GBA ಚುನಾವಣೆ: BJP–JDS ಮೈತ್ರಿ ಮೇಲಿನ ಪ್ರಶ್ನೆ.?

GBA ಚುನಾವಣೆ: BJP–JDS ಮೈತ್ರಿ ಮೇಲಿನ ಪ್ರಶ್ನೆ.?

ಆರ್. ಅಶೋಕ್ ಹೇಳಿಕೆ – ಮೈತ್ರಿ ನಿರ್ಧಾರ ಹೈಕಮಾಂಡ್‌ನಲ್ಲಿ

ಬೆಂಗಳೂರು : ಗ್ರೇಟರ್​​ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಬಿಜೆಪಿ ಮತತು ಜೆಡಿಎಸ್​​ ಮೈತ್ರಿಯಾಗಿಯೇ ಕಣಕ್ಕೆ ಇಳಿಯುತ್ತವೆಯೇ ಎಂಬ ಪ್ರಶ್ನೆಗೆ ವಿಪಕ್ಷ ನಾಯಕ ಆರ್​​. ಅಶೋಕ್​​ ಉತ್ತರಿಸಿದ್ದು, ಮೈತ್ರಿ ಕುರಿತ ಯಾವುದೇ ನಿರ್ಧಾರ ತಮ್ಮ ಕೈಯಲ್ಲಿಲ್ಲ. ಆ ತಿರ್ಮಾನ ನಮ್ಮ ರಾಷ್ಟ್ರೀಯ ಅಧ್ಯಕ್ಷರಿಗೆ ಸೇರಿದ್ದು. ಮೈತ್ರಿ ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ. ಆದರೆ, ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಜೆಡಿಎಸ್ ಶೇಕಡಾ 50ರಷ್ಟು ಸ್ಥಾನಗಳನ್ನು ಕೇಳುತ್ತಿದೆ ಎಂಬ ಮಾತುಗಳ ಕುರಿತೂ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಕೇಂದ್ರ ನಾಯಕರು ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಚುನಾವಣೆ ಘೋಷಣೆಯಾದ ನಂತರವೇ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *