ಸಾಲದ ಒತ್ತಡದಿಂದ ಗೋಪಾಲಪ್ಪ 400 ಕೆವಿ ವಿದ್ಯುತ್ ಕಂಬ ಏರಿ ಆತ್ಮಹ*ಯತ್ನ
ತುಮಕೂರು: ಲಕ್ಷಾಂತರ ರೂಪಾಯಿ ಕೈಸಾಲ ಮಾಡಿ ಮರುಪಾವತಿಸಲು ಆಗದೆ ಸಂಕಷ್ಟಕ್ಕೊಳಗಾದ ವ್ಯಕ್ತಿಯೊಬ್ಬ 400 ಕೆವಿ ಹೈಟೆನ್ಶನ್ ವಿದ್ಯುತ್ ಟವರ್ ಏರಿ ಹುಚ್ಚಾಟ ಮೆರೆದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಿಕೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಗೋಪಾಲ ಎಂಬಾತ ಬಿಕೆಹಳ್ಳಿ–ದಳವೆಹಳ್ಳಿ ರಸ್ತೆಯ ಮಧ್ಯೆ ಇರುವ ಸುಮಾರು 120 ಅಡಿ ಎತ್ತರದ ಹೈಟೆನ್ಶನ್ ಟವರ್ ಏರಿ ಕುಳಿತಿದ್ದಾನೆ. ಸಾಲದ ಒತ್ತಡದಿಂದ ಬೇಸತ್ತು ಈ ದುಸ್ಸಾಹಸಕ್ಕೆ ಕೈಹಾಕಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿದ ತಿರುಮಣಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಗೋಪಾಲನನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರು. ಹಲವು ಗಂಟೆಗಳ ಮಾತುಕತೆಯ ಬಳಿಕ ಗೋಪಾಲ ಸಮಾಧಾನಗೊಂಡರೂ, ಅಷ್ಟು ಎತ್ತರದಿಂದ ಸುರಕ್ಷಿತವಾಗಿ ಕೆಳಗಿಳಿಯುವುದು ಕಷ್ಟಕರವಾಗಿತ್ತು. ನಂತರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಹಗ್ಗ, ಹಾರ್ನೆಸ್ ಬೆಲ್ಟ್, ಲ್ಯಾಡರ್ ಸೇರಿದಂತೆ ಅಗತ್ಯ ರಕ್ಷಣಾ ಉಪಕರಣಗಳನ್ನು ಬಳಸಿ ಎಚ್ಚರಿಕೆಯಿಂದ ಗೋಪಾಲನನ್ನು ಕೆಳಗಿಳಿಸಿದರು.
For More Updates Join our WhatsApp Group :



