ತುಮಕೂರು : ಜಿಲ್ಲೆಯಲ್ಲಿ ಜಿಲ್ಲಾಸ್ತರದ ಮಟ್ಟದಲ್ಲಿ ಮಹಿಳೆಯರದ್ದೇ ಪಾರುಪಥ್ಯವಿದ್ದು, ಈಗ ಗ್ರಾಮ ಪಂಚಾಯತಿ ಸ್ತರದಲ್ಲೂ ಮಹಿಳೆಯರದ್ದೆ ಪಾರುಪಥ್ಯ ಹೆಚ್ಚಾಗುತ್ತಿದೆ. ತುಮಕೂರು ಬೆಳಗುಂಬ ಗ್ರಾಮ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅನ್ನಪೂರ್ಣ ಆಯ್ಕೆಯಾಗಿದ್ದಾರೆ. ಮತ್ತೆ ಗ್ರಾಮ ಪಂಚಾಯತಿ ಚುನಾವಣೆ ಬರುವ ಕೊನೆ ಘಟ್ಟದಲ್ಲಿ ಅಂದ್ರೆ ಮುಂದಿನ ಮೂರು ತಿಂಗಳುಗಳ ಕಾಲ ಅನ್ನಪೂರ್ಣ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ತುಮಕೂರು ನಗರಕ್ಕೆ ಹೊಂದಿಕೊಂಡಿರುವ ಬೆಳಗುಂಬ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 18 ಸದಸ್ಯರಿದ್ದಾರೆ. ಅವರಲ್ಲಿ ಮಹಿಳಾ ಸದಸ್ಯೆಯರೇ ಹತ್ತು ಮಂದಿ ಇದ್ದು, ಉಳಿದ ಎಂಟು ಮಂದಿ ಪುರುಷ ಸದಸ್ಯರಿದ್ದಾರೆ. ಕಳೆದ ಮೂರು ಅವಧಿಯಿಂದಲೂ ಈ ಪಂಚಾಯಿತಿಯ ಅಧ್ಯಕ್ಷೆ ಸ್ಥಾನ ಮಹಿಳೆಯರ ಪಾಲಾಗುತ್ತಿದ್ದು, ಇದೀಗ ಮತ್ತೊಮ್ಮೆ ಮಹಿಳಾ ಮಣಿಯರೇ ಮೇಲುಗೈ ಸಾಧಿಸಿದ್ದಾರೆ.
ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಅನ್ನಪೂರ್ಣ ಮಾತನಾಡಿ, ನನ್ನನ್ನು ಅವಿರೋಧ ಆಯ್ಕೆ ಮಾಡಿದ್ದಕ್ಕೆ ನಾನು ಧನ್ಯ. ನಾನು ಸ್ಥಳೀಯ ಅಭಿವೃದ್ಧಿಗೆ ಆದ್ಯತೆ ನೀಡಿ, ಮೂಲಸೌಕರ್ಯ, ಕುಡಿಯುವ ನೀರು, ಮಹಿಳಾ ಸ್ವಸಹಾಯ ಸಂಘಗಳ ಬಲವರ್ಧನೆ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯಚಟುವಟಿಕೆ ಕೈಗೊಳ್ಳುವುದಾಗಿ ಹೇಳಿದ್ದಾರೆ. .
ಗ್ರಾಮ ಪಂಚಾಯತಿ ಮಟ್ಟದಲ್ಲಿಯೂ ಮಹಿಳೆಯರು ರಾಜಕೀಯ ಪ್ರಾಬಲ್ಯ ಪಡೆಯುತ್ತಿರುವುದು ವಿಶೇಷವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ರಾಜಕೀಯ ಶಕ್ತಿ ಹೆಚ್ಚಾಗಲಿದೆ.
For More Updates Join our WhatsApp Group :
