ಹಣದಾಸೆಗೆ ಗೆಳೆಯನ ಕೊ*: ಸ್ನೇಹಿತನ ಹಣದಲ್ಲೇ 2ನೇ ಪತ್ನಿಗೆ TV ಗಿಫ್ಟ್!

ಹಣದಾಸೆಗೆ ಗೆಳೆಯನ ಕೊ*: ಸ್ನೇಹಿತನ ಹಣದಲ್ಲೇ 2ನೇ ಪತ್ನಿಗೆ TV ಗಿಫ್ಟ್!

ತುಮಕೂರಿನ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಶವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಏಳು ವರ್ಷದ ಸ್ನೇಹವೇ ಕೊನೆಗೆ ಕೊ*ಗೆ ಕಾರಣ

ತುಮಕೂರು: ಜಿಲ್ಲೆಯ ತಿಪಟೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವ ಪ್ರಕರಣಕ್ಕೆ ಇದೀಗ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಮೂರು ಲಕ್ಷ ರೂ ಹಣದಾಸೆಗೆ 7 ವರ್ಷದ ಸ್ನೇಹಕ್ಕೆ ಗೆಳೆಯ ಕೊಳ್ಳಿ ಇಟ್ಟಿದ್ದಾನೆ. ಕೊಲೆ ಬಳಿಕ ಗೆಳೆಯನ ಹಣದಲ್ಲೇ ಎರಡನೇ ಪತ್ನಿಗೆ ಹೊಸ ಟಿವಿ ಖರೀದಿಸಿ ಗಿಫ್ಟ್ ನೀಡಿದ್ದ. ಅಷ್ಟೇ ಅಲ್ಲದೆ ಪತ್ನಿಯೊಂದು ಲಾಡ್ಜ್​ನಲ್ಲಿ ಮಸ್ತಿ ಮಾಡಿ ಪರಾರಿಯಾಗಿದ್ದ ಭೂಪನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಸದ್ಯ ಹೊನ್ನವಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ನಡೆದಿದ್ದೇನು?

ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಅರಣ್ಯ ಪ್ರದೇಶ. ಸುತ್ತಲೂ ಖಾಲಿ ಜಾಗ. ಎತ್ತನೋಡದರೂ ಕಾಣದ ಸೂರು. ನಿಜ ಹೇಳಬೇಕೆಂದರೇ ಅದೊಂದು ನಿರ್ಜನ ಸ್ಥಳ. ಆ ಸ್ಥಳದಲ್ಲಿ ಕಳೆದ ಫೆಬ್ರವರಿ 20ರ ಬೆಳಿಗ್ಗೆಯಂದು ಅರಣ್ಯ ಪ್ರದೇಶದಲ್ಲಿ ಹಾದು ಹೊಗುವ ದಾರಿಯ ಪಕ್ಕದಲ್ಲಿ ಅದೊಬ್ಬ ಅಪರಿಚಿತನ ಶವ ಪತ್ತೆಯಾಗಿತ್ತು. ದುಷ್ಕರ್ಮಿಗಳು ಆ ವ್ಯಕ್ತಿಯ ಕತ್ತು ಸೀಳಿ ಹತ್ಯೆಗೈದಿದ್ದರು. ಅರಣ್ಯ ದಾರಿಯಲ್ಲಿ ಹೆಜ್ಜೆ ಹಾಕಿದ್ದ ಅದೊಬ್ಬ ಶವ ಕಂಡು ಬೆಚ್ಚಿ ಬಿದಿದ್ದ. ಕೂಡಲೇ ಹೊನ್ನವಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದ.

ಸ್ಥಳಕ್ಕೆ ಬಂದ ಪೊಲೀಸರಿಗೆ ಗೊಂದಲ. ಕೊಲೆ ಮಾಡಿದ್ಯಾರು ಅನ್ನೊದಕ್ಕಿಂತ ಅಲ್ಲಿ ಕೊಲೆಯಾದವನು ಯಾರು ಅನ್ನೊದೇ ಪೊಲೀಸರಿಗೆ ಪ್ರಶ್ನೆಯಾಗಿತ್ತು. ಹೀಗಾಗಿ ಅಲ್ಲಿ ಸಿಕ್ಕ ಒಂದಷ್ಟು ಮಾಹಿತಿಗಳ ಮುಖಾಂತರ ತನಿಖೆ ಆರಂಭಿಸಿದ ಪೊಲೀಸರಿಗೆ ಮೃತ ವ್ಯಕ್ತಿ ಪುಟ್ಟರಾಜು ಎಂಬುದು ಗೊತ್ತಾಗಿತ್ತು. ಇನ್ನು ಈತ ಚಿಕ್ಕಮಗಳೂರಿನ ಬೀರೂರು ನಿವಾಸಿ ಅನ್ನೊ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.

