ನವದೆಹಲಿ: ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಒಟ್ಟು 13,217 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (RRB) ನಲ್ಲಿ ಮಾತ್ರವೇ 7,972 ಬಹುಪಯೋಗಿ ಕಚೇರಿ ಸಹಾಯಕ (ಗುಮಾಸ್ತ) ಹುದ್ದೆಗಳು ಖಾಲಿ ಇವೆ. ಕ್ಲರ್ಕ್ ಮತ್ತು ಪ್ರೊಬೇಶನರಿ ಆಫೀಸರ್ (PO) ಹುದ್ದೆಗಳಿಗೂ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅವಧಿ:
* ಆನ್ಲೈನ್ ಅರ್ಜಿ ಪ್ರಕ್ರಿಯೆ: ಸೆಪ್ಟೆಂಬರ್ 1 ರಿಂದ ಪ್ರಾರಂಭ
* ಕೊನೆಯ ದಿನಾಂಕ: ಸೆಪ್ಟೆಂಬರ್ 21
* ಪ್ರಿಲಿಮ್ಸ್ ಪರೀಕ್ಷೆ: ನವೆಂಬರ್
* ಮುಖ್ಯ ಪರೀಕ್ಷೆ: ಜನವರಿ–ಫೆಬ್ರವರಿ 2025
ಅಧಿಕೃತ ವೆಬ್ಸೈಟ್: [ibps.in](https://ibps.in)
ಅರ್ಹತೆ:
ಕಚೇರಿ ಸಹಾಯಕ (ಗುಮಾಸ್ತ): ಯಾವುದೇ ವಿಷಯದಲ್ಲಿ ಪದವಿ.
ಜನರಲ್ ಬ್ಯಾಂಕಿಂಗ್ ಆಫೀಸರ್ (ಮ್ಯಾನೇಜರ್): ಶೇ.50 ಅಂಕಗಳೊಂದಿಗೆ ಪದವಿ + 2 ವರ್ಷ ಅನುಭವ.
ಐಟಿ ಆಫೀಸರ್: ಎಲೆಕ್ಟ್ರಾನಿಕ್ಸ್/ಕಂಪ್ಯೂಟರ್ ಸೈನ್ಸ್/ಐಟಿಯಲ್ಲಿ ಶೇ.50 ಅಂಕಗಳೊಂದಿಗೆ ಪದವಿ + 1 ವರ್ಷ ಅನುಭವ.
CA ಅಧಿಕಾರಿ: CA ಪರೀಕ್ಷೆಯಲ್ಲಿ ಉತ್ತೀರ್ಣ + 1 ವರ್ಷ ಅನುಭವ.
ಕಾನೂನು ಅಧಿಕಾರಿ:ಎಲ್ಎಲ್ಬಿ ಪದವಿ (ಶೇ.50 ಅಂಕ) + 2 ವರ್ಷ ಅನುಭವ.
ಖಜಾನೆ ವ್ಯವಸ್ಥಾಪಕ: CA ಅಥವಾ MBA (ಫೈನಾನ್ಸ್) + 1 ವರ್ಷ ಅನುಭವ.
ವಯೋಮಿತಿ
* ಕಚೇರಿ ಸಹಾಯಕ: 18–28 ವರ್ಷ
* ಆಫೀಸರ್ ಸ್ಕೇಲ್ : 18–30 ವರ್ಷ
* ಆಫೀಸರ್ ಸ್ಕೇಲ್ II: 21–32 ವರ್ಷ
* ಆಫೀಸರ್ ಸ್ಕೇಲ್ III: 21–40 ವರ್ಷ
ಅರ್ಜಿ ಶುಲ್ಕ:
* SC/ST/PwBD ಅಭ್ಯರ್ಥಿಗಳು: ₹175
* ಇತರೆ ಅಭ್ಯರ್ಥಿಗಳು: ₹850
For More Updates Join our WhatsApp Group :




