ಅಮೆರಿಕಾ, ಕೆನಡಾ ಪ್ರಜೆಗಳನ್ನೇ ಟಾರ್ಗೆಟ್ ಮಾಡಿದ ನಕಲಿ IT ಕಚೇರಿ ಬಯಲಿಗೆ, 16 ಮಂದಿ ಅರೆಸ್ಟ್.

ಅಮೆರಿಕಾ, ಕೆನಡಾ ಪ್ರಜೆಗಳನ್ನೇ ಟಾರ್ಗೆಟ್ ಮಾಡಿದ ನಕಲಿ IT ಕಚೇರಿ ಬಯಲಿಗೆ, 16 ಮಂದಿ ಅರೆಸ್ಟ್.

ಬೆಂಗಳೂರು: ಬೆಂಗಳೂರು ಐಟಿ ಕಂಪನಿಗಳ ತವರೂರು. ವಿಶ್ವದ ಟಾಪ್ ಐಟಿ ಸಿಟಿಗಳಲ್ಲಿ ಸಿಲಿಕಾನ್ ಸಿಟಿಯೂ ಸಹ ಅಗ್ರಮಾನ್ಯ ಪಟ್ಟಿಯಲ್ಲಿ ಇದೆ. ಹಲವು ಐಟಿ ಕಂಪನಿಗಳಿರುವ ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ ಸೈಬರ್ ಕಂಪನಿ ಕೂಡ ಪತ್ತೆಯಾಗಿದೆ. ಡಿಜಿಟಲ್ ಅರೆಸ್ಟ್ ಹೆಸರಲ್ಲಿ ದೇಶದ ಜನರಿಗೆ ಭಯ ಹುಟ್ಟಿಸಿ ಲಕ್ಷಲಕ್ಷ ಹಣ ವಸೂಲಿ ಮಾಡುತ್ತಿದ್ದ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿವೆ. ಅದರೆ ಇದೇ ಮೊದಲ ಬಾರಿ ಭಾರತದಲ್ಲಿ ಕುಳಿತು ಅಮೇರಿಕಾ ಮತ್ತು ಕೆನಡಾ ಪ್ರಜೆಗಳನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ ಕಚೇರಿಯೊಂದನ್ನು ಪತ್ತೆ ಹಚ್ಚಲಾಗಿದೆ. ಈ ಕಚೇರಿಯ ಮೇಲೆ ಪೊಲೀಸರು ದಾಳಿ ಮಾಡಿದ ಘಟನೆ ನಗರದ ಹೆಚ್ಎಸ್ಆರ್ ಲೇಔಟ್ ನಲ್ಲಿ ಬೆಳಕಿಗೆ ಬಂದಿದೆ.

https://d449d31f979921f70e2b656f3d69896e.safeframe.googlesyndication.com/safeframe/1-0-45/html/container.html ಅಮೇರಿಕದ ಸುಪ್ರೀಂ ಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯದ ನಕಲಿ ಆದೇಶಗಳನ್ನು ತೋರಿಸಿ ವಿದೇಶಿ ಪ್ರಜೆಗಳಿಗೆ ವಂಚನೆ

ಹೆಚ್ಎಸ್ಆರ್ ಲೇಔಟ್ನ 24ನೇ ಕ್ರಾಸ್ ನಲ್ಲಿ ದುಷ್ಕರ್ಮಿಗಳ ಗ್ಯಾಂಗ್ ಸಿಬೈಟ್ ಎಂಬ ಐಟಿ ಕಂಪನಿಯನ್ನ ತೆರೆದಿದ್ದರು. ನಿತ್ಯ ಸಂಜೆ ಆರು ಗಂಟೆಗೆ ಕಚೇರಿ ಶುರುವಾಗಿ ಅಮೇರಿಕಾ ಶಿಫ್ಟ್ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಅಮೇರಿಕ ಪ್ರಜೆಗಳನ್ನೇ ಟಾರ್ಗೆಟ್ ಮಾಡಿ ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದರು. ‘ ನಾವು ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಹಾಗೂ ಇನ್ವೆಸ್ಟಿಗೇಷನ್ ಏಜೆನ್ಸಿಯವರು. ನಿಮ್ಮ ಐಡಿಗಳನ್ನು ಬಳಸಿ ಪಾರ್ಸಲ್ ಬಂದಿದೆ. ಅದರಲ್ಲಿ ನಾರ್ಕೊಟಿಕ್ಸ್ ಪತ್ತೆಯಾಗಿದೆ. ನಿಮ್ಮ ವಿರುದ್ದ ಕೇಸ್ ದಾಖಲಾಗಿದೆ.’ ಎಂದು ಬೆದರಿಸುತ್ತಿದ್ದರು.

ಅದಕ್ಕೆ ತಕ್ಕ ಹಾಗೆ ಅಮೇರಿಕದ ಸುಪ್ರೀಂ ಕೋರ್ಟ್ ಹಾಗೂ ಅಮೇರಿಕ ಜಿಲ್ಲಾ ನ್ಯಾಯಾಲಯದ ನಕಲಿ ಆದೇಶಗಳನ್ನು ತೋರಿಸುತ್ತಿದ್ದರು. ನಂತರ ಕರೆಯನ್ನು ಮತ್ತೊಂದು ಇನ್ವೆಸ್ಟಿಗೇಶನ್ ಟೀಮ್​ಗೆ ವರ್ಗಾಯಿಸುತ್ತೇವೆಂದು ಹೇಳಿ ಡಿಜಿಟಲ್ ಅರೆಸ್ಟ್ ಮಾಡಿ ಡಾಲರ್​ಗಳಿಗೆ ಡಿಮಾಂಡ್ ಮಾಡುತ್ತಿದ್ದರು ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಉತ್ತರ ಭಾರತ ಮೂಲದ 16 ಸಿಬ್ಬಂದಿ ಪೊಲೀಸ್ ವಶಕ್ಕೆ

ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಗ್ನೇಯ ಸೆನ್ ಪೊಲೀಸರು ಐಟಿ ಕಂಪನಿಗೆ ತೆರಳಿ ಪರಿಶೀಲನೆ ನಡೆಸಿ ಕಂಪನಿ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ 16 ಮಂದಿ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಗುಜರಾತ್ ಮೂಲದ 4 ಮಂದಿ, ಮಹಾರಾಷ್ಟ್ರದ 8, ಒರಿಸ್ಸಾ, ಜಾರ್ಖಂಡ್, ಮಧ್ಯಪ್ರದೇಶ ಮೂಲದ ತಲಾ ಒಬ್ಬ ಆರೋಪಿ ಇರುವುದು ಗೊತ್ತಾಗಿದೆ. ಕೆಲಸ ಮಾಡುತ್ತಿದ್ದ ನೌಕರರಿಗೆ 22 ಸಾವಿರ ಸಂಬಳ ಕೂಡ ನೀಡಲಾಗುತ್ತಿತ್ತು ಎಂದು ಪೊಲೀಸ್ ಕಮೀಷನರ್ ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *