ಬ್ಯಾಕ್ಲಾಗ್ ಹುದ್ದೆಗಳ ಭರ್ತಿ : ಹಿಂಬರಹದ ಮೂಲಕ ಸರ್ಕಾರದ ಸ್ಪಷ್ಟನೆ

ಬೆಂಗಳೂರು: ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಕಛೇರಿ ಬ್ಯಾಕ್ಲಾಗ್ ಹುದ್ದೆಯನ್ನು ಭರ್ತಿ ಮಾಡುವಂತೆ ಕೋರಿರುವ ಬಗ್ಗೆ ಹಿಂಬರಹವೊಂದನ್ನು ಹೊರಡಿಸಿದೆ.

ಈ ಕುರಿತು ಕೃಷ್ಣಮೂರ್ತಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಇವರಿಗೆ ಸಮಾಜ ಕಲ್ಯಾಣ ಇಲಾಖೆ, ಆಯುಕ್ತರ ಪರವಾಗಿ ಹಿಂಬರಹ ಕಳಿಸಲಾಗಿದೆ.

ಇದು ಬ್ಯಾಕ್ಲಾಗ್ ಹುದ್ದೆಯನ್ನು ಭರ್ತಿ ಮಾಡುವಂತೆ ಕೋರಿರುವ ಬಗೆ ಎಂಬ ವಿಷಯ ಒಳಗೊಂಡಿದೆ. ಕೃಷ್ಮಮೂರ್ತಿ ಇವರ ಟ್ವೀಟ್ ದಿನಾಂಕ 01/06/2024. ಸರ್ಕಾರದ ಅಧಿಸೂಚನೆ ದಿನಾಂಕ 21/11/2001 ಮತ್ತು ಕಛೇರಿಯ ವಿವಿಧ ಪತ್ರಗಳನ್ನು ಉಲ್ಲೇಖ ಮಾಡಲಾಗಿದೆ.

ಹಿಂಬರಹದ ವಿವರಗಳು: ಕೃಷ್ಣಮೂರ್ತಿ ಇವರು ಬ್ಯಾಕ್ ಲಾಗ್ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಲು ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು ಯಾವುದೇ ಬ್ಯಾಕ್ ಲಾಗ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸದೇ ಇದ್ದು, ಈ ಸಂಬಂದ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಬೇಕೆಂದು ಕೋರಿದ್ದರು.

ಈ ಕುರಿತು ಪರಿಶೀಲಿಸಲಾಗಿ ಸರ್ಕಾರದ ಅಧಿಸೂಚನೆಯಂತೆ, ಸರ್ಕಾರದ ವಿವಿಧ ಇಲಾಖೆಗಳು/ ನಿಗಮಗಳು/ ಮಂಡಳಿಗಳು/ ವಿಶ್ವವಿದ್ಯಾಲಯಗಳು/ ಸಹಕಾರ ಸಂಸ್ಥೆಗಳು/ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಖಾಲಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಾಧಿಕಾರಿಗಳಿಂದಲೇ ಅಧಿಸೂಚನೆ/ ಪ್ರಕಟಣೆಯನ್ನು ಹೊರಡಿಸಬೇಕಾಗಿರುತ್ತದೆ.

ಈ ಸಂಬಂಧವಾಗಿ ಮಾನ್ಯ ಸಚಿವ ಸಂಪುಟದ ಉಪ ಸಮಿತಿ ಸಭೆಗಳಲ್ಲಿ, ಅನುಸೂಚಿತ ಜಾತಿಗಳು ಮತ್ತು ಅನೂಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆಗಳಲ್ಲಿ, ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ಹಾಗೂ ಆಯುಕ್ತರು ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳಲ್ಲಿ ಚರ್ಚೆಯಾಗಿರುತ್ತದೆ.

ವಿವಿಧ ದಿನಾಂಕಗಳ ಈ ಕಛೇರಿ ಪತ್ರಗಳಲಿ ಸರ್ಕಾರದ ವಿವಿಧ ಇಲಾಖೆಗಳ ನಿಗಮಗಳು/ ಮಂಡಳಿಗಳು/ ವಿಶ್ವವಿದ್ಯಾಲಯಗಳು/ ಸಹಕಾರ ಸಂಸ್ಥೆಗಳು/ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಖಾಲಿ ಇರುವ ಬಾಕ್ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿರುತ್ತದೆ ಎಂಬ ಅಂಶವನ್ನು ಈ ಮೂಲಕ ತಿಳಿಸಿದೆ.

Leave a Reply

Your email address will not be published. Required fields are marked *