ನವದೆಹಲಿ: ಜಾಗತಿಕ ಪಾಸ್ಪೋರ್ಟ್ ಸೂಚ್ಯಂಕದಲ್ಲಿ ಭಾರತವೂ 82ನೇ ಸ್ಥಾನದಲ್ಲಿದ್ದು, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಂತಹ 58 ದೇಶಗಳಿಗೆ ಭಾರತೀಯರು ವೀಸಾ ಮುಕ್ತ ಪ್ರವೇಶವನ್ನು ಮಾಡಬಹುದಾಗಿದೆ.
ಯುಕೆ ಮೂಲಕ ಹೆನ್ಲೆ ಪಾಸ್ಪೋರ್ಟ್ ಸೂಚ್ಯಂಕ ಇತ್ತೀಚಿಗೆ ನೀಡಿದ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಪಾಸ್ಪೋರ್ಟ್ ಸ್ಥಾನ ಸುಧಾರಣೆ ಕಂಡಿದೆ. ಈ ರ್ಯಾಂಕಿಂಗ್ ಅನ್ನು ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ (ಐಎಟಿಎ) ದತ್ತಾಂಶದ ಆಧಾರದ ಮೇಲೆ ನೀಡಲಾಗುತ್ತದೆ.
ಹೆನ್ಲೆ ಪಾಸ್ಪೋರ್ಟ್ ಸೂಚ್ಯಂಕವು ದೇಶಗಳ ಜಾಗತಿಕ ರ್ಯಾಂಕಿಂಗ್ ಆಗಿದೆ. ಇದು ಆ ದೇಶಗಳ ನಾಗರಿಕರಿಗೆ ಸಾಮಾನ್ಯ ಪಾಸ್ಪೋರ್ಟ್ ಮೂಲಕ ಸಂಚರಿಸುವ ಸ್ವಾತಂತ್ರ್ಯವನ್ನು ನೀಡುತ್ತದೆ.
ಈ ಪಾಸ್ಪೋರ್ಟ್ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿ ಸಿಂಗಾಪೂರ್ ಇದೆ. ಇತ್ತೀಚಿನ ಸ್ಥಾನಗಳ ಪಟ್ಟಿಯಲ್ಲಿ ವಿಶ್ವದ ಶಕ್ತಿಯುತ ಪಾಸ್ಪೋರ್ಟ್ ಟೈಟಲ್ ಅನ್ನು ಇದು ಪಡೆದಿದೆ. ನಗರ-ರಾಜ್ಯಗಳು ಕೂಡ ಹೊಸ ದಾಖಲೆಯನ್ನು ಇದರಲ್ಲಿ ಸ್ಕೋರ್ ಮಾಡಿದೆ. ಇದರಿಂದಾಗಿ 227 ವಿಶ್ವದ ವೀಸಾ ಮುಕ್ತ ಸ್ಥಳಗಳಲ್ಲಿ 195 ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ. ಫ್ರಾನ್ಸ್, ಜಪಾನ್ ಮತ್ತು ಸ್ಪೇನ್ ಇದರಲ್ಲಿ ಎರಡನೇ ಸ್ಥಾನಕ್ಕೆ ಇಳಿದಿದ್ದು. ಇವೆರಡು 192 ತಾಣಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಹೊಂದಿವೆ.
ಆಸ್ಟ್ರೀಯಾ, ಫಿನ್ಲೆಂಡ್, ಐರ್ಲೆಂಡ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ ಮತ್ತು ದಕ್ಷಿಣ ಕೊರಿಯಾ, ಸ್ವೀಡನ್ ಸೇರಿದಂತೆ 191 ಪೂರ್ವ ವೀಸಾ ಇಲ್ಲದೆ ಪ್ರವೇಶ ಹೊಂದಿರುವ ಏಳು ರಾಷ್ಟ್ರಗಳ ಸಮೂಹವು ಈ ಸೂಚ್ಯಂಕದಲ್ಲಿ 3ನೇ ಸ್ಥಾನದಲ್ಲಿದೆ.
ವೀಸಾ ಮುಕ್ತ ಸ್ಕೋರ್ನಲ್ಲಿ 190ನೇ ಸ್ಥಾನಕ್ಕೆ ಯುಕೆ ಕುಸಿದಿದ್ದರೂ, ಬೆಲ್ಜಿಯಂ, ಡೆನ್ಮಾರ್ಕ್, ನ್ಯೂಜಿಲೆಂಡ್, ನಾರ್ವೆ ಮತ್ತು ಸ್ವಿಟ್ಜರ್ಲ್ಯಾಂಡ್ ನಾಲ್ಕು ಸ್ಥಳಗಳಿಗೆ ವೀಸಾ ಮುಕ್ತ ಸಂಚಾರ ಮಾಡಬಹುದಾಗಿದೆ.