ತುಮಕೂರಿನಲ್ಲಿ ಕರ್ನಾಟಕ ಕ್ರೀಡಾಕೂಟ 2025-26 ರ ರೋಡ್ ಸೈಕ್ಲಿಂಗ್
ತುಮಕೂರು: ಬೆಂಗಳೂರು ಹೊನ್ನವರ ರಸ್ತೆಯಲ್ಲಿ ನಡೆದ ಪುರುಷರ ರೋಡ್ ಸೈಕ್ಲಿಂಗ್ ನ ಮಾಸ್ ಸ್ಟಾರ್ಟ್ ವಿಭಾಗದಲ್ಲಿ ಬೆಳಗಾವಿಯ ನೀಲ್ ಐವರ್ ಡಿಸೋಜಾ 57:47:008 ಸೆಕೆಂಡ್ ನಲ್ಲಿ ಕ್ರಮಿಸಿ ಸ್ವರ್ಣ ಪದಕ ಗೆದ್ದುಕೊಂಡರು. ಧಾರವಾಡದ ಸ್ವಯಂ ಎಂ ಕಠಾರೆ (57:47:234 ಸೆ.) ಮತ್ತು ಬಾಗಲಕೋಟೆಯ ಉದಯ ಕುಮಾರ ಹಂಡಿ (57:47:856 ಸೆ.) ಬೆಳ್ಳಿ ಮತ್ತು ಕಂಚಿನ ಪಡೆದುಕೊಂಡರು.
ಮಹಿಳೆಯರ ರೋಡ್ ಸೈಕ್ಲಿಂಗ್ ನ ಮಾಸ್ ಸ್ಪಾರ್ಟ್ ವಿಭಾಗದಲ್ಲಿ ವಿಜಯಪುರದ ಪಾಯಲ್ ಚವ್ಜಾಣ (58:20:474), ಬಾಗಲಕೋಟೆಯ ಪೂಜಾ ಮಠಪತಿ (58:21:086) ಮತ್ತು ಬಾಗಲಕೋಟೆಯ ನಂದಾ ಚಿಂಚಕಂಡಿ (58:21:546) ಮೊದಲ ಮೂರು ಸ್ಥಾನ ಪಡೆದು ಪದಕಗಳಿಗೆ ಕೊರಳೊಡ್ಡಿದರು.
ಇದೇ ಸ್ಪರ್ಧೆಯ ಪುರುಷರ ರೋಡ್ ಸೈಕ್ಲಿಂಗ್ ಸ್ಪರ್ಧೆಯ 40 ಕಿಲೋ ಮೀಟರ್ ತಂಡ ವಿಭಾಗದಲ್ಲಿ ಬಾಗಲಕೋಟೆ ತಂಡ ಸ್ವರ್ಣ ಗೆದ್ದಿತು. (55:11;118 ಸೆ. – ಮಲ್ಲಿಕಾರ್ಜುನ ಎಚ್. ಶಿರೋಳ, ಸಾಗರ ಪೂಜಾರಿ, ಶ್ರೀಶೈಲ್ ವೀರಾಪೂರ, ಉದಯ ಕುಮಾರ ಹಂಡಿ), ಮೈಸೂರು ತಂಡ (58:28:858 ಸೆ.- ವಿಶಾಖ ಕೆ.ವಿ., ಸೋಮೇಶ್ ಜಿ., ಚರಿತ್ ಗೌಡ ಸಿ.) ಮತ್ತು ವಿಜಯಪುರ ತಂಡ (59:39:805 ಸೆ.- ಯರಗುರಪ್ಪ ಗಡ್ಡಿ, ಗೌತಮ್ ಬೇಲೆರಿ, ಸದಾನಂದ ಬಿರಾದಾರ, ಸಚಿನ್ ರಂಜಣಗಿ) ಮಹಿಳೆಯರ ರೋಡ್ ಸೈಕ್ಲಿಂಗ್ 40 ಕಿಲೋ ಮೀಟರ್ ತಂಡ ವಿಭಾಗದಲ್ಲಿ ಬಾಗಲಕೋಟೆ ತಂಡ (32:44:546 ಸೆ.- ಪೂಜಾ ಮಠಪತಿ, ನಿವೇದಿತಾ, ನಂದಾ ಚಿಚತಂಡಿ), ವಿಜಯಪುರ (33:45:398 ಸೆ. – ಪಾಯಲ್ ಚವ್ಹಾಣ, ಅಕ್ಷತಾ ಭೂತನಾಳ, ಕಾವೇರಿ ಎಂ. ಡೊಳ್ಳಿ), ಧಾರವಾಡ (33:58:862 ಸೆ. – ಕೀರ್ತಿ ನಾಯಕ, ಭೀಮವ್ವ ಮಾಳಗೊಂಡ, ಶೈಲಾ ಎಚ್. ನ್ಯಾಮಗೌಡ) ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡವು.
For More Updates Join our WhatsApp Group :




