ಹಾಲಿ ಶಾಸಕರ ಸವಾಲ್ ಸ್ವೀಕರಿಸಿದ ಮಾಜಿ ಶಾಸಕ : ಪಾವಗಡದಲ್ಲಿ ಕಾಂಗ್ರೆಸ್-ಜೆಡಿಎಸ್ ಜಟಾಪಟಿ..!

ಪಾವಗಡ : ತಾಲೂಕು ಅಭಿವೃದ್ಧಿ ವಿಚಾರವಾಗಿ ಶಾಸಕ ವೆಂಕಟರಮಣಪ್ಪ ರವರ ಸವಾಲ್ ಸ್ವೀಕರಿಸಿದ್ದು ದಿನಾಂಕ ನಿಗದಿಪಡಿಸಲಿ ದಾಖಲೆ ಸಮೇತ ಜೆಡಿಎಸ್ ಅವಧಿಯ ಪ್ರಗತಿ ಕಾರ್ಯಗಳ ಕುರಿತು ಚರ್ಚೆಗೆ ಸಿದ್ದ, ಯಾರ ಕಾಲದಲ್ಲಿ ಎಷ್ಟು ಪ್ರಗತಿ ಕಂಡಿದೆ ಎಂದು ತಾಲೂಕು ಜನತೆ ತೀರ್ಮಾನಿಸಲಿ ಎಂದು ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಚಾಲೆಂಜ್ ಮಾಡಿದ್ದಾರೆ.

ಪಾವಗಡ ಪಟ್ಟಣದ ಬನಶಂಕರಿ ಬಡಾವಣೆಯ ಜೆಡಿಎಸ್ ಕಚೇರಿಯಲ್ಲಿ ತಾಲೂಕು ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ತಾಲೂಕಿನ ರಸ್ತೆ, ಸೇತುವೆ, ಶಾಲಾ ಕೊಠಡಿಗಳ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯುತ್ತಿದ್ದು, ಮೊನ್ನೆ ತಾಲೂಕಿನ ವಿರಪಸಮುದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ, ಸಮಾರಂಭದಲ್ಲಿ ತಾಲೂಕು ಅಭಿವೃದ್ಧಿ ವಿಚಾರದಲ್ಲಿ ಜೆಡಿಎಸ್ ಮುಖಂಡರು ಸುಳ್ಳು ಹೇಳುವಲ್ಲಿ ನಿರತರಾಗಿದ್ದರೆ ಎಂದು ಶಾಸಕ ವೆಂಕಟರಮಣಪ್ಪ ಆರೋಪಿಸಿದ್ದು, ತಾಲೂಕು ಪ್ರಗತಿ ಕುರಿತು ತಮ್ಮ ಅವಧಿ ಮತ್ತು ಜೆಡಿಎಸ್ ಅವಧಿಯ ಕಾಮಗಾರಿಗಳ ಬಗ್ಗೆ ಚರ್ಚೆಗೆ ಆಹ್ವಾನಿಸಿದ್ದರು ಇದಕ್ಕೆ ನಾವು ಸಿದ್ಧ ಎಂದು ಹೇಳಿದ್ದಾರೆ.

ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ. ಅಂಜಿನಪ್ಪ ಮಾತನಾಡಿ, ಸಾಲಮನ್ನಾ ಸೇರಿದಂತೆ ಕುಮಾರಸ್ವಾಮಿ ಅವಧಿಯ ಪ್ರಗತಿ ಕಾರ್ಯ ಶಾಸಕರಿಗೆ ಕಾಣುತ್ತಿಲ್ಲ, ಸುಳ್ಳು ಹೇಳುವ ಕರ್ಮ ನಮಗಿಲ್ಲ ನಮ್ಮ ಜೆಡಿಎಸ್ ಅವಧಿಯ ಪ್ರಗತಿ ಕುರಿತು ಸಾಬೀತುಪಡಿಸಲು ನಾವು ಸಿದ್ಧರಿದ್ದೇವೆ, ಹಾಗಾದರೆ ಗಡವು ನಿಗದಿಪಡಿಸಿ ಚರ್ಚಿಗೆ ಬನ್ನಿ ದಾಖಲೆ ಸಮೇತ ಜನತೆಯ ಮುಂದೆ ಇಡೋಣ ಎಂದು ಆಹ್ವಾನಿಸಿದರು.

ರಾಜ್ಯ ಜೆಡಿಎಸ್ ಘಟಕದ ಉಪಾಧ್ಯಕ್ಷ ಎನ್. ತಿಮ್ಮಾರೆಡ್ಡಿ ಮಾತನಾಡಿ, ಜೆಡಿಎಸ್ ಅವಧಿಯ ಪ್ರಗತಿ ಕಾರ್ಯ ನನ್ನ ಕಾಲದಲ್ಲಿ ಆಗಿದೆ ಎಂದು ಶಾಸಕರು ಹೇಳುತ್ತಿದ್ದಾರೆ. ತಾಲೂಕಿನ ಜನತೆಗೆ ಗೊತ್ತಿದೆ ಯಾರ ಕಾಲದಲ್ಲಿ ಎಷ್ಟು ಪ್ರಗತಿ ಕಂಡಿದೆ ಎಂಬುವುದರ ಬಗ್ಗೆ ವಿರೋಧ ನಡುವೆ ಪಟ್ಟಣದ ಹೊರವಲಯದ ರುದ್ರ ಭೂಮಿಯಲ್ಲಿ ವಸತಿ ಶಾಲೆ ಹಾಗೂ ಪಟ್ಟಣದಿಂದ 6 ಕಿಮೀ ದೂರದಲ್ಲಿ ಕೈಗಾರಿಕೆ ಕೇಂದ್ರ ತೆರೆದಿದ್ದು, ಅಲ್ಲಿಗೆ ಯಾರು ಹೋಗಲು ಸಾಧ್ಯವಾಗಿಲ್ಲ ಕೈಗಾರಿಕಾ ಪ್ರದೇಶ ನಿರೂಪಯುಕ್ತವಾಗಿದೆ ಎಂದು ಆರೋಪಿಸಿದರು.

Pragati TV Social Connect for more latest u

Leave a Reply

Your email address will not be published. Required fields are marked *