ಬೆಂಗಳೂರು:ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ಭೀಮಾ ಮತ್ತು ಕೃಷ್ಣಾ ನದಿಗಳ ನೀರಿನಿಂದಾಗಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಾದ ಕಲಬುರಗಿ, ವಿಜಯಪುರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಸಿಇಒ ಮತ್ತು ಉಸ್ತುವಾರಿ ಕಾರ್ಯದರ್ಶಿಗಳಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಸಿಎಂನಿಂದ ಖಡಕ್ ಆದೇಶ
- ಜಿಲ್ಲಾಧಿಕಾರಿಗಳು ಪ್ರವಾಹ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಬೇಕು
- ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಬೇಕು
- ಜನ ಹಾಗೂ ಜಾನುವಾರುಗಳ ಪ್ರಾಣ ಹಾನಿ ಆಗದಂತೆ ತಕ್ಷಣ ಎಚ್ಚರಿಕಾ ಕ್ರಮ ಕೈಗೊಳ್ಳಬೇಕು
- ಆಹಾರ ವಿತರಣೆ, ತಾತ್ಕಾಲಿಕ ಆಶ್ರಯ ಹಾಗೂ ಮೇವು ವ್ಯವಸ್ಥೆ ಬೃಹತ್ ಮಟ್ಟದಲ್ಲಿ ಮಾಡಬೇಕು
- ಸಂತ್ರಸ್ತರಿಗೆ ತುರ್ತು ಪರಿಹಾರ ಹಾಗೂ ರಕ್ಷಣಾ ಕ್ರಮ ಖಚಿತಪಡಿಸಬೇಕು
ಭೀಮಾ ನದಿಯ ರೌದ್ರದರ್ಶನ
ಮಹಾರಾಷ್ಟ್ರದ ಉಜನಿ ಹಾಗೂ ನೀರ ಡ್ಯಾಂಗಳಿಂದ ಕೃಷ್ಣಾ ಹಾಗೂ ಭೀಮಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ಇದರ ಪರಿಣಾಮವಾಗಿ ನದಿತೀರದ ಭಾಗಗಳಲ್ಲಿ ಪ್ರವಾಹದ ಅಪಾಯ ಹೆಚ್ಚಾಗಿದೆ. ಕಲಬುರಗಿಯ ಬೆಣ್ಣೆತೋರಾ, ಸಿಂದಗಿ, ಆಳಂದ, ಚಿತ್ತಾಪುರ ಭಾಗಗಳಲ್ಲಿ ಜನರು ಅಪಾಯದ ಸುಳಿಯಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯ ತ್ವರಿತಗೊಳಿಸಲಾಗಿದೆ.
ಪ್ರಮುಖ ಸೂಚನೆಗಳು:
- ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿಗಳು ಸ್ಥಳಕ್ಕೆ ತಕ್ಷಣ ಭೇಟಿ ನೀಡಬೇಕು
- ಭದ್ರತಾ ದಳಗಳ ಸಹಾಯದಿಂದ ಸ್ಥಳಾಂತರ ಕಾರ್ಯವನ್ನು ವೇಗಗೊಳಿಸಲು ಸೂಚನೆ
- ತಾತ್ಕಾಲಿಕ ನೆಲೆಗಳಲ್ಲೂ ಆಹಾರ, ನೀರು, ಶೌಚಾಲಯ ಸೌಲಭ್ಯ ಕಲ್ಪಣೆ ಕಡ್ಡಾಯ
- ಕೃಷ್ಣಬೈರೇಗೌಡ ಮತ್ತು ಸಿಎಸ್ ಶಾಲಿನಿ ರಜನೀಶ್ ನಿರಂತರ ನಿಗಾವಹಿಸುವಂತೆ ಸೂಚನೆ
For More Updates Join our WhatsApp Group :




