Genie Organization Label , ಡಬ್ಬಿ ನಕಲು ಮಾಡಿ ಗೋಧಿಹಿಟ್ಟು ಮಾರಾಟ.!

Genie Organization Label , ಡಬ್ಬಿ ನಕಲು ಮಾಡಿ ಗೋಧಿಹಿಟ್ಟು ಮಾರಾಟ.!

ಆನ್ ಲೈನ್ ವಂಚಕರ ಜಾಲವನ್ನು ಪೊಲೀಸರು ಭೇದಿಸಿದ್ದೇ ರೋಚಕ.

ಗೋಧಿ ಹಿಟ್ಟನ್ನು ತೂಕ ಇಳಿಕೆ ಪುಡಿ ಎಂದು ಮಾರಾಟ ಮಾಡುತ್ತಿದ್ದ ಹಗರಣವನ್ನು ತುಮಕೂರು ಪೊಲೀಸರು ಬಯಲಿಗೆಳೆದಿದ್ದಾರೆ. ಲೇಬಲ್ ನಕಲು ಮಾಡಿ ಅನ್ ಲೈನ್ ನಲ್ಲಿ ಸ್ಲಿಂ ಪೌಡರ್ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಕೆಡ್ಡಾಕೆ ಕೆಡವಿದ್ದಾರೆ.

ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಗಳಿಸುವ ಆಸೆಗೆ ಬಿದ್ದು, ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಅಂತರರಾಜ್ಯ ನಕಲಿ ಜಾಲವೊಂದನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸರು ಬೇಧಿಸಿದ್ದು, ಸ್ಲಿಂ ಪೌಡರ್ ಹೆಸರಲ್ಲಿ   ಗೋಧಿಹಿಟ್ಟು ಮಾರಾಟ ಮಾಡುತ್ತಿದ್ದ  ಹಗರಣವನ್ನು ಬಯಲಿಗೆಳೆದಿದ್ದಾರೆ.

ಹೌದು, ಜೀನಿ ಕಂಪನಿಯ ಟ್ರೇಡ್‌ಮಾರ್ಕ್ ಮತ್ತು ಲೇಬಲ್‌ಗಳನ್ನು ಬಳಸಿ ನಕಲಿ ‘ಸ್ಲಿಮ್ ಪೌಡರ್’ ಮಾರಾಟವಾಗುತ್ತಿರುವ ಬಗ್ಗೆ ಕಂಪನಿಯ ಮಾಲೀಕರಾದ ದಿಲೀಪ್ ಕುಮಾ‌ರ್ ಅವರು ಕಳ್ಳಂಬೆಳ್ಳ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವೊಂದು ತನಿಖೆ ಕೈಗೊಂಡಿತ್ತು. ಈ ತಂಡವು ದೆಹಲಿಯಲ್ಲಿದ್ದ ನಕಲಿ ಉತ್ಪನ್ನ ತಯಾರಿಕಾ ಗೋಡೌನ್ ಮೇಲೆ ದಾಳಿ ನಡೆಸಿ, ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಆರೋಪಿಗಳು ಪ್ರತಿಷ್ಠಿತ ಆನ್ ಲೈನ್ ಡೆಲವರಿ ವೇದಿಕೆಯಲ್ಲಿ ಮಾರಾಟ ಮಾಡುತ್ತಿದ್ದರು. ನಕಲಿ ಉತ್ಪನ್ನಗಳು ಜನರ ಕೈ ಸೇರಿದಾಗ ಜೀನಿ ಸಂಸ್ಥೆ ಹೆಸರಲ್ಲಿ ನಕಲಿ ಉತ್ಪನ್ನಗಳು ಆನ್ ಲೈನ್ ನಲ್ಲಿ ಮಾರಾಟ ವಾಗುತ್ತಿರುವುದು ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಜೀನಿ ಸಂಸ್ಥೆ ತಕ್ಷಣವೇ ಅಲರ್ಟ್ ಆಗಿ ದೂರು ನೀಡಿ ಕ್ರಮ ಕೈಗೊಳ್ಳಲು ಮನವಿ ಮಾಡಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಚರಣೆ ನಡೆಸಿ ನಕಲಿ ವಂಚಕ ಜಾಲವನ್ನು ಪತ್ತೆ ಹಚ್ಚಿದ್ದಾರೆ.

ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ. ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್ ಮತ್ತು ಪುರುಷೋತ್ತಮ.ಎಂ.ಎಲ್. ರವರ ನೇತೃತ್ವದಲ್ಲಿ, ಶಿರಾ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಕೆ.ಶೇಖರ್ ರವರ ಮಾರ್ಗಸೂಚನೆ ಮೇರೆಗೆ, ಡಿ.ಜಿ.ಶ್ರೀನಿವಾಸ ಸಿಪಿಐ ಶಿರಾ ಗ್ರಾಮಾಂತರ ವೃತ್ತ, ರಮೇಶ್ ಪಿ.ಐ ನಿಸ್ತಂತು ವಿಭಾಗ, ಭೈರೇಗೌಡ ಪಿಎಸ್‌ಐ ಕಳ್ಳಂಬೆಳ್ಳ ಪೊಲೀಸ್ ಠಾಣೆ, ಎಎಸ್‌ಐಗಳಾದ ನರಸಿಂಹಮೂರ್ತಿ, ಗಂಗಣ್ಣ, ಹುಚ್ಚೇರಣ್ಣ, ಶ್ರೀನಿವಾಸ, ನರಸಿಂಹಯ್ಯ ಹಾಗೂ ಸಿಬ್ಬಂದಿಗಳಾದ ನಟರಾಜು, ಆಮೀರ್ ಇನಾಮದಾರ್, ಬಂಗಾರಪ್ಪ ಪಾಟೀಲ, ಶ್ರೀನಿವಾಸ, ಭೂತರಾಜು, ನಾಗರಾಜು, ಚಾಲಕ ರಜಿತ್ ಕುಮಾರ್ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗಳಾದ ನರಸಿಂಹರಾಜು, ದುಶ್ಯಂತ್ ಅವರ‌ ತಂಡ ನಕಲಿ‌ ಜಾಲ ಭೇದಿಸಿದೆ. ವಿಶೇಷ ತಂಡಕ್ಕೆ ಎಸ್ಪಿ ಕೆ.ವಿ. ಅಶೋಕ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *