ಕರ್ನಾಟಕದಲ್ಲಿರುವ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳ ಆಡಳಿತಾತ್ಮಕ ಹುದ್ದೆಗಳಲ್ಲಿ ಕನ್ನಡಿಗರಿಗೆಶೇ.50 ಹಾಗೂ ಆಡಳಿತಾತ್ಮಕವಲ್ಲದಹುದ್ದೆಗಳಲ್ಲಿ ಶೇ.75 ಮೀಸಲಾತಿ ನಿಗದಿಪಡಿಸುವ ಕರಡು ಮಸೂದೆಗೆ ಪ್ರಕಾರ ತಾತ್ಕಾಲಿಕ ತಡೆ ನೀಡಿದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ರ‍್ಸಿಬಿತಂಡದಲ್ಲಿಯೂ ಕೂಡ ಮೀಸಲಾತಿ ನೀಡಬೇಕು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.
ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡದಲ್ಲಿ ಪ್ರತಿ ಬಾರಿಯೂ ಕನ್ನಡಿಗ ಆಟಗಾರರಿಗೆ ಅವಕಾಶ ನೀಡುವುದಿಲ್ಲ. ಒಂದೆಡರು ಮಂದಿಯನ್ನು ಹರಾಜಿನಲ್ಲಿ ಖರೀದಿ ಮಾಡಿದರೂ ಕೂಡ ಇವರಿಗೆ ಆಡುವ ಅವಕಾಶ ನೀಡದೆ ಕೇವಲ ಬೆಂಚ್ ಕೂರಿಸಿಯೇ ಬಿಡುತ್ತಾರೆ. ಪ್ರತಿ ಬಾರಿ ಹರಾಜು ನಡೆದಾಗಲೂ ರ‍್ಸಿಬಿ ಅಭಿಮಾನಿಗಳು ಕನ್ನಡಿಗ ಆಟಗಾರರ ಕಡೆಗಣನೆಯ ಬಗ್ಗೆ ಫ್ರಾಂಚೈಸಿ ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಇರುತ್ತಾರೆ. ಇದೀಗ ರ‍್ನಾಟಕದಲ್ಲಿ ಖಾಸಗಿ ಕೈಗಾರಿಕೆಗಳಲ್ಲಿ ರ‍್ಕಾರ ಮೀಸಲಾತಿ ಜಾರಿಗೆ ತರುವ ಚಿಂತನೆ ನಡೆಸಿದ ಬೆನ್ನಲ್ಲೇ ಐಪಿಎಲ್ನಲ್ಲಿ ರ‍್ಸಿಬಿ ತಂಡದಲ್ಲಿಯೂ ಶೇ 50ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದಾರೆ.
ರ‍್ಸಿಬಿಯಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೀಸಲಾತಿ ಜಾರಿ ಮಾಡುವಂತೆ ಹಲವು ಟ್ವೀಟ್ ಮಾಡಲಾರಂಭಿಸಿದ್ದಾರೆ. ಐಪಿಎಲ್ ಆರಂಭವಾಗಿ 17 ಆವೃತ್ತಿ ಕಳೆದರೂ ಕೂಡ ರ‍್ಸಿಬಿ ಕಪ್ ಗೆದ್ದಿಲ್ಲ. ನಮ್ಮ ರಾಜ್ಯದ ಅದೆಷ್ಟೋ ಸ್ಟಾರ್ ಆಟಗಾರರಿದ್ದರೂ ಕೂಡ ಅವರನ್ನು ರ‍್ಸಿಬಿ ಖರೀದಿ ಮಾಡದೆ ಸರಿಯಾಗಿ ಆಡಲು ಬಾರದ ಆಟಗಾರರಿಗೆ ಅತ್ಯಧಿಕ ಮೊತ್ತದ ಬಿಡ್ ಮಾಡಿ ತಂಡ ಸೇರಿಸಿಕೊಳ್ಳುತ್ತಿದೆ. ಈ ಬಾರಿಯ ಮೆಗಾ ಹರಾಜಿನಲ್ಲಾದರು ಕನ್ನಡಿಗ ಆಟಗಾರರಿಗೆ ಅವಕಾಶ ನೀಡಲಿದೆಯಾ ಎಂದು ಕಾದು ನೋಡಬೇಕಿದೆ.