ಗದಗ: ಜಿಲ್ಲೆಯ ಮುಂಡರಗಿ ಮೂಲದ ಕೆಎಸ್‌ಆರ್‌ಟಿಸಿ ಚಾಲಕ ವೀರಣ್ಣ ಮೇಟಿ ಅವರ ಕನ್ನಡ ಪ್ರೇಮ ಎಲ್ಲರ ಗಮನ ಸೆಳೆದಿದೆ. ರಾಜ್ಯೋತ್ಸವದ ಸಂಭ್ರಮದಲ್ಲಿ ತಮ್ಮ ಸರ್ಕಾರಿ ಬಸ್ಸನ್ನು ಸಂಪೂರ್ಣಅಲಂಕರಿಸಿರುವ ಅವರು, ಬಸ್ ಮುಂಭಾಗದಲ್ಲಿ ಭುವನೇಶ್ವರಿ ಮೂರ್ತಿಯನ್ನು ಅಳವಡಿಸಿ, ಕೆಂಪು-ಹಳದಿ ಹೂವುಗಳಿಂದ ಶೃಂಗಾರ ಮಾಡಿದ್ದಾರೆ.
ಬಸ್‌ನಲ್ಲಿ ಕನ್ನಡ ಗೀತೆಗಳ ಸದ್ದು, ಪ್ರಯಾಣಿಕರಿಗೆ ವಿಭಿನ್ನ ಅನುಭವ. “ಕನ್ನಡ ಉಳಿಸಲು, ಬೆಳೆಸಲು, ಕನ್ನಡಾಂಬೆಗಾಗಿ ನನ್ನ ಸೇವೆ” ಎಂದು ಹೇಳುವ ಮೇಟಿ, ಸ್ವಂತ ಖರ್ಚಿನಲ್ಲಿ ಹಾಗೂ ಸ್ನೇಹಿತರ ಸಹಕಾರದಿಂದ ವರ್ಷಗಳಿಂದ ಇಂತಹ ಕನ್ನಡ ಸಂಭ್ರಮ ಆಚರಿಸುತ್ತಿದ್ದಾರೆ. ಪ್ರಯಾಣಿಕರು ಅವರ ಕನ್ನಡ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
For More Updates Join our WhatsApp Group :

