ಕೇಸರಿ ಧ್ವಜ ಹಾಕಬೇಡಿ ಎಂದ ರಮಾನಾಥ ರೈ ಹೇಳಿಕೆಗೆ ಭಾರೀ ಆಕ್ರೋಶ.
ಮಂಗಳೂರು: ಮಂಗಳೂರು ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಸಚಿವ ರಮಾನಾಥ ರೈ ವಿವಾದತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಇದೀಗ ಅವರು ನೀಡಿರುವ ಹೇಳಿಕೆಯಿಂದ ದಕ್ಷಿಣ ಕನ್ನಡದಲ್ಲಿ ಹಿಂದೂ ನಾಯಕರನ್ನು ಕೇರಳಿಸಿದೆ. ದೇವಸ್ಥಾನದಲ್ಲಿ ಕೇಸರಿ ಬಾವುಟ ಸೇರಿ ಯಾವುದೇ ಧ್ವಜ ಹಾರಿಸಬೇಡಿ ಎಂದು ಹೇಳಿ, ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ. ನೀವು ಒಂದು ದೈವದ ಗುತ್ತು ಮನೆಯವರಾಗಿ (ದೈವದ ಮನೆಯವರು) ಹೀಗೆ ಮಾತನಾಡುವುದು ಸರಿಯಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ. ಉಡುಪಿ ಮಠ ಪರ್ಯಾಯ ಮಹೋತ್ಸವದಲ್ಲಿ ಉಡುಪಿ ಜಿಲ್ಲಾಧಿಕಾರಿ ಟಿಕೆ ಸ್ವರೂಪಾ ಕೇಸರಿ ಧ್ವಜ ಹಾರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಮಾಜಿ ಸಚಿವ ರಮಾನಾಥ ರೈ ಇದನ್ನು ಖಂಡಿಸುವ ಭರದಲ್ಲಿ ದೇವಾಲಯದಲ್ಲಿ ಕೇಸರಿ ಬಾವುಟ ಹಾಕಬೇಡಿ ಎಂದು ಹೇಳಿದ್ದಾರೆ.
ಉಡುಪಿ ಡಿಸಿ ಭಗವಾಧ್ವಜ ಹಾರಿಸಿದ್ದ ತಪ್ಪು, ಇದನ್ನು ಒಪ್ಪಲು ಸಾಧ್ಯವಿಲ್ಲ. ಅವರ ಮೇಲೆ ಸರಿಯಾದ ಕ್ರಮ ಆಗಬೇಕು. ದೇವಾಲಯದ ಕಾರ್ಯಕ್ರಮದಲ್ಲಿ ರಾಜಕೀಯ ಪ್ರೇರಿತ ಪತಾಕೆ ಧಿಕ್ಕರಿಸಬೇಕು. ದೇಗುಲದಲ್ಲಿ ಕಾಂಗ್ರೆಸ್, ಕೇಸರಿ, ಹಸಿರು ಯಾವುದೇ ಬಾವುಟ ಹಾಕಬೇಡಿ ಎಂದು ಹೇಳಿದ್ದಾರೆ. ದೇವಸ್ಥಾನದಲ್ಲಿ ನಡೆಯುವುದು ಕಾರ್ಯಕ್ರಮವೂ ಎಲ್ಲರಿಗೂ ಸಂಬಂಧಿಸಿದೆ. ಈ ಕಾರಣಕ್ಕೆ ದೇಗುಲದಲ್ಲಿ ಕೇಸರಿ ಧ್ವಜ ಹಾರಿಸಬಾರದು. ದೇಗುಲದ ಉತ್ಸವಗಳಲ್ಲಿ ಭಗವಾಧ್ವಜ ಹಾರಿಸುವುದನ್ನು ವಿರೋಧಿಸಬೇಕು ಎಂದು ಅವರು ಮಂಗಳೂರಿನ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ವೇಳೆ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರಮಾನಾಥ ರೈ ಹೇಳಿಕೆಗೆ ಆಕ್ರೋಶ:
ಮಾಜಿ ಸಚಿವ ರಮಾನಾಥ ರೈ ನೀಡಿದ ಹೇಳಿಕೆಗೆ ಹಿಂದೂ ಪರ ಸಂಘಟನೆಗಳು ಹಾಗೂ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಕೂಡ ನಡೆದಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದ್ದಾರೆ. ನೀವು ದೈವರಾಧಕರು ಅಲ್ಲವೇ, ಒಂದು ಗುತ್ತಿನ ಮನೆಯವರಾಗಿ ಹೀಗೆ ಅವಮಾನ ಮಾಡುವುದು ಸರಿಯೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಹಿಂದೂ ದೇವಾಲಯದಲ್ಲಿ ಕೇಸರಿ ಧ್ವಜ ಹಾರಿಸದೇ ಬೇರೆ ಯಾವ ಧ್ವಜ ಹಾರಿಸಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ದೇವಾಲಯದ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಕೆಲವೊಂದು ನೆಟ್ಟಿಗರು ಹೇಳಿದ್ದಾರೆ.
For More Updates Join our WhatsApp Group :




