ಕಾರು ಅಪ*ತದಲ್ಲಿ ಉಪ್ಪಿ2 ಖ್ಯಾತಿಯ ಫಿಟ್ನೆಸ್ ಟ್ರೈನರ್ ಸುರೇಶ್ ಕುಮಾರ್ ನಿ*ನ.

ಕಾರು ಅಪ*ತದಲ್ಲಿ ಉಪ್ಪಿ2 ಖ್ಯಾತಿಯ ಫಿಟ್ನೆಸ್ ಟ್ರೈನರ್ ಸುರೇಶ್ ಕುಮಾರ್ ನಿ*ನ.

ಕೋಲಾರ – ಉಪೇಂದ್ರ ಸೇರಿದಂತೆ ಹಲವಾರು ನಟ-ನಟಿಯರಿಗೆ ಫಿಟ್ನೆಸ್ ತರಬೇತಿ ನೀಡಿದ ಕೋಲಾರದ ಗಾಂಧಿನಗರ ಮೂಲದ ಬಾಡಿಬಿಲ್ಡರ್, ಮಾದಕ ದೇಹಸೌಂದರ್ಯದ ಮಾದರಿ ಸುರೇಶ್ ಕುಮಾರ್ (42) ಅಮೆರಿಕಾದ ಫ್ಲೊರಿಡಾದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಅಮೆರಿಕಾದ ಫ್ಲೊರಿಡಾ-ಟೆಕ್ಸಾಸ್ ಮಾರ್ಗದಲ್ಲಿ ನಾಲ್ಕು ದಿನಗಳ ಹಿಂದೆ ಕಾರು ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಸುರೇಶ್‌ಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವಿಗೀಡಾಗಿದ್ದಾರೆ. ಈಗಾಗಲೇ ಅಮೆರಿಕಾದ ಅಧಿಕಾರಿಗಳು ತನಿಖೆ ನಡೆಸಿದ್ದು, ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಭಾರತಕ್ಕೆ ಶವವಾಹನದ ಯತ್ನ: ಸುರೇಶ್ ಅವರ ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಹೋರಾಟ ನಡೆಸುತ್ತಿದ್ದು, ಸರ್ಕಾರದಿಂದ ನೆರವು ಕೋರಿ ಮನವಿ ಮಾಡಿದ್ದಾರೆ.

 ಸಿನಿಮಾ, ಫಿಟ್ನೆಸ್ ಮತ್ತು ಮಾಡೆಲಿಂಗ್ ಜಗತ್ತಿನಲ್ಲಿ ಸುರೇಶ್ ಹೆಸರಾಂತರು:

  • ಕೋಲಾರದಲ್ಲಿ ಹುಟ್ಟಿ ಬೆಳೆದ ಸುರೇಶ್, ಬಡಕುಟುಂಬದಿಂದ ಬಂದು ಬೆಂಗಳೂರು ಸೇರಿ ತಮ್ಮ ದೇಹಸೌಂದರ್ಯದಿಂದಲೇ ಗುರುತಿಸಿಕೊಂಡರು.
  • ಉಪೇಂದ್ರ, ಪ್ರೇಮಾ, ಪ್ರಿಯಾಮಣಿ ಸೇರಿದಂತೆ ಹಲವಾರು ನಟ-ನಟಿಯರಿಗೆ ಫಿಟ್ನೆಸ್ ತರಬೇತಿ ನೀಡಿದವರು.
  • ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಕೆಲಸ ಮಾಡಿದ ಅವರು, ಉಪ್ಪಿ2″ ಸಿನಿಮಾದಲ್ಲಿಯೂ ನಟಿಸಿದ್ದರು.
  • ದೆಹಲಿ ಮೂಲದ ಯುವತಿಯನ್ನು ಮದುವೆಯಾದ ಸುರೇಶ್‌ಗೆ ಇಬ್ಬರು ಮಕ್ಕಳಿದ್ದಾರೆ.
  • ಕಳೆದ ಏಳು ವರ್ಷಗಳಿಂದ ಅಮೆರಿಕಾದಲ್ಲಿ ಪಿಜಿಯೋಥೆರಪಿಸ್ಟ್ ಆಗಿ ಉದ್ಯೋಗದಲ್ಲಿ ನಿರತರಾಗಿದ್ದರು.

ಕೊನೆಯ ಭೇಟಿಯಾದಂತಾಯಿತು…

ಆಗಸ್ಟ್ 1 ರಂದು ಭಾರತಕ್ಕೆ ಆಗಮಿಸಿದ್ದ ಸುರೇಶ್, ತಮ್ಮ ಕುಟುಂಬಸ್ಥರಿಗೆ ಕೋಲಾರದ ಅಂತರಗಂಗೆ ರೆಸಾರ್ಟ್‌ನಲ್ಲಿ ಔತಣಕೂಟ ಏರ್ಪಡಿಸಿದ್ದರು. ನಂತರ ಆಗಸ್ಟ್ 24ರಂದು ಅಮೆರಿಕಾಕ್ಕೆ ವಾಪಸ್ ತೆರಳಿದ್ದು, ಕೆಲವೇ ದಿನಗಳಲ್ಲಿ ಈ ದುರ್ಘಟನೆ ಸಂಭವಿಸಿದೆ. ಕುಟುಂಬಕ್ಕೆ ಇದು ತುಂಬಾ ಆಘಾತವನ್ನುಂಟುಮಾಡಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *