಳಿದ್ದವು. ಚೀಟಿಗಳನ್ನು ಸಂಬಂಧಪಟ್ಟವರಿಗೆ ಕೊಟ್ಟಿದ್ದೇನೆ. ನಮಗೆ ಸಿಕ್ಕ ಚೀಟಿಯಲ್ಲಿ ನಾಲ್ಕೈದು ಪ್ರಶ್ನೆಗಳಿಗೆ ಉತ್ತರ ಇತ್ತು. ಉತ್ತರ ಲೀಕ್​​ ಆಗಿದೆ ಎಂಬ ಅಭಿಪ್ರಾಯ ನಮ್ಮಲ್ಲಿ ಮೂಡಿದೆ” ಎಂದು ದೂರಿದರು.

Leave a Reply

Your email address will not be published. Required fields are marked *