ಪ್ರಧಾನಿ ನರೇಂದ್ರ ಮೋದಿಯವರ ಸಹೋದರಿ ವಸಂತಿ ಬೆನ್ ಇತ್ತೀಚೆಗೆ ಋಷಿಕೇಶದಲ್ಲಿರುವ ಗಂಗಾ ಘಾಟ್ಗೆ ಭೇಟಿ ನೀಡಿದ್ದರು. ಅವರ ಸರಳತೆಯನ್ನು ನೆಟ್ಟಿಗಳು ಬಾಯ್ತುಂಬಾ ಹೊಗಳಿದ್ದಾರೆ. ಅಪೂರ್ವ ಸಿಂಗ್ ಎಂಬುವವರು ಎಕ್ಸ್ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ.
ಈಕೆ ಸಾಮಾನ್ಯ ಮಹಿಳೆಯಲ್ಲ, ಭಾರತದ ಅತ್ಯಂತ ಜನಪ್ರಿಯ ನಾಯಕಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರಿ ವಸಂತಿಬೆನ್ ಮೋದಿ.ಅವರು ಸಾಮಾನ್ಯ ವ್ಯಕ್ತಿಯಂತೆ, ಗಂಗಾ ಘಾಟ್ನಲ್ಲಿ ಸ್ನಾನ ಮಾಡಲು ಬಂದಿದ್ದರು.
ವರದಿಗಳ ಪ್ರಕಾರ, ವಸಂತಿಬೆನ್ ಮತ್ತು ಅವರ ಪತಿ ಹಸ್ಮುಖ್ಲಾಲ್ ಮೋದಿ ಆರು ದಿನಗಳ ಧಾರ್ಮಿಕ ಪ್ರವಾಸಕ್ಕಾಗಿ ಋಷಿಕೇಶ ಬಂದಿದ್ದರು.ಅವರನ್ನು ಹೋಟೆಲ್ ಉದ್ಯಮಿ ಅಕ್ಷತ್ ಗೋಯಲ್ ಮತ್ತು ನಮಾಮಿ ನರ್ಮದಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಪಂಡಿತ್ ಹರೀಶ್ ಉನಿಯಾಲ್ ಅವರು ಪ್ರೀತಿಯಿಂದ ಬರಮಾಡಿಕೊಂಡರು, ಋಷಿಕೇಶದ ಖಾಸಗಿ ಹೋಟೆಲ್ನಲ್ಲಿ ತಂಗಿದ್ದರು.
ಕೆಲವು ನೆಟ್ಟಿಗರು ಆರಂಭದಲ್ಲಿ ಇದನ್ನು ಕಾಶಿ ಘಾಟ್ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಈ ವಿಡಿಯೋವನ್ನು ಉತ್ತರಾಖಂಡದ ಋಷಿಕೇಶದಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಗಳು ಸ್ಪಷ್ಟಪಡಿಸಿವೆ.
ಅನೇಕ ನೆಟ್ಟಿಗರು ಪ್ರಧಾನಿ ಕುಟುಂಬದ ಸರಳತೆಯನ್ನು ಶ್ಲಾಘಿಸಿದರು ಮತ್ತು ಇತರೆ ರಾಜಕೀಯ ಕುಟುಂಬಗಳ ಜೀವನಶೈಲಿಯೊಂದಿಗೆ ಇದನ್ನು ಹೋಲಿಸಿದರು.
For More Updates Join our WhatsApp Group :

