G20 Summit: ಭಗವದ್ಗೀತೆಯ ನೀತಿಗಳನ್ನು ತಿಳಿಸಲಿರುವ ಗೀತಾ ಅಪ್ಲಿಕೇಶನ್..!!

ನವದೆಹಲಿ: ಡಿಜಿಟಲ್ ಇಂಡಿಯಾ ಮೂಲಕ ಜಿ20 (G-20 Summit) ಪ್ರತಿನಿಧಿಗಳಿಗೆ ಭಗವದ್ಗೀತೆಯ ಸಾರವನ್ನು ನೀಡಲು ಎಐ ಚಾಲಿತ ಗೀತಾ ಅಪ್ಲಿಕೇಷನ್ ಸಿದ್ಧಪಡಿಸಲಾಗಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಅಪ್ಲಿಕೇಷನ್ ಮೂಲಕ ಹಿಂದೂ ಧರ್ಮದ ಪ್ರಮುಖ ಧಾರ್ಮಿಕ ಗ್ರಂಥಗಳಲ್ಲಿ ಒಂದಾದ ಭಗವದ್ಗೀತೆಯಲ್ಲಿ ಉಲ್ಲೇಖಿಸಿರುವಂತೆ ಸೂಕ್ತವಾದ ಅಂಶಗಳನ್ನು ಇದು ಒದಗಿಸಲಿದೆ.

ಭಗವದ್ಗೀತೆ

ಇದರಲ್ಲಿ ಯಾವುದೇ ಸಮಸ್ಯೆಗಳಿಗೆ ಹುಡುಕಾಟ ನಡೆಸಿದರೆ ಭಗವದ್ಗೀತೆಯಲ್ಲಿ (Bhagawad Gita) ಉಲ್ಲೇಖಿಸಲಾದ ಅಂಶಗಳ ಆಧಾರದ ಮೇಲೆ ಉತ್ತರ ದೊರೆಯಲಿದೆ. ಇದರ ಉದ್ದೇಶ ಮಾರ್ಗದರ್ಶನ, ಸ್ಫೂರ್ತಿ ಮತ್ತು ಪರಿವರ್ತನೆಯಾಗಿದೆ. ಅಪ್ಲಿಕೇಷನ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ. ಇದರ ಬಳಕೆ ಸಹ ಸರಳವಾಗಿದೆ. ಹೆಸರು, ಲಿಂಗ ಮತ್ತು ವಯಸ್ಸಿನಂತಹ ಸರಳ ಅಂಶಗಳನ್ನು ಅಪ್‍ಲೋಡ್ ಮಾಡುವ ಮೂಲಕ ಇದನ್ನು ಬಳಸಬಹುದಾಗಿದೆ.

ಈಗಾಗಲೇ ಇದರಲ್ಲಿ ಪ್ರಶ್ನೆಗಳನ್ನು ಅಪ್‍ಲೋಡ್ ಮಾಡಲಾಗಿದೆ. ಇದನ್ನೇ ಬಳಸಿ ಬಳಕೆದಾರರು ಆ ಪ್ರಶ್ನೆಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ಉತ್ತರ ಕಂಡುಕೊಳ್ಳಬಹುದು. ಇಲ್ಲವೇ ತಮ್ಮದೇ ಆದ ಪ್ರಶ್ನೆಗಳನ್ನು ಇದರಲ್ಲಿ ಕೇಳಬಹುದು. ಧ್ವನಿಯನ್ನು ಸಹ ಇದು ಗ್ರಹಿಸಲಿದೆ. 

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *