ಎರಡು ಬೈಕ್ ಗಳ ಮಧ್ಯೆ ಭೀಕರ ರಸ್ತೆ ಅಪಘಾತ: ಇಬ್ಬರು ಶಿಕ್ಷಕರ ಸಾವು; ಓರ್ವ ಗಂಭೀರ..!!

ಬೆಂಗಳೂರು: ಎರಡು ಬೈಕ್ಗಳ ಮಧ್ಯೆ ಭೀಕರ ಅಪಘಾತವಾಗಿ ಇಬ್ಬರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ನರಸಪ್ಪ, ರಕ್ಷಾ ಮೃತರು ಎಂದು ಗುರುತಿಸಲಾಗಿದೆ. ಗಾಯಾಳು ಚಂದನ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಪಘಾತ

ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳದ ಮಾರುತಿನಗರ ಮುಖ್ಯರಸ್ತೆಯ ಕೆಎಲ್ಇ ಕಾಲೇಜು ಮಾರ್ಗದಲ್ಲಿ ಮಂಗಳವಾರ ರಾತ್ರಿ 11.30 ರ ಸುಮಾರಿಗೆ ಚಂದನ್ ಮತ್ತು ರಕ್ಷಾ ಪಲ್ಸರ್ ಬೈಕ್ನಲ್ಲಿ ವೇಗವಾಗಿ ತೆರಳುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಎದುರುಗಡೆಯಿಂದ ಇನ್ನೊಂದು ಬೈಕ್ನಲ್ಲಿ ಬಂದ ನರಸಪ್ಪ ಎಂಬುವರಿಗೆ ಚಂದನ್ ಬೈಕ್ ರಭಸವಾಗಿ ಡಿಕ್ಕಿ ಹೊಡೆದಿದೆ.

ಇದರ ಪರಿಣಾಮ ನರಸಪ್ಪಗೆ ಗಂಭೀರ ಗಾಯವಾಗಿ ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಂದನ್ ಹಾಗೂ ರಕ್ಷಾ ಇಬ್ಬರೂ ಗಂಭೀರ ಗಾಯಗೊಂಡಿದ್ದರು. ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ ರಕ್ಷಾ ಸಾವನ್ನಪ್ಪಿದ್ದಾರೆ. ಗಾಯಾಳು ಚಂದನ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಈ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಸುಮನಾ ಅವರು ಪ್ರತಿಕ್ರಿಯಿಸಿ, ನಿನ್ನೆ ರಾತ್ರಿ ಬೈಕ್ಗಳ ಮಧ್ಯೆ ಡಿಕ್ಕಿಯಾಗಿ ಶಿಕ್ಷಕ ನರಸಪ್ಪ, ಕಿಂಡರ್ ಗಾರ್ಟನ್ನಲ್ಲಿ ಶಿಕ್ಷಕಿಯಾಗಿದ್ದ ರಕ್ಷಾ ಎಂಬ ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಾಳು ಚಂದನ್ ಅತಿ ವೇಗವಾಗಿ ಬೈಕ್ ಚಲಾಯಿಸಿದ್ದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಮೇಲ್ನೋಟಕ್ಕೆ ಚಂದನ್ ಮದ್ಯಪಾನ ಮಾಡಿದ್ದರು ಎಂದು ಹೇಳಲಾಗಿದೆ. ಪಲ್ಸರ್ ಬೈಕ್ ಡಿಕ್ಕಿ ಹೊಡೆದು 50 ಮೀಟರ್ನಷ್ಟು ರಸ್ತೆ ಮೇಲೆ ಉಜ್ಜಿಕೊಂಡು ಹೋಗಿದೆ. ಸವಾರ ಚಂದನ್ ಮೇಲೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Facebook: https://www.facebook.com/PragathiTV/

Pragati TV Social Connect for more latest u

11 thoughts on “ಎರಡು ಬೈಕ್ ಗಳ ಮಧ್ಯೆ ಭೀಕರ ರಸ್ತೆ ಅಪಘಾತ: ಇಬ್ಬರು ಶಿಕ್ಷಕರ ಸಾವು; ಓರ್ವ ಗಂಭೀರ..!!

  1. I’m pretty pleased to uncover this page. I wanted to thank you for ones time just for this fantastic read!!

    I definitely loved every little bit of it and
    I have you saved to fav to see new things on your blog.

  2. Howdy! I could have sworn I’ve visited your blog before but after going through a few of the posts I realized it’s new to me.
    Anyways, I’m definitely pleased I found it and I’ll be
    book-marking it and checking back frequently!

  3. Today, I went to the beach front with my children. I found a sea shell
    and gave it to my 4 year old daughter and said “You can hear the ocean if you put this to your ear.”
    She put the shell to her ear and screamed. There was a hermit crab inside and
    it pinched her ear. She never wants to go back! LoL I know this is
    totally off topic but I had to tell someone!

  4. Its such as you learn my mind! You appear to grasp so much about this,
    like you wrote the ebook in it or something. I feel that you simply can do with some percent to power the message house
    a bit, however other than that, that is great blog.

    A fantastic read. I’ll definitely be back.

  5. Magnificent goods from you, man. I’ve consider your stuff prior to and
    you are just too great. I actually like what you have bought here, certainly like what
    you’re saying and the way during which you say it. You’re making it entertaining and you still care
    for to keep it wise. I can not wait to learn far more from you.
    This is actually a wonderful web site.

Leave a Reply

Your email address will not be published. Required fields are marked *