ಕೊಲೆ ಮಾಡಿ ಊರು ಬಿಟ್ಟಿದ್ದ ಆರೋಪಿ: ಎರಡನೇ ಹೆಂಡತಿ ಟಿವಿ ಗಿಫ್ಟ್​​

ಹೊನ್ನವಳ್ಳಿಯ ಫೈನಾನ್ಸ್​ನಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುವುದಾಗಿ ಹೇಳಿ ಹೋಗಿದ್ದ. ಆದರೆ ಅವತ್ತು ಹೊನ್ನವಳ್ಳಿಯಲ್ಲಿ ಯಾವುದೇ ಚಿನ್ನದ ಹರಾಜು ಪ್ರಕ್ರಿಯೆ ಇರಲಿಲ್ಲ. ಮೇಲಾಗಿ ಅದೊಂದು ಸುಳ್ಳು. ಆ ಸುಳ್ಳು ಸೃಷ್ಟಿಸಿದ್ದವನು ಇದೇ ಶಫೀ. ಅಲ್ಲಿಗೆ ಶಫೀ ಕೃತ್ಯ ಪೊಲೀಸರಿಗೆ ಗೊತ್ತಾಗಿತ್ತು. ಆತನ ಹುಡುಕಾಟಕ್ಕೆ ಮುಂದಾದ ಪೊಲೀಸರು ಟೆಕ್ನಿಕಲ್ ಜಾಡು ಹಿಡಿದಿದ್ದರು.

ಚಿನ್ನದ ಹರಾಜು ಕಥೆ ನಂಬಿಸುವ ಬರದಲ್ಲಿ ಶಫೀಗೆ ಹುಚ್ಚು ಯೋಚನೆಯೊಂದು ಮೂಡಿತ್ತು. ಅದುವೇ ಪುಟ್ಟರಾಜು ಬಳಿ ಇರುವ ಹಣ ಎಗರಿಸುವ ಚಿಂತೆಯಲ್ಲಿ ಅತನ ಕೊಲೆ ಮಾಡುವ ಸಂಚು. ಯಾವಾಗ ಶಫೀ ಹೇಳಿದ ಮಾತುಗಳನ್ನೆಲ್ಲಾ ಪುಟ್ಟರಾಜು ನಂಬಲು ಆರಂಭಿಸಿದ್ನೋ ಆಗ ಹೊಸದೊಂದು ಕಥೆ ಸೃಷ್ಟಿಸಿಬಿಟ್ಟಿದ್ದ. ಈ ಕಥೆಗೆ ತನ್ನದೇ ಊರನ್ನು ಆರಿಸಿಕೊಂಡ ಶಫೀ ಹೊನ್ನವಳ್ಳಿಯಲ್ಲಿ ಫೈನಾನ್ಸ್​ನ ಚಿನ್ನದ ಹರಾಜು ಇದೆ ಹೊದರೇ ದೊಡ್ಡ ಲಾಭ ಬರುತ್ತದೆ ಎಂಬ ಕಥೆ ಕಟ್ಟಿದ್ದ ಇದಕ್ಕೆ ನಾನು ಸಹ ಹಣ ತರ್ತಿನಿ ನೀನು ಲಕ್ಷ ಲಕ್ಷ ಹಣ ತೆಗೆದುಕೊಂಡು ಬಾ ಎಂದಿದ್ದ. ಈ ಮಾತು ಕೇಳಿದ ಪುಟ್ಟರಾಜು ಮನೆಯಿಂದ ಎರಡುವರೆ ಲಕ್ಷ ರೂ ತಂದು ಶಫೀ ಕೈಗಿಟ್ಟಿದ್ದ. ಅಲ್ಲಿಗೆ ಶಫೀ ಯೋಚನೆ ಮತ್ತಷ್ಟು ಅಡ್ಡದಾರಿ ಕಡೆ ತಿರುಗಿತ್ತು. ಹೀಗಾಗಿ ಮೊದಲೇ ಒಂದಷ್ಟು ಸಂಚು ರೂಪಿಸಿದ್ದ ಶಫೀ ತನ್ನ ಮತ್ತೊಬ್ಬ ಗೆಳೆಯನ ಸ್ಪ್ಲೆಂಡರ್ ಬೈಕ್ ತಂದಿದ್ದ. ಅದೇ ಗಾಡಿಯಲ್ಲಿ ಹೋಗೋಣ ಬಾ ಎಂದು ಪುಟ್ಟರಾಜು ಕರೆದಿದ್ದ. ಅತ್ತ ಪುಟ್ಟರಾಜು ನೈಟ್ ಪ್ಯಾಟ್ ನಲ್ಲಿ ಹೊರ ಬಂದವೇ ಕೈನಲ್ಲಿ ಹಣ ಹಿಡಿದ್ದ. ತನ್ನ ಬಳಿ ಹಣ ಇಟ್ಕೊಳೊಕೆ ಆಗಲ್ಲಪ್ಪ ನೀನೇ ಇಟ್ಕೊ ಅಂತ ಆ ಹಣವನ್ನು ಶಫೀ ಕೈಗಿಟ್ಟಿದ್ದ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *