ಸಾಮಾನ್ಯವಾಗಿ, ಮದುವೆಗಳು ಮತ್ತು ಶುಭ ಕಾರ್ಯಕ್ರಮಗಳ ವಿಷಯಕ್ಕೆ ಬಂದಾಗ ಮೊದಲಿಗೆ ನೆನಪಿಗೆ ಬರುವುದೇ ಬಂಗಾರ. ಚಿನ್ನವು ನಮ್ಮ ಸಾಂಸ್ಕೃತಿಕ ಸಂಪ್ರದಾಯಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಅದೇ ಸಮಯದಲ್ಲಿ, ಹೂಡಿಕೆ ಮಾಡಲು ಬಯಸುವವರು ಹೆಚ್ಚಾಗಿ ಚಿನ್ನದತ್ತ ವಾಲುತ್ತಿದ್ದಾರೆ. ಹೀಗಾಗಿ ಕಾಲಕಾಲಕ್ಕೆ ಚಿನ್ನದ ಬೆಲೆಯನ್ನು ತಿಳಿದುಕೊಳ್ಳಲು ಬಯಸುತ್ತಾರೆ.
ಈ ನಡುವೆ ಸತತ ಮೂರನೇ ದಿನವು ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕುಸಿತ ಕಂಡಿವೆ. ಶನಿವಾರವೂ ಬೆಳ್ಳಿ- ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ 1,01,900 ರೂ. ಆಗಿದ್ದರೆ, ಶನಿವಾರದ ವೇಳೆಗೆ ಅದು 730 ರೂ.ಗಳಷ್ಟು ಕಡಿಮೆಯಾಗಿ 1,01,170 ರೂ.ಗಳಿಗೆ ತಲುಪಿದೆ.
ಇನ್ನು ಒಂದು ಕಿಲೋ ಬೆಳ್ಳಿಯ ಬೆಲೆ ಶುಕ್ರವಾರ 1,18,600 ರೂ.ಇದ್ದದ್ದು ಶನಿವಾರದ ವೇಳೆಗೆ 200 ರೂ. ಇಳಿಕೆಯಾಗಿ 1,18,400 ರೂ.ಗೆ ಮುಟ್ಟಿದೆ.
ಬೆಂಗಳೂರಿನಲ್ಲಿ ಇಂದಿನ ಬೆಲೆ ಎಷ್ಟು? :
- ಸಿಲಿಕಾನ್ ಸಿಟಿಯಲ್ಲಿ ಇಂದು 24 ಕ್ಯಾರೆಟ್ ನ 10 ಗ್ರಾಂ ಬಂಗಾರದ ಬೆಲೆ 99930 ರೂ ಇದೆ. ಇಂದು ಸುಮಾರು 550 ರೂ ಇಳಿಕೆ ಕಂಡಿದೆ.
- 99.9 ಪ್ಯೂರಿಟಿಯ 10 ಗ್ರಾಂ ಚಿನ್ನದ ನಾಣ್ಯದ ಬೆಲೆ 1,01,170 ರೂ ಇದೆ. ಇಂದು ಇದು ಸುಮಾರು 730 ರೂ ಕುಸಿತ ಕಂಡಿದೆ.
- 22 ಕ್ಯಾರೆಟ್ ನ 10 ಗ್ರಾಂ ಆಭರಣ ಚಿನ್ನದ ದರ ಇಂದು 91,160 ರೂ. ಇದೆ. ಅಂದರೆ ಇಂದು ಸುಮಾರು 500 ಇಳಿಕೆ ಕಂಡಿದೆ.
- ಇನ್ನು 18 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ 74950 ರೂ ದರವಿದೆ.
ಹೈದರಾಬಾದ್‌ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ರೂ. 1,01,170 ಇದ್ದರೆ ಒಂದು ಕಿಲೋ ಬೆಳ್ಳಿಯ ಬೆಲೆ ರೂ. 1,18,400ಗೆ ನಿಗದಿ ಆಗಿತ್ತು.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ನಿಗದಿಯಾಗಿದ್ದ ದರಗಳಾಗಿವೆ. ಚಿನ್ನ ಮತ್ತು ಬೆಳ್ಳಿ ದರಗಳು ಆಗಾಗ್ಗೆ ಬದಲಾವಣೆಗೆ ಒಳಪಟ್ಟಿರುತ್ತವೆ ಎಂಬುದನ್ನು ದಯವಿಟ್ಟು ಗಮನಿಸಿ