ಮಾಜಿ ಶಾಸಕರ ಪ್ರಮುಖ ಪ್ರತಿಕ್ರಿಯೆ, ಬಾಗಲಕೋಟೆ ಉಪಚುನಾವಣೆಯ ಕುರಿತು ಸ್ಪಷ್ಟನೆ.
ವಿಜಯಪುರ : ಬಿಜೆಪಿಯಿಂದ ಉಚ್ಛಾಟನೆಗೊಂಡಿರೋ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಹೈಕಮಾಂಡ್ ನಾಯಯಕರು ತಮ್ಮ ಜೊತೆ ನೇರ ಸಂಪರ್ಕದಲ್ಲಿ ಇರೋದಾಗಿ ಯತ್ನಾಳ್ ಹೇಳಿರೋದೀಗ ಭಾರಿ ಕುತೂಹಲ ಕೆರಳಿಸಿದೆ. ವಿಜಯಪುರ ಶಾಸಕ ಮರಳಿ ಬಿಜೆಪಿಗೆ ಬರ್ತಾರಾ ಎನ್ನುವ ಪ್ರಶ್ನೆಗಳು ಇತ್ತೀಚೆಗೆ ಮೇಲಿಂದ ಮೇಲೆ ಕೇಳಿಬರುತ್ತಿತ್ತು.
ಈ ನಡುವೆ ಉಚ್ಛಾಟಿತ ನಾಯಕನ ಹೇಳಿಕೆ ಹೊಸ ಚರ್ಚೆ ಹುಟ್ಟುಹಾಕಿದೆ.
ಕಾಂಗ್ರೆಸ್ ಹಿರಿಯ ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕುರಿತೂ ಶಾಸಕ ಯತ್ನಾಳ್ ಮಹತ್ವದ ಹೇಳಿಕೆ ನೀಡಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡೋದಾಗಿ ತಿಳಿಸಿದ್ದಾರೆ. ಅಲ್ಲದೆ, ಪಕ್ಷದ ಅಭ್ಯರ್ಥಿಗಳು ಆಹ್ವಾನಿಸಿದರೆ ಪ್ರಚಾರಕ್ಕೂ ಹೋಗಲು ಸಿದ್ಧವಿರುವುದಾಗಿ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
For More Updates Join our WhatsApp Group :




