ಮಧುರೈ ರೈಲಿನಲ್ಲಿ ಬೆಂಕಿ ಅವಘಡ: ಅಕ್ರಮವಾಗಿ ಎಲ್‌ಪಿಜಿ ಸಿಲಿಂಡರ್ ತಂದುದ್ದೆ ಕಾರಣವಾಯಿತ..!!

ಮಧುರೈ: ಖಾಸಗಿ ಕೋಚ್ ನಲ್ಲಿದ್ದ ಪ್ರಯಾಣಿಕರು ಅಕ್ರಮವಾಗಿ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್ ಅನ್ನು ಕಳ್ಳಸಾಗಣೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಶನಿವಾರ ನಸುಕಿನ ವೇಳೆ ಮಧುರೈ ರೈಲು ನಿಲ್ದಾಣದ ಬಳಿ ಭಾರತ್ ಗೌರವ್ ವಿಶೇಷ ರೈಲಿಗೆ ಬೆಂಕಿ ಹತ್ತುಕೊಂಡಿದೆ ಎಂದು ಹೇಳಲಾಗಿದೆ.

ಮಧುರೈ

 ದಕ್ಷಿಣ ರೈಲ್ವೆಗೆ ಮಧುರೈ ರೈಲ್ವೇ ಜಂಕ್ಷನ್ ಬಳಿ ಸ್ಥಗಿತಗೊಂಡಿದ್ದ ಟೂರಿಸ್ಟ್ ಕೋಚ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 3 ಮಹಿಳೆಯರು ಸೇರಿದಂತೆ 9 ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ ಎಂದು ರೈಲ್ವೇ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

“ಶನಿವಾರ ಬೆಳಿಗ್ಗೆ 5:15 ಕ್ಕೆ ಮಧುರೈ ಅಂಗಳದಲ್ಲಿರುವ ಖಾಸಗಿ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ವರದಿ ಮಾಡಿದ್ದಾರೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಬೆಳಗ್ಗೆ 5.45ಕ್ಕೆ ಆಗಮಿಸಿದ್ದಾರೆ. ಬೆಳಗ್ಗೆ 7.15ಕ್ಕೆ ಬೆಂಕಿ ನಂದಿಸಲಾಯಿತು. ಇತರೆ ಯಾವುದೇ ಕೋಚ್‌ಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಸುಮಾರು 55 ಯಾತ್ರಿಕರು ಸಂಯೋಜಿತ ಕೋಚ್‌ನಲ್ಲಿದ್ದರು. ಅವರಲ್ಲಿ ಕೆಲವರು ಕಾಫಿ ಮಾಡಲು ಗ್ಯಾಸ್ ಸ್ಟೌವ್ ಅನ್ನು ಹೊತ್ತಿಸಿದರು ಮತ್ತು ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ರೈಲು ಆಗಸ್ಟ್ 17 ರಂದು ಲಕ್ನೋದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿತ್ತು. ಕೊಲ್ಲಂ ಎಕ್ಸ್‌ಪ್ರೆಸ್‌ನಲ್ಲಿ ಚೆನ್ನೈಗೆ ಹಿಂತಿರುಗಲು ಮತ್ತು ಚೆನ್ನೈನಿಂದ ಲಕ್ನೋಗೆ ಹಿಂತಿರುಗಲು ನಿರ್ಧರಿಸಲಾಗಿತ್ತು.ಮೃತರ ಕುಟುಂಬ ಸದಸ್ಯರಿಗೆ ದಕ್ಷಿಣ ರೈಲ್ವೇ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *