ಫೆಡರಲ್ ಬ್ಯಾಂಕ್ ಹಾರ್ಮಿಸ್ ಸ್ಮಾರಕ ಪ್ರತಿಷ್ಠಾನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.

ಫೆಡರಲ್ ಬ್ಯಾಂಕ್ ಹಾರ್ಮಿಸ್ ಸ್ಮಾರಕ ಪ್ರತಿಷ್ಠಾನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.

ಮುಂಬೈ: 2025-26ನೇ ಶೈಕ್ಷಣಿಕ ವರ್ಷಕ್ಕೆ ಫೆಡರಲ್ ಬ್ಯಾಂಕ್ ಹಾರ್ಮಿಸ್ ಸ್ಮಾರಕ ಪ್ರತಿಷ್ಠಾನ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕಿನ ಸಂಸ್ಥಾಪಕ ದಿವಂಗತ ಶ್ರೀ ಕೆ.ಪಿ.ಹಾರ್ಮಿಸ್ ಸ್ಮರಣಾರ್ಥ ಸ್ಥಾಪಿಸಲಾದ ಈ ವಿದ್ಯಾರ್ಥಿ ವೇತನವು, ವೃತ್ತಿಪರ ಮತ್ತು ಉನ್ನತ ಶಿಕ್ಷಣ ಮುಂದುವರಿಸುವಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.

ವಿದ್ಯಾರ್ಥೀವೇತನಕ್ಕೆ ಯಾರೆಲ್ಲಾ ಅರ್ಹರು

ಎಂಬಿಬಿಎಸ್, ಬಿಡಿಎಸ್, ಬಿವಿಎಸ್‌ಸಿ, ಬಿ.ಇ/ಬಿ.ಟೆಕ್/ಬಿಎಆರ್‌ಸಿಹೆಚ್, ಬಿ.ಎಸ್ಸಿ ನರ್ಸಿಂಗ್, ಬಿ.ಎಸ್ಸಿ ಕೃಷಿ, ಮತ್ತು ಎಂಬಿಎ/ಪಿಜಿಡಿಎಂ (ಪೂರ್ಣ ಸಮಯ) ಸೇರಿದಂತೆ ಆಯ್ಕೆ ವೃತ್ತಿಪರ ಕೋರ್ಸ್‌ಗಳ ಮೊದಲ ವರ್ಷದಲ್ಲಿ ಮೆರಿಟ್ ಅನುಸಾರ ಪ್ರವೇಶ ಪಡೆದ ವಿದ್ಯಾರ್ಥಿಗಳಿಂದ ಪ್ರತಿಷ್ಠಾನವು ಅರ್ಜಿಗಳನ್ನು ಆಹ್ವಾನಿಸುತ್ತದೆ. ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣ ಮುಂತಾದ ರಾಜ್ಯಗಳ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ಮುಕ್ತವಾಗಿದೆ. ಈ ಯೋಜನೆಯು ಹುತಾತ್ಮರಾದ ಸಶಸ್ತ್ರ ಪಡೆಗಳ ಸಿಬ್ಬಂದಿಯ ಅವಲಂಬಿತರು ಮತ್ತು ಮಾನ್ಯತೆ ಪಡೆದ ಪದವಿ ಪೂರ್ವ ಅಥವಾ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆದ ವಾಕ್/ದೃಷ್ಟಿ/ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ವಿಸ್ತರಿಸುತ್ತದೆ.

ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಸೌಲಭ್ಯ

ಆಯ್ಕೆಯಾದ ಅಭ್ಯರ್ಥಿಗಳು ಈ ಕಾರ್ಯಕ್ರಮದ ಅಡಿಯಲ್ಲಿ ಸಾಮಾನ್ಯ ಕೋರ್ಸ್ ಅವಧಿಯಲ್ಲಿ ವರ್ಷಕ್ಕೆ ಗರಿಷ್ಠ ₹1 ಲಕ್ಷ ಮೀರದಂತೆ, ಬೋಧನಾ ಶುಲ್ಕ ಮತ್ತು ಇತರ ಶೈಕ್ಷಣಿಕ ವೆಚ್ಚಗಳ ಶೇ 100 ಮರುಪಾವತಿ ಯನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಸಮಯದಲ್ಲಿ ಒಂದು ಪಿಸಿ, ಲ್ಯಾಪ್ಟಾಪ್ ಅಥವಾ ಟ್ಯಾಬ್ಲೆಟ್‌ ಗೆ ಅರ್ಹರಾಗಿರುತ್ತಾರೆ. ಲ್ಯಾಪ್ಟಾಪ್‌ಗೆ 40,000 ರೂ ಮತ್ತು ಟ್ಯಾಬ್ಲೆಟ್‌ಗೆ 30,000 ರೂ ವರೆಗೆ ಮರುಪಾವತಿ ನೀಡಲಾಗುತ್ತದೆ. (ವರ್ಷಕ್ಕೆ 1 ಲಕ್ಷ ರೂ ಮೊತ್ತದೊಳಗೆ).

ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ

ಈ ಕುರಿತು ಫೆಡರಲ್ ಬ್ಯಾಂಕಿನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ರಾಜನಾರಾಯಣನ್ ಎನ್ ಮಾತನಾಡಿ,ಶಿಕ್ಷಣವು ಬಾಗಿಲುಗಳನ್ನು ತೆರೆಯುತ್ತದೆ, ವಿಭಜನೆಯನ್ನು ಜೋಡಿಸುತ್ತದೆ ಮತ್ತು ಭವಿಷ್ಯವನ್ನು ರೂಪಿಸುತ್ತದೆ. ಫೆಡರಲ್ ಬ್ಯಾಂಕ್ ಹಾರ್ಮಿಸ್ ಸ್ಮಾರಕ ಪ್ರತಿಷ್ಠಾನ ವಿದ್ಯಾರ್ಥಿವೇತನವು ಭಾರತದಾದ್ಯಂತ ಯುವ ಪ್ರತಿಭೆಗಳು ಕಲಿಯಲು, ಬೆಳೆಯಲು ಮತ್ತು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ಅವಕಾಶ ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ ಎಂದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *