ಅರುಣಾಚಲ ಪ್ರದೇಶದಲ್ಲಿ ದಾರುಣ ಅಪಘಾ*.

ಅರುಣಾಚಲ ಪ್ರದೇಶದಲ್ಲಿ ದಾರುಣ ಅಪಘಾ*.

300 ಮೀಟರ್ ಕಂದಕಕ್ಕೆ ಉರುಳಿದ ಟ್ರಕ್ – 19 ಮಂದಿ ಸ್ಥಳದಲ್ಲೇ ಸಾ*.

ಅರುಣಾಚಲ ಪ್ರದೇಶ : ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಹೊತ್ತು ಹೊರಟಿದ್ದ ಟ್ರಕ್ ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿತ್ತು. ಎರಡು ದಿನ ಕಳೆದರೂ ಯಾರಿಗೂ ಅದರ ಬಗ್ಗೆ ಸುಳಿವೇ ಇರಲಿಲ್ಲ. 19 ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಸೋಮವಾರ ರಾತ್ರಿ ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಇತರ ನಿರ್ಮಾಣ ಕಾರ್ಮಿಕರೊಂದಿಗೆ ದೀಪ್ ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ವಾಹನವು ಅಂಜಾವ್‌ನಲ್ಲಿ 300 ಮೀಟರ್ ದೂರದ ಕಂದಕಕ್ಕೆ ಉರುಳಿತ್ತು.

ದೀಪಕ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದರು. ಹೇಗೋ ಆ ಕಂದಕದಿಂದ ಕಷ್ಟಪಟ್ಟು ಹೊರಬಂದಿದ್ದಾರೆ. ಎರಡು ದಿನಗಳ ಕಾಲ ಅಪಾಯಕಾರಿ ಅರಣ್ಯದ ಮೂಲಕ ನಡೆದು ಹೇಗೋ ಬಿಆರ್​ಒ ಶಿಬಿರವನ್ನು ತಲುಪಿದ್ದಾರೆ. ಸಡಿಲವಾದ ಮಣ್ಣು ಮತ್ತು ಬಂಡೆಗಳು ಬೀಳುವ ಬೆದರಿಕೆ ಪ್ರಯಾಣದ ಅಪಾಯಗಳನ್ನು ಹೆಚ್ಚಿಸಿತ್ತು. ಅವರ ಸಹೋದ್ಯೋಗಿಗಳಲ್ಲಿ 19 ಮಂದಿ ಕೊನೆಯುಸಿರೆಳೆದಿದ್ದರು.ಅವರನ್ನು ರಕ್ಷಿಸಲು ಯಾವುದೇ ಮಾರ್ಗವಿರಲಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಮ್ಯಾನ್ಮಾರ್ ಮತ್ತು ಚೀನಾ ಎರಡರ ಗಡಿಯಲ್ಲಿರುವ ಅಂಜಾವ್ ಜಿಲ್ಲೆಯ ಹಯುಲಿಯಾಂಗ್ ಮತ್ತು ಚಾಗ್ಲಾಗಮ್ ನಡುವಿನ ಲಾಲಿಯಾಂಗ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಜಿಲ್ಲಾಡಳಿತ ಮತ್ತು ಬಿಆರ್‌ಒ ಗುರುವಾರ ಬೆಳಿಗ್ಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಟಿನ್ಸುಕಿಯಾ ಮತ್ತು ಅಂಜಾವ್ ಅಧಿಕಾರಿಗಳು ಟ್ರಕ್‌ನಲ್ಲಿದ್ದ 22 ಜನರಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ. ಗುರುವಾರ ಸಂಜೆಯವರೆಗೆ ಹದಿನೇಳು ಶವಗಳನ್ನು ಗುರುತಿಸಲಾಗಿತ್ತು.

ಮೃತರಲ್ಲಿ ಹೆಚ್ಚಿನವರು ಟಿನ್ಸುಕಿಯಾದ ಗೆಲಾಪುಖುರಿ ಪ್ರದೇಶದವರು. ನೀಲಿ ಬಣ್ಣದ ಟ್ರಕ್‌ನಲ್ಲಿ 22 ಜನರಿದ್ದರು.ನನ್ನ ಮೊಬೈಲ್ ಫೋನ್‌ನಲ್ಲಿ ಹಾಡುಗಳನ್ನು ಕೇಳುತ್ತಾ ನಾನು ನಿದ್ರೆಗೆ ಜಾರಿದೆ. ನಾನು ಹೇಗೆ ಬಿದ್ದೆ, ಹೇಗೆ ಎದ್ದೆ ಮತ್ತು ನನ್ನ ಮೊಬೈಲ್ ಫೋನ್ ಎಲ್ಲಿದೆ ಎಂದು ತಿಳಿದಿರಲಿಲ್ಲ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *