ಬಂಗಾರದ ಬೆಲೆ ಬಜೆಟ್ 2024ರ ನಂತರ ಭಾರಿ ಕುಸಿತ ಕಾಣುತ್ತಿತ್ತು. ಆದರೆ ಈಗ ದಿಢೀರ್ ಮತ್ತೆ ಏರಿಕೆ ಹಾದಿಗೆ ಮರಳಿದೆ ಚಿನ್ನದ ಬೆಲೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಹೀಗೆ ಚಿನ್ನದ ಬೆಲೆ ಕುಸಿಯುತ್ತಾ ಸಾಗಿತ್ತು, ಇಂದು ದಿಢೀರ್ ಏರಿಕೆ ಕಂಡಿದೆ ಚಿನ್ನದ ಬೆಲೆ.ಹಾಗಾದ್ರೆ ಇಂದು ಎಷ್ಟಿದೆ ಚಿನ್ನದ ಬೆಲೆ? ಬೆಳ್ಳಿ ಬೆಲೆ ಎಷ್ಟಿದೆ? ಮಾಹಿತಿ ಇಲ್ಲಿದೆ ಮುಂದೆ ಓದಿ.
ಬಂಗಾರಕ್ಕೆ ಭರ್ಜರಿ ಬೆಲೆ ಬಂದಿತ್ತು, ಅದ್ರಲ್ಲೂ 2024ರ ಆರಂಭದಲ್ಲಿ ಬಂಗಾರದ ಬೆಲೆ ಏರಿಕೆ ಕಾಣುತ್ತಿದ್ದ ರೀತಿ ನೋಡಿದರೆ ಶೀಘ್ರದಲ್ಲೇ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,00,000 ರೂ. ತಲುಪಲಿದೆ ಎನ್ನಲಾಗಿತ್ತು. ಹೀಗಿದ್ದಾಗಲೇ ಹತ್ತಿರ ಹತ್ತಿರ 70 ಸಾವಿರ ರೂಪಾಯಿ ತಲುಪಿದ್ದ ಚಿನ್ನದ ಬೆಲೆ ದಿಢೀರ್ ಕುಸಿತದ ಹಾದಿ ಹಿಡಿದು, ಮಕಾಡೆ ಮಲಗಿತ್ತು. ಆದರೆ ಇಂದು ಮತ್ತೆ ಚಿನ್ನದ ಬೆಲೆ ಏರಿಕೆ ಕಂಡಿದೆ. ಹಾಗಾದರೆ ಕರ್ನಾಟಕ & ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಆಗಿದೆ? ಈಗ ಎಷ್ಟು ರೂಪಾಯಿಗೆ ಸಿಗುತ್ತಿದೆ ಚಿನ್ನ? ಮುಂದೆ ಓದಿ.
ಚಿನ್ನದ ಬೆಲೆ
ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಇಂದು ದಿಢೀರ್ ಚಿನ್ನದ ಬೆಲೆ ಏರಿಕೆಯನ್ನ ಕಂಡಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆ ಬಳಿಕ ಮತ್ತಷ್ಟು ಮೇಲಕ್ಕೆ ಏರಿದೆ. ಪ್ರತಿ 100 ಗ್ರಾಂಗೆ 1,600 ರೂಪಾಯಿ ಏರಿಕೆ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ. ಹೀಗೆ ಶುದ್ಧ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 6,91,600 ರೂಪಾಯಿ ಆಗಿದೆ ಇದರ ಜೊತೆ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 69,160 ರೂಪಾಯಿಗೆ ಏರಿಕೆ ಆಗಿದೆ.
ಚಿನ್ನ ಏರಿಕೆ & ಬೆಳ್ಳಿ ಕುಸಿತ!
ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಏರಿಕೆಯನ್ನು ಕಂಡು ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಈಗ 1,500 ರೂಪಾಯಿ ಏರಿಕೆ ಆಗಿದೆ. ಈ ಮೂಲಕ ಪ್ರತಿ 10 ಗ್ರಾಂ ಆಭರಣ ಚಿನ್ನ ಬೆಲೆ ಈಗ 150 ರೂಪಾಯಿ ಏರಿಕೆ ಆಗಿದೆ ಆಭರಣ ಚಿನ್ನ ಬೆಲೆ ಏರಿಕೆ ಬಳಿಕ ಈಗ ಪ್ರತಿ 10 ಗ್ರಾಂಗೆ 63,400 ರೂಪಾಯಿಗೆ ಮಾರಾಟ ಆಗ್ತಿದೆ. ಮತ್ತೊಂದು ಕಡೆ, ಬೆಳ್ಳಿ ಬೆಲೆಯಲ್ಲಿ 250 ರೂಪಾಯಿ ಕುಸಿತ ಕಂಡು 84,000 ರೂಪಾಯಿಗೆ ಮಾರಾಟ ಆಗುತ್ತಿದೆ. ಆಷಾಢ ಮುಗಿದು ಇದೀಗ ಶ್ರಾವಣ ಆರಂಭ ಆಗಿದೆ, ಹೀಗಾಗಿ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಾಣುವ ನಿರೀಕ್ಷೆ ಇದೆ.