ಫುಟ್ಬಾಲ್ ಸೆಮಿಫೈನಲ್: ಬೆಳಗಾವಿ ಮುನ್ನಡೆ.

ಫುಟ್ಬಾಲ್ ಸೆಮಿಫೈನಲ್: ಬೆಳಗಾವಿ ಮುನ್ನಡೆ

ಮೈಸೂರು ತಂಡವನ್ನು 3-2 ಗೋಲುಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶ.

ತುಮಕೂರು: ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪುರುಷರ ಫುಟ್ಬಾಲ್‌ ಸ್ಪರ್ಧೆಯಲ್ಲಿ ಬೆಳಗಾವಿ ತಂಡ ಬಿ ಗುಂಪಿನಿಂದ ಸೆಮಿಫೈನಲ್‌ ಪ್ರವೇಶಿಸಿದೆ. ನಿರ್ಣಾಯಕ ಪಂದ್ಯದಲ್ಲಿ ಮೈಸೂರು ತಂಡವನ್ನ 3-2 ಗೋಲುಗಳಿಂದ ಸೋಲಿಸಿದ ಬೆಳಗಾವಿ 4ರ ಘಟ್ಟಕ್ಕೆ ಲಗ್ಗೆ ಇಟ್ಟಿತು. ಒಂದು ಹಂತದಲ್ಲಿಎರಡು ತಂಡಗಳು 2-2ರಿಂದ ಸಮಬಲ ಸಾಧಿಸಿದ್ದವು. ಕೊನೆಯಲ್ಲಿ ಬೆಳಗಾವಿ ತಂಡ ಗೋಲು ಗಳಿಸಿ ಮುನ್ನಡೆ ಸಾಧಿಸಿತು.

ಮಂಗಳವಾರ ಮೊದಲ ಸೆಮಿಫೈನಲ್‌ನಲ್ಲಿಕೊಡಗು – ಮೈಸೂರು ಮುಖಾಮುಖಿಯಾದರೆ, 2ನೇ ಸೆಮಿಫೈನಲ್‌ನಲ್ಲಿಉತ್ತರ ಕನ್ನಡ-ಬೆಳಗಾವಿ ಪೈಪೋಟಿ ನಡೆಸಲಿವೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *